Site icon Vistara News

EV Cars : ಎಲೆಕ್ಟ್ರಿಕ್​ ವಾಹನಗಳು ಪೆಟ್ರೋಲ್​, ಡೀಸೆಲ್​ ಕಾರುಗಳಿಗಿಂತ ಹೆಚ್ಚು ಅಪಾಯಕಾರಿಯಂತೆ!

EV Cars

ನವ ದೆಹಲಿ: ಪೆಟ್ರೋಲ್​ ಮತ್ತು ಡೀಸೆಲ್​ ಎಂಜಿನ್ ಇರುವ ವಾಹನಗಳು ಪರಿಸರಕ್ಕೆ ಹಾನಿ ಮಾಡುತ್ತವೆ. ಇವಿ ಕಾರುಗಳು ಇದಕ್ಕೆ ಪರಿಹಾರ ಎಂದು ಹೇಳುತ್ತೇವೆ. ಆದರೆ, ಐಐಟಿ ಕಾನ್ಪುರ ಸಂಶೋಧಕರ ತಂಡವೊಂದು ಎಲೆಕ್ಟ್ರಿಕ್​ ವಾಹನಗಳು (EV Cars) ಪೆಟ್ರೋಲ್​ ಮತ್ತು ಡೀಸೆಲ್​ ಮತ್ತು ಸಿಎನ್​ಜಿ ಕಾರುಗಳಿಗಿಂತ ಪರಿಸರಕ್ಕೆ ಹಾನಿಕಾರಕ ಎಂದು ವರದಿ ಮಾಡಿದೆ. ಈ ಸಂಶೋಧನೆ ಹೊಸ ಚರ್ಚೆಗೆ ಕಾರಣವಾಗಿದೆ. ಉತ್ಪಾದನೆ, ನಿರ್ವಹಣೆ ಮತ್ತು ಮರುಬಳಕೆ ಸೇರಿದಂತೆ ಅವುಗಳ ಜೀವಿತಾವಧಿ ಸೇರಿದಂತೆ ಎಲ್ಲ ವಿಷಯಗಳನ್ನು ಅಧ್ಯಯನ ಮಾಡಲಾಗಿದ. ಎಲೆಕ್ಟ್ರಿಕ್ ವಾಹನಗಳು ಪ್ರತಿ ಕಿಲೋಮೀಟರ್ 187 ಗ್ರಾಂ ಇಂಗಾಲದ ಡೈಆಕ್ಸೈಡ್ ಅನ್ನು ಹೊರಸೂಸಿದರೆ, ಹೈಬ್ರಿಡ್​ ವಾಹನಗಳು 167 ಗ್ರಾಮ್​ ಇಂಗಾಲ ಬಿಡುಗಡೆ ಮಾಡುತ್ತದೆ ಸಾಮಾನ್ಯ ಪೆಟ್ರೋಲ್ ಕಾರುಗಳು ಕಿ.ಮೀ.ಗೆ 244 ಇಂಗಾಲ ಹೊರಸೂಸುತ್ತವೆ. ವಿಶ್ಲೇಷಣೆಗಾಗಿ ಟಾಟಾ ನೆಕ್ಸಾನ್ ಮತ್ತು ಮಾರುತಿ ಸುಜುಕಿಯ ಹೈಬ್ರಿಡ್ ಗ್ರ್ಯಾಂಡ್ ವಿಟಾರಾದ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ರೂಪಾಂತರಗಳ ವಾಹನಗಳ ಮೇಲೆ ಸಂಶೋಧನೆ ನಡೆಸಲಾಗಿದೆ.

ಬ್ಯಾಟರಿ ಉತ್ಪಾದನೆ ಮತ್ತು ಗಣಿಗಾರಿಕೆ

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಗಣನೀಯ ಪ್ರಮಾಣದಲ್ಲಿ ನಿಕ್ಕಲ್, ಕೋಬಾಲ್ಟ್ ಮತ್ತು ಲಿಥಿಯಂ ಅಗತ್ಯವಿರುತ್ತದೆ ಎಂಬ ಅಂಶವನ್ನು ವರದಿಯು ಎತ್ತಿ ತೋರಿಸಿದೆ. ಇದು ಗಣಿಗಾರಿಕೆ ಮತ್ತು ಸಂಸ್ಕರಣಾ ಪ್ರಕ್ರಿಯೆಗಳ ಸಮಯದಲ್ಲಿ ಹಸಿರುಮನೆ ಪರಿಣಾಮ ಉಂಟು ಮಾಡುತ್ತದೆ. ಭಾರತವು ಪ್ರಸ್ತುತ ವಿದ್ಯುತ್ ಉತ್ಪಾದನೆಗಾಗಿ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ (80%) ಅನ್ನು ಹೆಚ್ಚು ಅವಲಂಬಿಸಿರುವುದರಿಂದ, ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡುವುದರಿಂದ ಪರೋಕ್ಷವಾಗಿ CO2 ಹೊರಸೂಸುವಿಕೆಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆ ಹೇಳಿದೆ.

ಹೈಬ್ರಿಡ್ ಅನುಕೂಲಗಳು

ಅಧ್ಯಯನವು ಹೈಬ್ರಿಡ್ ಗಳ ಪ್ರಯೋಜನಗಳನ್ನು ಎತ್ತಿ ತೋರಿಸಿದೆ ಮತ್ತು ಈ ಕಾರುಗಳು ಸಣ್ಣ ಬ್ಯಾಟರಿಯನ್ನು ಬಳಸುತ್ತವೆ. ಇದರ ಪರಿಣಾಮವಾಗಿ ವಿರಳ ಲೋಹಗಳ ಬಳಕೆ ಕಡಿಮೆಯಾಗುತ್ತದೆ ಮತ್ತು ಗಣಿಗಾರಿಕೆ ಮತ್ತು ಸಂಸ್ಕರಣೆಯ ಸಮಯದಲ್ಲಿ ಕಡಿಮೆ ಇಂಗಾಲ ಹೊರಸೂಸುತ್ತವೆ . ಎಲೆಕ್ಟ್ರಿಕ್ ವಾಹನಗಳಿಗಿಂತ ಭಿನ್ನವಾಗಿ ಹೈಬ್ರಿಡ್ ಎಂಜಿನ್​ಗಳು ಬಾಹ್ಯ ಚಾರ್ಜಿಂಗ್ ಅವಲಂಬಿಸಿರುವುದಿಲ್ಲ. ಬ್ರೇಕಿಂಗ್ ಎನರ್ಜಿ ಬಳಸಿಕೊಡು ವಿದ್ಯುತ್ ಅನ್ನು ಪುನರುತ್ಪಾದಿಸಬಹುದು.

ಎಥೆನಾಲ್ ಮಿಶ್ರಿತ ಇಂಧನ

ಸಂಶೋಧನೆಯು ಎತ್ತಿ ತೋರಿಸಿದ ಮತ್ತೊಂದು ಪ್ರಮುಖ ಅಂಶವೆಂದರೆ, ಭಾರತವು ಕಬ್ಬಿನಿಂದ ಪಡೆದ ಎಥೆನಾಲ್ ಅನ್ನು ಇಂಧನ ಮಿಶ್ರಣದಲ್ಲಿ ಹೆಚ್ಚಾಗಿ ಸೇರಿಸುತ್ತಿದೆ. ಇದು ಹೊರಸೂಸುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಹೈಬ್ರಿಡ್​ ಎಂಜಿನ್​ಗಳು ಈ ಮಿಶ್ರಿತ ಇಂಧನವನ್ನು ಬಳಸಿಕೊಳ್ಳಬಹುದು. ಅವುಗಳ ಪರಿಸರದ ಮೇಲಿನ ಪರಿಣಾಮವನ್ನು ಮತ್ತಷ್ಟು ಕಡಿಮೆ ಮಾಡಲು ಸಾಧ್ಯ.

ವೆಚ್ಚ ಪರಿಗಣನೆಗಳು

ಎಲೆಕ್ಟ್ರಿಕ್ ವಾಹನಗಳು ಮತ್ತು ಪೆಟ್ರೋಲ್ ಚಾಲಿತ ವಾಹನಗಳಿಗೆ ಪ್ರತಿ ಕಿಲೋಮೀಟರ್​ಗೆ ಮಾಲೀಕತ್ವದ ವೆಚ್ಚ ಸುಮಾರು 13 ರೂ.. ಆದರೆ ಹೈಬ್ರಿಡ್​ ಕಾರುಗಳಿಗೆ 14 ರೂಪಾಯಿ. ಆದಾಗ್ಯೂ, ಎಲೆಕ್ಟ್ರಿಕ್ ವಾಹನಗಳಿಗೆ ಸರ್ಕಾರದ ಸಬ್ಸಿಡಿಗಳನ್ನು ಪರಿಗಣಿಸಿದಾಗ, ಹೈಬ್ರಿಡ್​​ಗಳಿಗೆ ಟಿಸಿಒ ಪ್ರತಿ ಕಿಲೋಮೀಟರ್​​ಗಳಿಗೆ ಕೇವಲ 11 ರೂಪಾಯಿ.

ಹೈಬ್ರಿಡ್ ಗಳನ್ನು ಉತ್ತೇಜಿಸುವುದು

ಹೈಬ್ರಿಡ್ ವಾಹನಗಳು ಪ್ರಸ್ತುತ ಭಾರತದಲ್ಲಿ ಪ್ರತಿಕೂಲ ತೆರಿಗೆಯನ್ನು ಎದುರಿಸುತ್ತಿವೆ, ದೊಡ್ಡ ಹೈಬ್ರಿಡ್ಗಳಿಗೆ 43% ಜಿಎಸ್ಟಿ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ 5% ಜಿಎಸ್ಟಿ ಇದೆ ಎಂದು ಸಂಶೋಧನೆ ಹೇಳಿದೆ. ಅಳವಡಿಕೆಯನ್ನು ಹೆಚ್ಚಿಸಲು ಮತ್ತು ಹೊರಸೂಸುವಿಕೆಯನ್ನು ಕಡಿಮೆ ಮಾಡಲು, ಮಾರುತಿ ಸುಜುಕಿಯಂತಹ ಉನ್ನತ ವಾಹನ ತಯಾರಕರು ಮತ್ತು ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್ ಟೆಕ್ನಾಲಜಿಯಂತಹ ಎಂಜಿನಿಯರಿಂಗ್ ಸಂಸ್ಥೆಗಳು ಕೈಗೆಟುಕುವ ಹೈಬ್ರಿಡ್ ವಾಹನಗಳು ಉತ್ತಮ ಎಂದು ಹೇಳಿದೆ.

ಇದನ್ನೂ ಓದಿ : Kia Seltos : ಕಿಯಾ ಸೆಲ್ಟೋಸ್​ ಫೇಸ್​ಲಿಫ್ಟ್​ ಕಾರಿನ ಮೈಲೇಜ್​ ವಿವರ ಬಹಿರಂಗ

ಕಾನ್ಪುರದ ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್ ಟೆಕ್ನಾಲಜಿ ನಡೆಸಿದ ಸಂಶೋಧನೆಯು ಭಾರತೀಯ ಸನ್ನಿವೇಶದಲ್ಲಿ ಹೊರಸೂಸುವಿಕೆ ಮತ್ತು ವೆಚ್ಚ-ಪರಿಣಾಮಕಾರಿ ವಿಷಯದಲ್ಲಿ ಹೈಬ್ರಿಡ್ ವಾಹನಗಳ ಅನುಕೂಲಗಳನ್ನು ಎತ್ತಿ ತೋರಿಸುತ್ತದೆ. ಹೈಬ್ರಿಡ್ ವಾಹನಗಳು ಕಡಿಮೆ ಹಸಿರುಮನೆ ಅನಿಲಗಳನ್ನು ಹೊರಸೂಸುತ್ತವೆ ಕಡಿಮೆ ವಿರಳ ಲೋಹಗಳನ್ನು ಬಳಸುತ್ತವೆ ಮತ್ತು ಎಲೆಕ್ಟ್ರಿಕ್ ವಾಹನಗಳು ಮತ್ತು ಪೆಟ್ರೋಲ್ ಚಾಲಿತ ವಾಹನಗಳಿಗೆ ಹೋಲಿಸಿದರೆ ಕಡಿಮೆ ಮಾಲೀಕತ್ವದ ವೆಚ್ಚವನ್ನು ಹೊಂದಿವೆ.

Exit mobile version