ನವದೆಹಲಿ : ಭಾರತದ ಮುಂಚೂಣಿ ಸ್ಕೂಟರ್ ತಯಾರಿಕಾ ಸಂಸ್ಥೆಯಾಗಿರುವ ಹೋಂಡಾ ಮೋಟಾರ್ ಸೈಕಲ್ & ಸ್ಕೂಟರ್ ಇಂಡಿಯಾ ತನ್ನ ಹೊಚ್ಚ ಹೊಸ 2022 ʻಆಕ್ಟಿವಾ ಪ್ರೀಮಿಯಂ ಆವೃತ್ತಿʼಯನ್ನು ಆಗಸ್ಟ್ ೧೮ರಂದು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಈಗಾಗಲೇ ಮಾರುಕಟ್ಟೆಯಲ್ಲಿರುವ ಹೋಂಡಾ ಆಕ್ಟಿವಾ DLX ಮತ್ತು STD ಆವೃತ್ತಿಯ ಸುಧಾರಿತ ಆವೃತ್ತಿಯ ಸ್ಕೂಟರ್. ಹೊಸ ಮಾದರಿಯಲ್ಲಿ ಹಲವಾರು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದ್ದು, 75,400 ರೂಪಾಯಿ (ಎಕ್ಸ್ ಶೋರೂಮ್) ಬೆಲೆ ನಿಗದಿ ಮಾಡಲಾಗಿದೆ.
ಡಿಎಲ್‌ಎಕ್ಸ್ ಅವೃತ್ತಿಯ ಪ್ರೀಮಿಯಮ್ ಎಡಿಷನ್ ಸದ್ಯ ಇರುವ ಬೆಲೆಗಿಂತ ೧೦೦೦ ರೂಪಾಯಿ ಹೆಚ್ಚಾದರೆ, STD ಆವೃತ್ತಿಗೆ ೩೦೦೦ ರೂಪಾಯಿಗಳು ಹೆಚ್ಚಿಸಲಾಗಿದೆ. ಇದು ಹೋಂಡಾ ಆಕ್ಟಿವಾ ೬Gಯ ಟಾಪ್ ಎಂಡ್ ಆವೃತ್ತಿಯಾಗಿದೆ. ಹೋಂಡಾ ಮೋಟಾರ್ ಸೈಕಲ್ & ಸ್ಕೂಟರ್ ಇಂಡಿಯಾ ತನ್ನ ವೆಬ್‌ಸೈಟ್‌ನಲ್ಲಿ ಸ್ಕೂಟರ್ ಬಿಡುಗಡೆಯ ಮಾಹಿತಿಯನ್ನು ಪ್ರಕಟಿಸಿದೆ.
ಪ್ರೀಮಿಯಮ್ ಎಡಿಷನ್ ಹೋಂಡಾ ಆಕ್ಟಿವಾ ಸ್ಕೂಟರ್‌ಗಳು ಹೊಸ ಬಣ್ಣಗಳೊಂದಿಗೆ ಮಾರುಕಟ್ಟೆಗೆ ಇಳಿಯಲಿದೆ. ಮಾರ್ಷಲ್ ಗ್ರಿನ್ ಮೆಟಾಲಿಕ್, ಮ್ಯಾಟ್ ಸಾಂಗ್ರಿಯಾ ರೆಡ್ ಮೆಟಾಲಿಕ್, ಪರ್ಲ್ ಸಿರೆನ್ ಬ್ಲೂ ಬಣ್ಣದೊಂದಿಗೆ ಸ್ಕೂಟರ್ ಲಭ್ಯವಿದೆ. ಅಂತೆಯೇ ಎಲ್ಲ ಸ್ಕೂಟರ್‌ಗಳಲ್ಲಿ ಗೋಲ್ಡನ್ ಅಸೆಂಟ್ಸ್ ನೀಡಲಾಗಿದೆ.
ಎಂಜಿನ್ ಮತ್ತು ಫೀಚರ್‌ಗಳಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ. ಹೀಗಾಗಿ ಈಗ ಮಾರುಕಟ್ಟೆಯಲ್ಲಿರುವ ಸ್ಕೂಟರ್‌ಗಳ ರೀತಿಯಲ್ಲೇ ಅನಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನೊಂದಿಗೆ ಲಭ್ಯವಿದೆ. ಅದೇ ರೀತಿ ಎಲ್‌ಇಡಿ ಹೆಡ್‌ಲ್ಯಾಂಪ್ ಹಾಗೂ ಎಕ್ಸಟರ್ನಲ್ ಫ್ಯಯಲ್ ಫಿಲ್ಲರ್ ಕ್ಯಾಪ್ ಫೀಚರ್ ಕೂಡ ಮುಂದುವರಿದಿದೆ.
ಸ್ಕೂಟರ್‌ನಲ್ಲಿ ೧೦೯. ೫೧ ಸಿಸಿ ಸಾಮರ್ಥ್ಯದ ಫ್ಯಾನ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಇದೆ. ಇದು ೭.೬೮ ಬಿಎಚ್‌ಪಿ ಪವರ್ ಹಾಗೂ ೮.೮೪ ಎನ್‌ಎಮ್ ಟಾರ್ಕ್ಯೂ ಬಿಡುಗಡೆ ಮಾಡಬಲ್ಲುದು. ಫ್ಯುಯಲ್ ಇಂಜೆಕ್ಟರ್ ಹಾಗೂ ಸೈಲೆಂಟ್ ಸ್ಟಾರ್ಟ್‌ಗಾಗಿ ಇಎಸ್‌ಪಿ ತಂತ್ರಜ್ಞಾನವನ್ನು ಹೊಂದಿದೆ.
ಟ್ಯೂಬ್‌ಲೆಸ್ ಟೈರ್, ಸ್ಟೀಲ್ ರಿಮ್‌ಗಳು, ೧೩೦ ಎಂಎಂ ಡ್ರಮ್ ಬ್ರೇಕ್‌ಗಳು, ಟೆಲಿಸ್ಕೋಪಿಕ್ ಸಸ್ಪೆನ್ಷನ್ ಮುಂಬದಿಯಲ್ಲಿದ್ದರೆ, ಹಿಂಬದಿಯಲ್ಲಿ ೩ ಸ್ಟೆಪ್ ಅಜಸ್ಟಬಲ್ ಸ್ಪ್ರಿಂಗ್ ಲೋಡೆಡ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ಇದೆ. ೧೦೬ ಕೆ. ಜಿ ಭಾರವಿರುವ ಸ್ಕೂಟರ್‌ನಲ್ಲಿ ೫.೩ ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಇದೆ.
ಇದನ್ನೂ ಓದಿ | Scorpio Classic : ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಬಿಡುಗಡೆ, ಹೊಸ ಫೀಚರ್‌ಗಳ ಸೇರ್ಪಡೆ