ಭಾರತದ 78ನೇ ಸ್ವಾತಂತ್ರ್ಯ ದಿನದ (Independence day 2024) ಸಂಭ್ರಮ ಈಗಾಗಲೇ ಎಲ್ಲೆಲ್ಲೂ ರಂಗು ತುಂಬಲಾರಂಭಿಸಿದೆ. ಆಗಸ್ಟ್ 15ರಂದು ಇದರ ಆಚರಣೆಗೆ ಸಜ್ಜಾಗುತ್ತಿರುವ ಅನೇಕರು ಈ ಮಹತ್ವದ ದಿನದ ಸಂತೋಷವನ್ನು (joy of this significant day) ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಲು ವಿವಿಧ ದಾರಿಗಳನ್ನು ಹುಡುಕುತ್ತಿರುತ್ತಾರೆ. ಈ ಬಾರಿ ವಿಶೇಷವಾಗಿ ವಾಟ್ಸ್ ಆಪ್ (whatsapp) ಸ್ಟಿಕ್ಕರ್‌ಗಳು, ಶುಭಾಶಯ ಸಂದೇಶಗಳ ಮೂಲಕ ಸ್ವಾತಂತ್ರ್ಯ ದಿನಕ್ಕೆ ಶುಭಾಶಯಗಳನ್ನು ಕೋರಬಹುದು. ವಾಟ್ಸ್ ಆಪ್ ಸ್ಟಿಕ್ಕರ್ , ಮೆಸೆಜ್ ಮತ್ತು ಚಿತ್ರಗಳ ಬಳಕೆ ಸೇರಿದಂತೆ ಡಿಜಿಟಲ್ ವಿಧಾನಗಳ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಹೇಗೆ ಹೆಚ್ಚಿಸಬಹುದು ಎನ್ನುವ ಮಾಹಿತಿ ಇಲ್ಲಿದೆ.
ವಾಟ್ಸ್‌ಆಪ್ ಸ್ಟಿಕ್ಕರ್‌ಗಳು
ಶುಭಾಶಯಗಳನ್ನು ಹಂಚಿಕೊಳ್ಳಲು ಆಧುನಿಕ ಮಾರ್ಗವಾಗಿರುವ ವಾಟ್ಸ್ ಆಪ್ ಸ್ಟಿಕ್ಕರ್‌ಗಳು ಶೀಘ್ರವಾಗಿ ಶುಭಾಶಯಗಳನ್ನು ಕಳುಹಿಸಲು ಅನುಕೂಲಕರವಾದ ಮಾರ್ಗವಾಗಿದೆ. ವಾಟ್ಸ್ ಆಪ್‌ನಲ್ಲಿ ಸ್ವಾತಂತ್ರ್ಯ ದಿನದ ಸ್ಟಿಕ್ಕರ್‌ಗಳನ್ನು ಹೇಗೆ ಡೌನ್‌ಲೋಡ್ ಮಾಡಬಹುದು ಎನ್ನುವ ಮಾಹಿತಿ ಇಲ್ಲಿದೆ.
Google Play Store ಅಥವಾ Apple ಆಪ್ ಸ್ಟೋರ್‌ನಲ್ಲಿ “Sticker.ly” ಅಥವಾ “ಭಾರತೀಯ ಸ್ವಾತಂತ್ರ್ಯ ದಿನದ ಸ್ಟಿಕ್ಕರ್‌ಗಳು” (indian independence day stickers)ನಂತಹ ಅಪ್ಲಿಕೇಶನ್ ಅನ್ನು ಹುಡುಕಿ. ಈ ಅಪ್ಲಿಕೇಶನ್‌ಗಳು ವಿವಿಧ ಸ್ವಾತಂತ್ರ್ಯ ದಿನದ ವಿಷಯದ ಸ್ಟಿಕ್ಕರ್ ಪ್ಯಾಕ್‌ಗಳನ್ನು ನೀಡುತ್ತವೆ.
ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಿ ತೆರೆಯಿರಿ. ಬಳಿಕ ಅದರಲ್ಲಿ ನೀವು ಇಷ್ಟಪಡುವ ಸ್ಟಿಕ್ಕರ್ ಅನ್ನು ಆಯ್ಕೆ ಮಾಡಿ ಮತ್ತು ವಾಟ್ಸ್ ಆಪ್‌ಗೆ ಸೇರಿಸಲು ಟ್ಯಾಪ್ ಮಾಡಿ. ಇದು ವಾಟ್ಸ್ ಆಪ್ ಖಾತೆಗೆ ಸ್ಟಿಕ್ಕರ್‌ಗಳನ್ನು ಸಂಯೋಜಿಸುತ್ತದೆ. ಬಳಿಕ ವಾಟ್ಸ್ ಆಪ್‌ನಲ್ಲಿ ಯಾವುದೇ ಚಾಟ್ ತೆರೆಯಿರಿ. ಎಮೋಜಿ ಐಕಾನ್ ಮೇಲೆ ಟ್ಯಾಪ್ ಮಾಡಿ ಸ್ಟಿಕ್ಕರ್ ಟ್ಯಾಬ್ ಆಯ್ಕೆ ಮಾಡಿ. ಇಲ್ಲಿ ಹೊಸದಾಗಿ ಸೇರಿಸಲಾದ ಸ್ವಾತಂತ್ರ್ಯ ದಿನದ ಸ್ಟಿಕ್ಕರ್‌ಗಳನ್ನು ಕಾಣಬಹುದು ಮತ್ತು ಅದನ್ನು ಹಂಚಿಕೊಳ್ಳಬಹುದು.
ಶುಭಾಶಯ ಸಂದೇಶ
ಸ್ಟಿಕ್ಕರ್‌ಗಳ ಹೊರತಾಗಿ ಪ್ರೀತಿಪಾತ್ರರಿಗೆ ಸ್ವಾತಂತ್ರ್ಯ ದಿನದ ಶುಭಾಶಯ ಅಥವಾ ಸಂದೇಶಗಳನ್ನೂ ಕಳುಹಿಸಬಹುದು. ಪಠ್ಯ, ಚಿತ್ರ ಮತ್ತು ಜಿಫ್‌ಗಳೊಂದಿಗೆ ಸಂದೇಶಗಳನ್ನು ಕಳುಹಿಸಲು ವಾಟ್ಸ್ ಆಪ್ ಅನುಮತಿ ನೀಡುತ್ತದೆ.
ಜಿಫ್ ಹುಡುಕಲು ವಾಟ್ಸ್ ಆಪ್ ತೆರೆಯಿರಿ. ಯಾವುದೇ ಸಂಪರ್ಕದೊಂದಿಗೆ ಚಾಟ್ ಪ್ರಾರಂಭಿಸಿ. ಎಮೋಜಿ ವಿಭಾಗದ ಪರದೆಯ ಕೆಳಗಿನ ಎಡಭಾಗದಲ್ಲಿರುವ ಎಮೋಜಿ ಐಕಾನ್ ಅನ್ನು ಟ್ಯಾಪ್ ಮಾಡಿ ಜಿಫ್ ಅನ್ನು ಆಯ್ಕೆ ಮಾಡಿ. ಜಿಫ್ ವಿಭಾಗದಲ್ಲಿ “ಸ್ವಾತಂತ್ರ್ಯ ದಿನ” ಜಿಫ್‌ಗಳನ್ನು ಹುಡುಕಲು ಹುಡುಕಾಟ ಪಟ್ಟಿಯನ್ನು ಬಳಸಿ. ನಿಮಗೆ ಇಷ್ಟವಾಗುವ ಜಿಫ್ ಅನ್ನು ಆಯ್ಕೆ ಮಾಡಿ ಮತ್ತು ಅದನ್ನು ಒಂದೇ ಟ್ಯಾಪ್‌ನಲ್ಲಿ ಕಳುಹಿಸಿ.
ಚಿತ್ರಗಳು
ಚಿತ್ರ ಅಥವಾ ವೆಕ್ಟರ್ ಕಲೆಯನ್ನು ಹಂಚಿಕೊಳ್ಳಲು ಆದ್ಯತೆ ನೀಡುವವರಿಗೆ ಹಲವಾರು ಆಯ್ಕೆಗಳು ಲಭ್ಯವಿದೆ. ಆನ್‌ಲೈನ್‌ನಲ್ಲಿ ತ್ವರಿತ ಹುಡುಕಾಟ ನಡೆಸುವ ಮೂಲಕ ಉತ್ತಮ ಗುಣಮಟ್ಟದ ಸ್ವಾತಂತ್ರ್ಯ ದಿನಾಚರಣೆಯ ಚಿತ್ರಗಳನ್ನು ಪಡೆಯಬಹುದು.
ಇದನ್ನೂ ಓದಿ: Independence day 2024: ಕೆಂಪು ಕೋಟೆ ಮೇಲೆ ಭಾಷಣ; ನೆಹರೂ, ಇಂದಿರಾ ಬಳಿಕ ಮೋದಿ ಹೊಸ ದಾಖಲೆ!
ಅನೇಕ ವೆಬ್‌ಸೈಟ್‌ಗಳು ದೇಶಭಕ್ತಿಯ ಚಿತ್ರಗಳ ಉಚಿತ ಡೌನ್‌ಲೋಡ್‌ಗಳಿಗೆ ಅನುಮತಿ ನೀಡುತ್ತವೆ. ಅಲ್ಲದೇ ‘Canva’ ಮತ್ತು ‘Pixabay’ ನಂತಹ ಅಪ್ಲಿಕೇಶನ್‌ಗಳು ವಾಟ್ಸಾಪ್ ಅಥವಾ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ನೇರವಾಗಿ ಹಂಚಿಕೊಳ್ಳಬಹುದಾದ ಸ್ವಾತಂತ್ರ್ಯ ದಿನದ ಚಿತ್ರಗಳು ಮತ್ತು ವೆಕ್ಟರ್ ಕಲೆಯನ್ನು ಒದಗಿಸುತ್ತವೆ.