Site icon Vistara News

Emergency Alert: ನಿಮ್ಮ ಮೊಬೈಲ್‌ಗೆ ‘ಎಮರ್ಜೆನ್ಸಿ ಅಲರ್ಟ್’ ಬಂತಾ? ಇದು ಸರ್ಕಾರವೇ ಕಳುಹಿಸಿದ ಸಂದೇಶ!

Message to your smartphone

ನವದೆಹಲಿ: ಆಗಸ್ಟ್ 17, ಗುರುವಾರ ಮಧ್ಯಾಹ್ನ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ(Smartphone) ತುರ್ತು ಎಚ್ಚರಿಕೆ ಸಂದೇಶವೇನಾದರೂ ಬಂತಾ? ಬಂದಿದ್ದರೆ ಗಾಬರಿಯಾಗಬೇಕಾದ ಅಗತ್ಯವಿಲ್ಲ. ಯಾಕೆಂದರೆ, ಈ ತುರ್ತು ಎಚ್ಚರಿಕೆ ಸಂದೇಶವನ್ನು ಭಾರತ ಸರ್ಕಾರವೇ (Indian Government) ಕಳುಹಿಸಿದೆ! ಈ ತುರ್ತು ಎಚ್ಚರಿಕೆ ಸಂದೇಶವು (Emergency Alert) ಎಲ್ಲ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಬಂದಿಲ್ಲ. ಯಾರಿಗೆ ದೊರೆತಿದೆಯೋ ಅವರ ಫೋನ್‌ ಜೋರಾದ ಬೀಪ್‌ನೊಂದಿಗೆergency alert: severe’ ಸಂದೇಶವನ್ನು ಪಡೆದುಕೊಂಡಿದ್ದಾರೆ.

ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ದಯವಿಟ್ಟು, ಈ ಸಂದೇಶವನ್ನು ನಿರ್ಲಕ್ಷಿಸಿ. ಏಕೆಂದರೆ, ನಿಮ್ಮ ಕಡೆಯಿಂದ ಯಾವುದೇ ಕ್ರಮದ ಅಗತ್ಯವಿಲ್ಲ. ಈ ಸಂದೇಶವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಜಾರಿ ಮಾಡಿರುವ TEST Pan-India ತುರ್ತು ಎಚ್ಚರಿಕೆ ವ್ಯವಸ್ಥೆಯಿಂದ ಕಳುಹಿಸಲಾಗಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂಬ ಒಕ್ಕಣಿಕೆ ಫ್ಲ್ಯಾಶ್ ಸಂದೇಶದಲ್ಲಿದೆ. ಈ ರೀತಿಯ ಸಂದೇಶವು ಗುರುವಾರ ಮಧ್ಯಾಹ್ನ 1.35 ಸುಮಾರಿಗೆ ದೇಶದ ಅನೇಕ ಬಳಕೆದಾರರು ಪಡೆದುಕೊಂಡಿದ್ದಾರೆ.

Emergency Alert: ಸರ್ಕಾರವೇಕೆ ಈ ಸಂದೇಶವನ್ನು ಕಳುಹಿಸಿದೆ?

ಭೂಕಂಪ, ಸುನಾಮಿ ಮತ್ತು ಪ್ರವಾಹಗಳಂಥ ನೈಸರ್ಗಿಕ ವಿಕೋಪ ಪರಿಸ್ಥಿತಿಗಳಲ್ಲಿ ಅತ್ಯುತ್ತಮ ಸಿದ್ದತೆಯನ್ನು ಕೈಗೊಳ್ಳುವುದಕ್ಕಾಗಿ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜತೆಗೂಡಿ ಭಾರತ ಸರ್ಕಾರವು ಇಂಥ ಉಪಕ್ರಮಕ್ಕೆ ಮುಂದಾಗಿದೆ. ಅದರ ಭಾಗವಾಗಿಯೇ ಗುರುವಾರ ಕೆಲವು ಬಳಕೆದಾರರಿಗೆ ಈ ತುರ್ತು ಸಂದೇಶವನ್ನು ರವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಜುಲೈ 20ರಂದು ಇದೇ ರೀತಿಯ ತುರ್ತು ಸಂದೇಶವನ್ನು ಕಳುಹಿಸಲಾಗಿತ್ತು.

ಈ ರೀತಿಯ ಪ್ರರೀಕ್ಷೆಗಳನ್ನು ದೇಶದ ವಿವಿಧ ಭಾಗಗಳಲ್ಲಿ ಕಾಲ ಕಾಲಕ್ಕೆ ಮಾಡಲಾಗುತ್ತದೆ. ತುರ್ತು ಸಂದೇಶಗಳ ಪ್ರಸಾರಕ್ಕೆ ಸಂಬಂಧಿಸಿದಂತೆ ಮೊಬೈಲ್ ಆಪರೇಟರ್ಸ್ ಮತ್ತು ಟೆಲಿಕಾಂ ಸಚಿವಾಲಯ ಆರಂಭಿಸಿರುವ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್‌ನ ಸಾಮರ್ಥ್ಯ ಮತ್ತು ದಕ್ಷತೆಯನ್ನು ಪರೀಕ್ಷಿಸಲು ಕೈಗೊಳ್ಳಲಾಗುತ್ತಿದೆ.

IRCTC Scam Alert: ರೈಲ್ವೆ ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳಿ ಎಂಬ ಲಿಂಕ್ ಬಂದಿದೆಯಾ?

ಭಾರತೀಯ ರೈಲ್ವೆ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ(IRCTC) ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದು, ಐಆರ್‌ಸಿಟಿಸಿ (IRCTC Rail Connect App) ನಕಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಫಿಶಿಂಗ್ ಲಿಂಕ್ (Fishing Link) ಹರಿದಾಡುತ್ತಿದೆ ತಿಳಿಸಿದೆ. ಈ ಆ್ಯಪ್ ಮೂಲಕ ಬಳಕೆದಾರರ ಮಾಹಿತಿಯನ್ನು ಕದಿಯುವ ಸಾಧ್ಯೆತಗಳಿರುತ್ತವೆ. ಹಾಗಾಗಿ ಎಚ್ಚರಿಕೆಯನ್ನು ವಹಿಸಬೇಕು ಎಂದು ಐಆರ್‌ಸಿಟಿಸಿ ಎಚ್ಚರಿಕೆಯನ್ನು ನೀಡಿದೆ.

ಐಆರ್‌ಸಿಟಿಸಿ ಅಸಲಿ ಆ್ಯಪ್‌ನಂತೆ ಕಾಣುವ ಈ ಆ್ಯಪ್ ಮೂಲಕ ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿರುವವರನ್ನು ಮೊಸಗೊಳಿಸಲು ಬಳಸಲಾಗುತ್ತಿದೆ. ಸಾಮಾನ್ಯ ಬಳಕೆದಾರರಿಗೂ ಇದರಿಂದ ಅಪಾಯವಿದ್ದು, ಅಂಥ ಲಿಂಕ್ ಕ್ಲಿಕ್ ಮಾಡಿ ನಕಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಾರದು ಎಂದು ಐಆರ್‌ಟಿಸಿ ಎಚ್ಚರಿಕೆಯನ್ನು ನೀಡಿದೆ.

ಈ ಸುದ್ದಿಯನ್ನೂ ಓದಿ: Bitcoin Scam: ಬಿಟ್‌ಕಾಯಿನ್ ಹಗರಣ ತನಿಖೆಗೆ ಇಸ್ರೇಲ್ ನೆರವು ಕೇಳಲು ಮುಂದಾದ ಎಸ್ಐಟಿ ಟೀಂ

ಐಆರ್‌ಸಿಟಿಸಿ ರೈಲ್ ಕೆನೆಕ್ಟ್‌ ಆ್ಯಪ್‌ನ ಫೇಕ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಪ್ರೇರೇಪಿಸುವ ಲಿಂಕ್‌ ಅನ್ನು ಹಂಚಿಕೆ ಮಾಡಲಾಗುತ್ತಿದೆ. ಈ ಮೂಲಕ ಜನರನ್ನು ಮೋಸ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಳಕೆದಾರರ ರಕ್ಷಣೆ ಮಾಡುವುದಕ್ಕಾಗಿ ಐಆರ್‌ಸಿಟಿಸಿ ತ್ವರಿತ ಕ್ರಮವನ್ನು ತೆಗೆದುಕೊಂಡಿದೆ. ಈ ಕುರಿತು ಎಚ್ಚರಿಕೆಯನ್ನು ರವಾನಿಸಿದೆ. ಸೈಬರ್ ಕ್ರೈಮ್‌ನ ಈ ವಂಚನೆಯ ಬಲೆಗೆ ಬೀಳದಂತೆ ತನ್ನ ಜನರಿಗೆ ತೋರಿಸಿದೆ.

ಐಆರ್‌ಸಿಟಿಸಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಎಚ್ಚರಿಕೆಯ ಸಂದೇಶವನ್ನು ಷೇರ್ ಮಾಡಿಕೊಳ್ಳಲಾಗಿದೆ. ಈ ವಂಚನೆಯುಕಾನೂನುಬಾಹಿರ ಉದ್ದೇಶಗಳಿಗಾಗಿ ವ್ಯಕ್ತಿಗಳನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ನಿಜವಾದ ರೈಲ್ ಕನೆಕ್ಟ್ ಮೊಬೈಲ್ ಅಪ್ಲಿಕೇಶನ್‌ಗಳು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಂತಹ ವಿಶ್ವಾಸಾರ್ಹ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರತ್ಯೇಕವಾಗಿ ಲಭ್ಯವಿವೆ ಎಂದು ಐಆರ್‌ಸಿಟಿಸಿ ಹೇಳಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version