Site icon Vistara News

Lifebouy Robot | ಬೀಚ್‌ಗಳಲ್ಲಿ ಮುಳುಗುವವರ ರಕ್ಷಣೆಗೆ ಬರಲಿದೆ ರೋಬೋಟ್‌, ಹೇಗಿದರ ಕಾರ್ಯ?

Robo

ಅಮರಾವತಿ: ಸಮುದ್ರದಲ್ಲಿ, ಅದರಲ್ಲೂ ಬೀಚ್‌ಗಳಲ್ಲಿ ಪ್ರವಾಸಿಗರು ನೀರಿಗೆ ಇಳಿದಾಗ ಮುಳುಗಿ ಸಾಯುವವರ ಸಂಖ್ಯೆ ಜಾಸ್ತಿಯೇ ಇದೆ. ಜನರನ್ನು ರಕ್ಷಿಸಲು ಅಲ್ಲಿನ ಸಿಬ್ಬಂದಿ ಇದ್ದರೂ ಕೆಲವೊಮ್ಮೆ ದುರಂತಗಳು ಸಂಭವಿಸುತ್ತವೆ. ಆದರೆ, ಇನ್ನು ಮುಂದೆ ಬೀಚ್‌ಗಳಲ್ಲಿ ಅಪಾಯಕ್ಕೆ ಸಿಲುಕುವವರನ್ನು ರೋಬೋಟ್‌ಗಳೇ (Lifebouy Robot) ರಕ್ಷಿಸಲಿವೆ.

ಆಂಧ್ರಪ್ರದೇಶದ ಗ್ರೇಟರ್‌ ವಿಶಾಖಪಟ್ಟಣಂ ಮುನ್ಸಿಪಲ್‌ ಕಾರ್ಪೊರೇಷನ್‌ (ಜಿವಿಎಂಸಿ)ಯು ಬೀಚ್‌ಗಳಲ್ಲಿ ಸಂಕಷ್ಟಕ್ಕೆ ಸಿಲುಕುವವರನ್ನು ರಕ್ಷಿಸುವ ದಿಸೆಯಲ್ಲಿ ರೋಬೋಟ್‌ ತಂತ್ರಜ್ಞಾನ ಬಳಸಿಕೊಳ್ಳಲು ಮುಂದಾಗಿದೆ. “ನೀರಿನ ಸೆಳವಿಗೆ ಸಿಲುಕಿದವರನ್ನು ರಕ್ಷಿಸಲು ರೋಬೋಟ್‌ಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಆರ್‌ಕೆ ಬೀಚ್‌ನಲ್ಲಿ ಪ್ರಯೋಗ ನಡೆಸಲಾಗಿದೆ. ಇವುಗಳಿಗೆ ಲೈಫ್‌ಬಾಯ್‌ ರೋಬೋಟ್‌ ಎಂದು ಹೆಸರಿಡಲಾಗಿದೆ” ಎಂಬುದಾಗಿ ವಿಶಾಖಪಟ್ಟಣಂ ಜಿಲ್ಲಾಧಿಕಾರಿ ಎ.ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಸಮುದ್ರದಲ್ಲಿ ರೋಬೋಟ್‌.

ಹೇಗೆ ಜನರ ರಕ್ಷಣೆ?

“ವೈಜಾಗ್‌ ಸೇಫ್‌ ಆರ್ಗನೈಸೇಷನ್‌ ಹಾಗೂ ಭಾರತೀಯ ನೌಕಾಪಡೆಯ ಸಹಯೋಗದಲ್ಲಿ ರೋಬೋಟ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವು ರಿಮೋಟ್‌ ಕಂಟ್ರೋಲ್‌ ಇರುವ ರೋಬೋಟ್‌ಗಳಾಗಿದ್ದು, ಯಾರಾದರೂ ನೀರಿನಲ್ಲಿ ಬಿದ್ದರೆ ಅವರನ್ನು ರಕ್ಷಿಸುತ್ತವೆ. ಇವು ಬ್ಯಾಟರಿಚಾಲಿತ ರೋಬೋಟ್‌ಗಳಾಗಿದ್ದು, ನೀರಿನಲ್ಲಿ ಮುಳುಗುತ್ತಿದ್ದವರನ್ನು ರಕ್ಷಿಸಿ, ಹೊರಗೆ ತರಲಿವೆ” ಎಂದು ಜಿವಿಎಂಸಿ ಆಯುಕ್ತ ಜಿ.ಲಕ್ಷ್ಮೀಶ ತಿಳಿಸಿದರು. ಪ್ರಯೋಗ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಬೀಚ್‌ಗಳಲ್ಲಿ ಲೈಫ್‌ಬಾಯ್‌ ರೋಬೋಟ್‌ಗಳನ್ನು ನಿಯೋಜಿಸುವ ಯೋಜನೆ ಇದೆ.

ಇದನ್ನೂ ಓದಿ | Viral news | ಫ್ರೀಜರ್‌ ತುಂಡಿನಲ್ಲಿ ತೇಲುತ್ತಾ 11 ದಿನ ಸಮುದ್ರದಲ್ಲಿ ಬದುಕುಳಿದ!

Exit mobile version