Site icon Vistara News

HP Smart Tank Printers | ಸ್ಮಾರ್ಟ್‌ ಟ್ಯಾಂಕ್ ಪ್ರಿಂಟರ್ಸ್ ಲಾಂಚ್ ಮಾಡಿದ ಎಚ್‌ಪಿ, ಬೆಲೆ ಎಷ್ಟು?

HP Smart Tank Printers

ಬೆಂಗಳೂರು: ಗೃಹ ಬಳಕೆ, ಅತಿ ಸಣ್ಣ ಮತ್ತು ಸಣ್ಣ ವ್ಯಾಪಾರಸ್ಥರ ದೈನಂದಿನ ಪ್ರಿಂಟೌಟ್ ಗಳ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಎಚ್ ಪಿ ಇಂಡಿಯಾ ಇಂದು ತನ್ನ ಹೊಸ ಶ್ರೇಣಿಯ ಸ್ಮಾರ್ಟ್ ಟ್ಯಾಂಕ್ ಪ್ರಿಂಟರ್‌ಗಳನ್ನು (HP Smart Tank Printers) ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇಂದಿನ ಹೈಬ್ರಿಡ್ ಜಗತ್ತಿನಲ್ಲಿ ಭಾರತದಲ್ಲಿರುವ ಮನೆ ಮತ್ತು ಸಣ್ಣ ವ್ಯಾಪಾರಸ್ಥರು ತಮ್ಮ ಡಿಜಿಟಲ್ ರೂಪಾಂತರಕ್ಕಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಈ ದಿಸೆಯಲ್ಲಿ ಅವರು ಕೈಗೆಟುಕುವ ದರ, ಬಳಕೆ ಸ್ನೇಹಿ ಮತ್ತು ಸ್ಮಾರ್ಟ್ ಆದ ಪ್ರಿಂಟರ್ ಪರಿಹಾರಗಳನ್ನು ಬಯಸುತ್ತಿದ್ದಾರೆ.

ಬೆಳೆಯುತ್ತಿರುವ ಉದ್ಯಮಿಗಳು ಮತ್ತು ವ್ಯವಹಾರಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಎಚ್ ಪಿ ಸ್ಮಾರ್ಟ್ ಟ್ಯಾಂಕ್ ಉನ್ನತೀಕರಿಸಿದ ಗ್ರಾಹಕ ಅನುಭವವನ್ನು ನೀಡುತ್ತದೆ. ಇದರೊಂದಿಗೆ ತಡೆರಹಿತವಾದ ಸೆಟಪ್, ಸ್ಮಾರ್ಟ್ ವೈಶಿಷ್ಟ್ಯತೆಗಳನ್ನು ಹಾಗೂ ಉತ್ತಮ ಸಂಪರ್ಕದ ಜೊತೆಗೆ ಗ್ರಾಹಕರಿಗೆ ಉತ್ತಮ ಬಳಕೆದಾರ ಸ್ನೇಹಿ ಅನುಭವವನ್ನು ನೀಡುತ್ತದೆ. ಇದರಲ್ಲಿ ಸೆಲ್ಫ್ ಹೀಲಿಂಗ್ ವೈಫೈ, ಸ್ಮಾರ್ಟ್ ಅಪ್ಲಿಕೇಶನ್ ಹಾಗೂ ಸ್ಮಾರ್ಟ್ ಅಡ್ವಾನ್ಸ್ ನಂತಹ ವಿನೂತನವಾದ ವೈಶಿಷ್ಟ್ಯತೆಗಳಿವೆ. ಈ ಎಚ್ ಪಿ ಯ ಹೊಸ ಇಂಕ್ ಪ್ರಿಂಟರ್ ನಿಂದ 18,000 ಬ್ಲ್ಯಾಕ್ ಪುಟಗಳನ್ನು ಅಥವಾ 6,000 ಕಲರ್ ಪೇಜ್ ಗಳ ಪ್ರಿಂಟೌಟ್ ತೆಗೆದುಕೊಳ್ಳಬಹುದಾಗಿದೆ.

ಈ ಬಗ್ಗೆ ಮಾತನಾಡಿದ ಎಚ್ ಪಿ ಇಂಡಿಯಾ ಮಾರ್ಕೆಟ್ ನ ಪ್ರಿಂಟಿಂಗ್ ಸಿಸ್ಟಮ್ಸ್ ನ ಸೀನಿಯರ್ ಡೈರೆಕ್ಟರ್ ಸುನೀಶ್ ರಾಘವನ್ ಅವರು, “ಭಾರತದ ಆರ್ಥೀಕತೆಯ ಪ್ರಗತಿಗೆ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು ಸಹಕಾರಿಯಾಗಿವೆ. ಈ ಕ್ಷೇತ್ರದ ಉದ್ದಿಮೆಗಳು ದೇಶದ ಜಿಡಿಪಿಗೆ ಶೇ.30 ರಷ್ಟು ಕೊಡುಗೆ ನೀಡುತ್ತಿವೆ. ಎಂಎಸ್ಎಂಇಗಳು ದೇಶದ ಭವಿಷ್ಯದ ಬಗ್ಗೆ ಆಶಾವಾದಿಯಾಗಿವೆ ಮತ್ತು ಸ್ಪರ್ಧಾತ್ಮಕವಾದ ಪ್ರಯೋಜನವನ್ನು ನೀಡುವ ಸ್ಮಾರ್ಟ್ ತಂತ್ರಜ್ಞಾನದ ಪರಿಹಾರಗಳನ್ನು ಸದಾ ಹುಡುಕುತ್ತಿರುತ್ತವೆ. ಇಂತಹ ಉದ್ದಿಮೆಗಳಿಗೆ ನಮ್ಮ ಹೊಸ ಸ್ಮಾರ್ಟ್ ಟ್ಯಾಂಕ್ ಪ್ರಿಂಟರ್ ಗಳು ಸಹಕಾರಿಯಾಗಲಿವೆ’’ ಎಂದರು.

ಈ ಹೊಸ ಸ್ಮಾರ್ಟ್ ಟ್ಯಾಂಕ್ ಅನ್ನು ವಿಶೇಷವಾಗಿ ಸಣ್ಣ ವ್ಯವಹಾರಗಳು, ಉದ್ದಿಮೆಗಳು ಮತ್ತು ಮನೆಯಲ್ಲೇ ಕುಳಿತು ಹೆಚ್ಚು ಹೆಚ್ಚು ಪ್ರಿಂಟ್ ತೆಗೆಯಲು, ಹೆಚ್ಚು ಸ್ಮಾರ್ಟರ್ ಮತ್ತು ಕೈಗೆಟುಕುವ ದರದಲ್ಲಿ ಪ್ರಿಂಟಿಂಗ್ ಅನುಭವವನ್ನು ಬಯಸುವವರಿಗೆಂದೇ ವಿನ್ಯಾಸಗೊಳಿಸಲಾಗಿದೆ’’ ಎಂದು ಅವರು ಹೇಳಿದರು.

ಹೊಸ ಎಚ್ ಪಿ ಸ್ಮಾರ್ಟ್ ಟ್ಯಾಂಕ್ ಪ್ರಿಂಟರ್ ಶ್ರೇಣಿಯ ಪ್ರಮುಖ ಪ್ರಯೋಜನಗಳು
| ಅತ್ಯುತ್ತಮ ದರ್ಜೆಯ ಎಚ್ ಪಿ ಸ್ಮಾರ್ಟ್ ಅಪ್ಲಿಕೇಶನ್ ದೈನಂದಿನ ಪ್ರಿಂಟ್, ಸ್ಕ್ಯಾನ್, ಜೆರಾಕ್ಸ್ ಮತ್ತು ಫ್ಯಾಕ್ಸ್ ಕಾರ್ಯಚಟುವಟಿಕೆಗಳನ್ನು ನಡೆಸಲು ಸೂಕ್ತ ಮಾರ್ಗದರ್ಶನ ನೀಡುವ ಬಟನ್ ಗಳನ್ನು ಹೊಂದಿದೆ.
| ಐಡಿಗಳನ್ನು ಸ್ವಯಂಚಾಲಿತವಾಗಿ ಪತ್ತೆ ಮಾಡುತ್ತದೆ ಮತ್ತು ಐಡಿ ಕಾಪಿ ಬಟನ್ ನೊಂದಿಗೆ ಪ್ರಿಂಟ್ ಅನ್ನು ನೀಡುತ್ತದೆ.
| ಸೆಲ್ಫ್ ಹೀಲಿಂಗ್ ವೈಫೈ ಇದೆ ಮತ್ತು ಸ್ಮಾರ್ಟ್ ಆ್ಯಪ್ ಮತ್ತು ಸ್ಮಾರ್ಟ್ ಅಡ್ವಾನ್ಸ್ ನೊಂದಿಗೆ ಅತ್ಯುತ್ತಮ ಮೊಬಿಲಿಟಿಯನ್ನು ನೀಡುತ್ತದೆ. ಈ ಎರಡು ವೈಶಿಷ್ಟ್ಯತೆಗಳಿಂದಾಗಿ ಅತ್ಯಂತ ವೇಗವಾಗಿ ಮತ್ತು ಹೆಚ್ಚು ವಿಶ್ವಾಸಾರ್ಹವಾದ ಸಂಪರ್ಕಗಳನ್ನು ಪಡೆಯುತ್ತದೆ.
| ಇಂದಿನ ಕುಟುಂಬಗಳು ತಮ್ಮ ಮನೆಯಲ್ಲಿರುವ ಸೌಲಭ್ಯಗಳನ್ನು ಬಳಸಿಕೊಂಡು ಕೆಲಸ ಮಾಡುವುದನ್ನು ಹಾಗೂ ಕಲಿಯುವುದನ್ನು ಮುಂದುವರಿಸುವ ಸಲುವಾಗಿ ಸೂಕ್ಷ್ಮ ಮಾಹಿತಿಗಳನ್ನು ರಕ್ಷಿಸಿಕೊಳ್ಳಲು ಅನುಕೂಲವಾಗುವ HP Wolf Essential Security ಸೌಲಭ್ಯವೂ ಇದರಲ್ಲಿದೆ.
| ಕೈಗೆಟುಕುವ ದರ ಹಾಗೂ ಹೆಚ್ಚಿನ ಪ್ರಮಾಣದ ಪ್ರಿಂಟ್ ಗಳ ಅಗತ್ಯತೆಗಳನ್ನು ಪೂರೈಸುವ ದಿಸೆಯಲ್ಲಿ ಈ ಸ್ಮಾರ್ಟ್ ಟ್ಯಾಂಕ್ ಶ್ರೇಣಿಯ ಪ್ರಿಂಟರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ವೆಚ್ಚ ಪರಿಣಾಮಕಾರಿಯಾಗಿದ್ದು ಕಲರ್ ಮತ್ತು ಮೋನೋ ಪ್ರಿಂಟಿಂಗ್ ಅನ್ನು ನೀಡುತ್ತದೆ.
| 18000 ಬ್ಲ್ಯಾಕ್ ಅಥವಾ 6,000 ಕಲರ್ ಪ್ರಿಂಟ್ ಗಳನ್ನು ತೆಗೆಯುವ ಸಾಮರ್ಥ್ಯವನ್ನು ಇದು ಹೊಂದಿದೆ.
| ಸುಸ್ಥಿರವಾದ ವಿನ್ಯಾಸ. ಶೇ.45 ಪೋಸ್ಟ್ ಕನ್ಸೂಮರ್ ರೀಸೈಕಲ್ಡ್ ಕಂಟೆಂಟ್ ಅನ್ನು ಬಳಸಿಕೊಂಡು ಈ ಪ್ರಿಂಟರ್ ಅನ್ನು ವಿನ್ಯಾಸಗೊಳಿಸಲಾಗಿದೆ.
| EPEAT Silver ಮತ್ತು Energy Star ಪ್ರಮಾಣೀಕರಣವನ್ನು ಪಡೆದುಕೊಂಡಿದೆ.
| Energy ಉಳಿತಾಯ ಮಾಡುವ Auto On/Off ತಂತ್ರಜ್ಞಾನವನ್ನು ಒಳಗೊಂಡಿದೆ. ಇದಕ್ಕೆ ಬಳಕೆದಾರರಿಂದ ಯಾವುದೇ ಹೆಚ್ಚು ಪ್ರಯತ್ನಗಳ ಅಗತ್ಯ ಇರುವುದಿಲ್ಲ.

ಬೆಲೆ ಮತ್ತು ಲಭ್ಯತೆ

ಇದನ್ನೂ ಓದಿ | Google | ಚೀನಾದಿಂದ ಭಾರತಕ್ಕೆ ಪಿಕ್ಸೆಲ್‌ ಸ್ಮಾರ್ಟ್‌ಫೋನ್ ಉತ್ಪಾದನಾ ಘಟಕ ಸ್ಥಳಾಂತರಕ್ಕೆ ಗೂಗಲ್‌ ಚಿಂತನೆ

Exit mobile version