ಬೆಂಗಳೂರು: ಭಾರತದ ಮುಂಚೂಣಿ ದ್ವಿ ಚಕ್ರ ವಾಹನ ತಯಾರಿಕ ಕಂಪನಿಯಾಗಿರುವ ಹೀರೊ ಮೋಟೊಕಾರ್ಪ್ ತನ್ನ ಐಕಾನಿಕ್ ಬೈಕ್ ಸ್ಪ್ಲೆಂಡರ್‌ನ ಹೊರ ಅವತರಣಿಕೆಯಾಗಿರುವ SUPER SPLENDOR ಅನ್ನು ಸೋಮವಾರ ಭಾರತದ ರಸ್ತೆಗೆ ಇಳಿಸಿದೆ. ಇದು Canvas Black ಎಡಿಷನ್ ಬೈಕ್ ಆಗಿದ್ದು, ಅತ್ಯಾಕರ್ಷಕ ನೋಟದೊಂದಿಗೆ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. ಪ್ರೀಮಿಯಮ್ ವಿನ್ಯಾಸ ಹಾಗೂ ಸುಧಾರಿತ ತಂತ್ರಜ್ಞಾನದೊಂದಿಗೆ ಬಂದಿರುವ ಈ ಬೈಕ್ ಸೂಪರ್- ಪವರ್, ಸೂಪರ್ ಮೈಲೇಜ್ ಹಾಗೂ ಸೂಪರ್- ಕಂಫರ್ಟ್‌ನ ಭರವಸೆಯನ್ನು ನೀಡುತ್ತಿದೆ.
ಡಿಜಿಟಲ್ ಅನಲಾಗ್ ಕ್ಲಸ್ಟರ್, ಇಂಟೆಗ್ರೇಟೆಡ್ ಯುಎಸ್‌ಬಿ ಚಾರ್ಜರ್ ಹಾಗೂ ಸೈಡ್ ಸ್ಟಾಂಡ್ ಎಂಜಿನ್ ಕಟ್‌ಆಫ್ ಫೀಚರ್‌ಗಳನ್ನು ಹೊಂದಿರುವ SUPER SPLENDOR Canvas Black ಲೀಟರ್ ಪೆಟ್ರೋಲ್‌ಗೆ ೬೦ರಿಂದ ೬೮ ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ.
UPER SPLENDOR ಡಿಸ್ಕ್ ಹಾಗೂ ಡ್ರಮ್ ಬ್ರೇಕ್ ಅವೃತ್ತಿಯಲ್ಲಿ ಲಭ್ಯವಿದೆ. ಡ್ರಮ್ ಆವೃತ್ತಿಯ ಎಕ್ಸ್‌ಶೋ ರೂಮ್ ಬೆಲೆ 77,430 ರೂಪಾಯಿ ಹಾಗೂ ಡಿಸ್ಕ್ ಆವೃತ್ತಿಗೆ 81,330 ರೂಪಾಯಿ ಎಂದು ಕಂಪನಿ ತಿಳಿಸಿದೆ. ಎಲ್ಲ ಬೈಕ್‌ಗಳು ಐದು ವರ್ಷಗಳ ವಾರಂಟಿ ಹೊಂದಿದೆ ಎಂದು ಹೀರೊ ಮೋಟೋಕಾರ್ಪ್ ತಿಳಿಸಿದೆ.
ವಿಶೇಷತೆಗಳೇನು?
ಡಿಜಿಟಲ್ ಅನಲಾಗ್ ಕ್ಲಸ್ಟರ್, ಇಂಟಗ್ರೇಟೆಡ್ ಯುಎಸ್‌ಬಿ ಚಾರ್ಜರ್, ಸೂಪರ್ ಸ್ಪ್ಲೆಂಡರ್ ಬ್ಲ್ಯಾಕ್ ಎಡಿಷನ್‌ನ ಪ್ರಮುಖ ವಿಶೇಷತೆಗಳಾಗಿವೆ.
ಸೂಪರ್ ಸ್ಪ್ಲೆಂಡರ್‌ನಲ್ಲಿ 125 ಸಿಸಿ ಸಾಮರ್ಥ್ಯದ ಏರ್ ಕೂಲ್ಡ್ ೪ ಸ್ಟ್ರೋಕ್ ಎಂಜಿನ್ ಇದ್ದು, ೭೫೦೦ ಆರ್‌ಪಿಎಂನಲ್ಲಿ 10.7 BHP ಪವರ್ ಉತ್ಪಾದಿಸಿದರೆ, 6000 ಆರ್‌ಪಿಎಂನಲ್ಲಿ 10.6 Nm ಟಾರ್ಕ್ಯೂ ಬಿಡುಗಡೆ ಮಾಡುತ್ತದೆ. ಫ್ಯೂಯಲ್ ಇಂಜೆಕ್ಷನ್ ಸಿಸ್ಟಮ್, ಮಲ್ಟಿಪ್ಲೇಟ್ ಕ್ಲಚ್ ಹಾಗೂ ಹೊಸ ಮಾದರಿಯ ಗೇರ್ ಬಾಕ್ಸ್ ನಗರ ಹಾಗೂ ಹೈವೆಗಳಲ್ಲಿ ಒತ್ತಡ ರಹಿತ ಸವಾರಿ ಅನುಭವ ನೀಡುತ್ತದೆ. ಮುಂಬದಿಯಲ್ಲಿ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ಇದ್ದರೆ ಹಿಂಬದಿಯಲ್ಲಿ ೫ ಹಂತದ ಹೊಂದಾಣಿಕೆ ಮಾಡಬಲ್ಲ ಶಾಕ್ ಅಬ್ಸಾರ್ಬರ್ ಹೊಂದಿದೆ.
ಹಿಂಬದಿ ಹಾಗೂ ಮುಂಬದಿಯ ಪ್ರಯಾಣಿಕರಿಗೆ ಅನುಕೂಲಕ ಮಾಡಿಕೊಡುವ ಉದ್ದೇಶದಿಂದ ಸೈಡ್ ಸ್ಟಾಂಡ್ ಇಂಡಿಕೇಷನ್ ಹಾಗೂ ಸೈಡ್ ಸ್ಟಾಂಡ್ ಎಂಜಿನ್ ಕಟ್ ಆಫ್ ವ್ಯವಸ್ಥೆ ನೀಡಲಾಗಿದೆ.
ಇದನ್ನೂ ಓದಿ | Maruti Suzuki Grand Vitara ಅನಾವರಣ, ಸೆಪ್ಟೆಂಬರ್ನಲ್ಲಿ ಮಾರುಕಟ್ಟೆಗೆ