Site icon Vistara News

hyundai tucson 2022 ಭಾರತದಲ್ಲಿ ಬಿಡುಗಡೆ, ಎಡಿಎಸ್‌ ಈ ಬಾರಿಯ ವಿಶೇಷತೆ

hyundai tucson 2022

ನವ ದೆಹಲಿ: ಹುಂಡೈ ಇಂಡಿಯಾ ತನ್ನ hyundai tucson 2022 ಎಸ್‌ಯುವಿ ಕಾರನ್ನು ಬುಧವಾರ ಭಾರತದ ಮಾರುಕಟ್ಟೆಗೆ ಅನಾವರಣ ಮಾಡಿದೆ. ಎಲ್‌ಇಡಿ ಸಮೇತ ಸ್ಪೋರ್ಟಿ ಡಿಸೈನ್‌ ಹಾಗೂ ಎಡಿಎಸ್‌ ತಂತ್ರಜ್ಞಾನ ಸುಧಾರಿತ ಆವೃತ್ತಿಯ ಕಾರಿನ ವಿಶೇಷತೆಗಳಾಗಿವೆ.

ಭಾರತದ ಎಸ್‌ಯುವಿ ಮಾರುಕಟ್ಟೆಯಲ್ಲಿನ ಪ್ರೀಮಿಯಮ್‌ ಕಾರುಗಳಲ್ಲಿ ಒಂದಾಗಿರುವ ಟಕ್ಸನ್‌ನ ನೂತನ ಆವೃತ್ತಿ ಹಲವಾರು ಹೊಸತನಗಳೊಂದಿಗೆ ಮಾರುಕಟ್ಟೆಗೆ ಇಳಿದಿದೆ. ಪ್ರಮುಖವಾಗಿ ಅಡ್ವಾನ್ಸ್‌ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಮ್‌ (ಎಡಿಎಸ್‌) ಮೂಲಕ ಕಾರಿನ ಪ್ರಯಾಣಿಕರ ಸುರಕ್ಷತೆ ಇನ್ನಷ್ಟು ಹೆಚ್ಚಿಸಲಾಗಿದೆ.

ಟಕ್ಸನ್‌ ಕಾರು ೨೦೦೫ರಲ್ಲಿ ಭಾರತದ ರಸ್ತೆಗೆ ಇಳಿದಿತ್ತು. ಅಂತೆಯೇ ೨೦೦೯ರಕ್ಕೆ ಎರಡನೇ ಪೀಳಿಗೆಯ ಟಕ್ಸನ್‌ ಬಿಡುಗಡೆಯಾಗಿತ್ತು. ಮೂರನೇ ಪೀಳಿಗೆಯ ಕಾರು ೨೦೧೬ರಲ್ಲಿ ಬಿಡುಗಡೆಯಾಗಿತ್ತು. ಆದಾಗ್ಯೂ ದುಬಾರಿ ಬೆಲೆಯನ್ನು ಹೊಂದಿರುವ ಈ ಎಸ್‌ಯುವಿ ಕ್ರೆಟಾ ಹಾಗೂ ವೆನ್ಯು ಕಾರಿನಷ್ಟು ಬೇಡಿಕೆ ಪಡೆದುಕೊಂಡಿರಲಿಲ್ಲ. ಪ್ರಸ್ತುತ ದಿನಗಳಲ್ಲಿ ಪ್ರೀಮಿಯಮ್‌ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹ್ಯುಂಡೈ ಕಂಪನಿ ಟಕ್ಸನ್‌ನ ಸುಧಾರಿತ ಆವೃತ್ತಿಯನ್ನು ಮಾರುಕಟ್ಟೆಗೆ ಇಳಿಸಿದೆ.

ಪ್ರೀಮಿಯರ್‌ ನೋಟ

ಹೊಸ ಟಕ್ಸನ್‌ ಕಾರು ಸ್ಪೋರ್ಟಿ ನೋಟವನ್ನು ಹೊಂದಿದ್ದು, ಒಂದೇ ನೋಟಕ್ಕೆ ಕಣ್ಸೆಳೆಯುವಂತಿದೆ. ಮುಂಬದಿಯಲ್ಲಿ ದೊಡ್ಡ ಗಾತ್ರದ ಗ್ರಿಲ್‌ ಬಳಸಲಾಗಿದ್ದು, ಹೆಡ್‌ಲ್ಯಾಂಪ್‌ ಹಾಗೂ ಟೈಲ್‌ ಲೈಟ್‌ ಸಂಪೂರ್ಣ ಎಲ್‌ಇಡಿ ಹಾಗೂ ಟೈಲ್‌ ಟೈಲ್‌ಗಳು ಬಾಡಿ ಸ್ಟ್ರಿಪ್‌ನಂತೆ ಪರಸ್ಪರ ಸಂಪರ್ಕ ಹೊಂದಿವೆ. ಟಾಪ್‌ ಎಂಡ್‌ ಕಾರಿನಲ್ಲಿ ಡ್ಯುಯಲ್‌ ಟೋನ್‌ ಬಣ್ಣದ ಆಯ್ಕೆಯನ್ನೂ ಗ್ರಾಹಕರಿಗೆ ನೀಡಲಾಗಿದೆ.

ಕ್ಯಾಬಿನ್‌

ಹೊಸ ಟಕ್ಸನ್‌ ಕಾರಿನಲ್ಲಿ ೧೦.೧ ಇಂಚಿನ ಆಲ್‌ ಡಿಜಿಟಲ್‌ ಡಿಸ್‌ಪ್ಲೇ ಹಾಗೂ ಅಷ್ಟೇ ದೊಡ್ಡದಾದ ಪ್ರಮುಖ ಇನ್ಫೋಟೈನ್‌ಮೆಂಟ್‌ ಟಚ್‌ ಸ್ಕ್ರೀನ್‌ ವ್ಯವಸ್ಥೆಯಿದೆ. ವೈರ್‌ಲೆಸ್‌ ಫೋನ್‌ ಚಾರ್ಜಿಂಗ್‌, ಆಂಬಿಯೆಂಟ್‌ ಲೈಟ್‌, ವೆಂಟಿಲೇಟೆಡ್‌ ಫ್ರಂಟ್‌ ಸೀಟ್‌, ಕಿ ಲೆಸ್‌ ಎಂಟ್ರಿ, ಅಟೋ ಡಿಮ್ಮಿಂಗ್‌ IRV̧M ವ್ಯವಸ್ಥೆಯನ್ನು ಹೊಂದಿದೆ.

ಎಂಜಿನ್

ಎರಡು ಎಂಜಿನ್‌ ಆಯ್ಕೆಯಲ್ಲಿ ಟಕ್ಸನ್‌ ಲಭ್ಯವಿದೆ. Nu ೨.೦ ಪೆಟ್ರೋಲ್‌ ಎಂಜಿನ್‌ನಲ್ಲಿ ಆರು ಸ್ಪೀಡ್‌ನ ಗೇರ್‌ ಬಾಕ್ಸ್‌ ಇದೆ. R ೨.೦ ವಿಜಿಟಿ ಡೀಸೆಲ್‌ ಎಂಜಿನ್‌ ಹೊಂದಿರುವ ಕಾರಿನಲ್ಲಿ ೮ ಸ್ಪೀಡ್‌ನ ಆಟೋಮ್ಯಾಟಿಕ್‌ ಗೇರ್‌ ಬಾಕ್ಸ್‌ ಆಯ್ಕೆಯಿದೆ. ಪೆಟ್ರೋಲ್‌ ಎಂಜಿನ್‌ ೧೫೬ ಪಿಎಸ್‌ ಪವರ್‌ ಹಾಗೂ ೧೯೨ ಎನ್‌ಎಮ್‌ ಟಾರ್ಕ್ಯೂ ಬಿಡುಗಡೆ ಮಾಡಿದರೆ, ಡೀಸೆಲ್‌ ಎಂಜಿನ್‌ ೧೮೬ ಪಿಎಸ್‌ ಪವರ್‌ ಹಾಗೂ ೪೧೬ ಎನ್‌ಎಮ್‌ ಟಾರ್ಕ್ಯೂ ಬಿಡುಗಡೆ ಮಾಡಬಲ್ಲ ಶಕ್ತಿ ಹೊಂದಿದೆ.

ಸುರಕ್ಷತೆ

೧೯ hyundai smartSense ADAD ಫೀಚರ್‌, ಚಾಲನೆ ವೇಳೆ ಡ್ರೈವರ್‌ಗೆ ಸಲಹೆ ನೀಡುವ ಮೂಲಕ ಇನ್ನಷ್ಟು ಸುರಕ್ಷತೆಯನ್ನು ಹೆಚ್ಚಿಸಬಲ್ಲುದು. ಅಂತೆಯೇ ಫಾರ್ವರ್ಡ್‌ ಕೊಲಿಶನ್‌ ವಾರ್ನಿಂಗ್‌, ಸ್ಮಾರ್ಟ್‌ ಕ್ರೂಸ್‌ ಕಂಟ್ರೋಲ್‌, ರಿಯರ್‌ ಕ್ರಾಸ್‌ ಟ್ರಾಫಿಕ್‌ ಕೊಲಿಶನ್‌ ಆವಾಯ್ಡೆನ್ಸ್‌ ಅಸಿಸ್ಟ್‌, ಆರು ಏರ್‌ಬ್ಯಾಗ್‌ಗಳು ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಬಲ್ಲುದು.

ಬೆಲೆ ಎಷ್ಟು?

hyundai tucson 2022 ಕಾರಿನ ಎಕ್ಸ್‌ ಶೋ ರೂಮ್‌ ಬೆಲೆ ೨೫ ಲಕ್ಷ ರೂಪಾಯಿಂದ ೩೦ ಲಕ್ಷ ರೂಪಾಯಿಯವರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ.

ಪ್ರತಿಸ್ಪರ್ಧಿಗಳು

ಜೀಪ್‌ ಕಂಪಾಸ್‌, ಸಿಟ್ರಾನ್‌ ಸಿ೫, ವೋಕ್ಸ್‌ ವ್ಯಾಗನ್‌ ಟೈಗುನ್‌ ನೂತನ hyundai tucson 2022 ಕಾರಿನ ಪ್ರತಿಸ್ಪರ್ಧಿ ಕಾರುಗಳಾಗಿವೆ.

ಇದನ್ನೂ ಓದಿ: Hybrid tech ಮಾರುತಿ ಸುಜುಕಿಯ ಗುರಿ

Exit mobile version