ನವ ದೆಹಲಿ : ಹೋಂಡಾ ಮೋಟಾರ್‌ಸೈಕಲ್ ಆಂಡ್ ಸ್ಕೂಟರ್ ಕಂಪನಿಯ ಹೊಸ ಸೀಮಿತ ಆವೃತ್ತಿಯ ಡಿಯೊ ಸ್ಕೂಟರ್ ಬಿಡುಗಡೆ ಮಾಡಿದೆ. ಹೊಂಡಾ ಡಿಯೊ ಸ್ಪೋರ್ಟ್ಸ್ ಎಂದು ಹೆಸರಿಟ್ಟಿದ್ದು, ಸ್ಟಾಂಡರ್ಡ್ ವೇರಿಯೆಂಟ್‌ಗೆ ೬೮, ೩೧೭ ರೂಪಾಯಿ ಹಾಗೂ ಡಿಲಕ್ಸ್ ವೇರಿಯಂಟ್‌ಗೆ ೭೩,೩೧೭ ರೂಪಾಯಿ (ಎಕ್ಸ್‌ಶೋರೂಮ್) ಬೆಲೆ ನಿಗದಿ ಮಾಡಿದೆ.
ಆಕರ್ಷಕ ಗ್ರಾಫಿಕ್ಸ್ ನೊಂದಿಗೆ ಮತ್ತು ಸ್ಪೋರ್ಟಿ ರೆಡ್ ರಿಯರ್ ಸಸ್ಪೆನ್ಷನ್ ಮರುವಿನ್ಯಾಸಗೊಳಿಸಿರುವ ಹೊಸ ಡಿಯೊ ಸ್ಪೋರ್ಟ್ಸ್ ಎರಡು ಹೊಸ ಬಣ್ಣಗಳಲ್ಲಿ ಲಭ್ಯವಿದೆ. ಸ್ಟ್ರಾಂಟಿಯಮ್ ಸಿಲ್ವರ್ ಮೆಟಾಲಿಕ್ ಹಾಗೂ ಸ್ಪೋರ್ಡ್ ರೆಡ್ ಬಣ್ಣಗಳಲ್ಲಿ ಹೊಸ ಸ್ಕೂಟರ್ ಮಾರುಕಟ್ಟೆಗೆ ಇಳಿದಿದೆ.
ಹೊಸ ಮಾದರಿಯ ಡಿಯೊ ಸ್ಕೂಟರ್‌ಗಳಿಗೆ ಆನ್‌ಲೈನ್ ಅಥವಾ ಆಫ್‌ಲೈನ್ ಬುಕಿಂಗ್ ಮಾಡಬಹುದಾಗಿದೆ. ಸ್ಕೂಟರ್‌ನಲ್ಲಿ ಗ್ರಾಫಿಕ್ಸ್ ಹಾಗೂ ಸ್ಪೋರ್ಟ್ಸ್ ರೆಡ್ ರಿಯರ್ ಸಸ್ಪೆನ್ಷನ್ ಹೊಂದಿದೆ. ಉಳಿದಂತೆ ಸಾಮಾನ್ಯ ಮಾದರಿಯ ಡಿಯೊ ಸ್ಕೂಟರ್‌ನಲ್ಲಿ ಲಭ್ಯವಿರುವ ಫೀಚರ್‌ಗಳನ್ನು ಹೊಂದಿದೆ.
ಇದನ್ನೂ ಓದಿ | Hero MotoCorp : ಮರುಮಾರಾಟಕ್ಕೂ ವೇದಿಕೆ ಕಲ್ಪಿಸಿದ ಹೀರೊ ಮೊಟೊಕಾರ್ಪ್