ನವದೆಹಲಿ: ಈಗಾಗಲೇ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಎಲ್ಲ ಕ್ಷೇತ್ರಗಳನ್ನು ಆವರಿಸಿಕೊಂಡಿದೆ. ಇದೀಗ ಭಾರತೀಯ ಸೇನೆಯೂ (Indian Military) ಈ ತಂತ್ರಜ್ಞಾನದ ನೆರವು ಪಡೆಯಲು ಮುಂದಾಗಿದೆ. ಜಮ್ಮು ಮತ್ತು ಕಾಶ್ಮೀರದಂಥ ಸೇನಾ ಸೂಕ್ಷ್ಮ ಪ್ರದೇಶಗಳಲ್ಲಿ ಎಐ ತಂತ್ರಜ್ಞಾನ (artificial intelligence) ಆಧರಿತ ಸೇವೆಯನ್ನು ಬಳಸಲಿದೆ. ಯುಐಎಎಐ (UIDAI) ಮತ್ತು ಎಂಒಆರ್‌ಟಿಎಚ್(MoRTH) ರಾಷ್ಟ್ರೀಯ ಡೇಟಾ ಬೇಸ್‌ನೊಂದಿಗೆ ಎಐ ಬೇಸ್ಡ್ ಥ್ರೆಟ್ ಅಸೆಸ್‌ಮೆಂಟ್ ಸಾಫ್ಟ್‌ವೇರ್ ಲಿಂಕ್ ಮಾಡಲಾಗುತ್ತದೆ ಮತ್ತು ಅದನ್ನು ಭಾರತೀಯ ಸೇನೆ ಬಳಕೆಗೆ ಒದಗಿಸಲಾಗುತ್ತದೆ. ವಾಹನಗಳ ಚಲನೆ, ಸೋಷಿಯಲ್ ಮೀಡಿಯಾ ವೇದಿಕೆಗಳೂ ಸೇರಿದಂತೆ ಆನ್‌ಲೈನ್‌ನಲ್ಲಿ ವ್ಯಕ್ತಿಗಳ ಕ್ರಿಯಾಶೀಲತೆ, ಲಿಂಕ್ ಮತ್ತು ಟ್ರೆಂಡ್ಸ್ ಬಗ್ಗೆ ಮಾಹಿತಿಯ ಪಡೆಯಲು ಬಳಸಲಾಗುತ್ತದೆ.
ಥ್ರೆಟ್ ಅಸೆಸ್‌ಮೆಂಟ್ ಕುರಿತಾದ ಸಂಪೂರ್ಣ ಮಾಹಿತಿಯನ್ನು ಸೇನಾ ಪಡೆಗಳು ಅಥವಾ ಕಾನೂನು ಜಾರಿ ಸಂಸ್ಥೆಗಳ ಇನ್ನೂ ಹಂಚಿಕೊಂಡಿಲ್ಲ. ಆದರೆ, ರಿಜಿಸ್ಟರ್‌ಗಳಲ್ಲಿ ಬಹಳ ನಿರ್ಬಂಧಿತ ಮಾಹಿತಿಯು ಮಾತ್ರವೇ ಲಭ್ಯವಿದೆ. ಕಂಪನಿ ಆಪರೇಟಿಂಗ್ ಬೇಸ್ ಹಾಗೂ ಇತರ ಮುಖ ಕಚೇರಿಗಳಲ್ಲಿ ಈ ಬಗ್ಗೆ ಅಲ್ಪ ಮಾಹಿತಿ ಮಾತ್ರವೇ ಇದೆ.
Analytics India ಮ್ಯಾಗಜಿನ್ ಮಾಡಿರುವ ವರದಿಯ ಪ್ರಕಾರ, ಭಾರತೀಯ ಸೇನೆಯು ಈಗಾಗಲೇ ಫೇಶಿಯಲ್ ರೆಕಗ್ನಿಷನ್, ಭಾಷಾಂತರ, ರಿಮೋಟ್ಲೀ ಆಪರೇಟೆಡ್ ವೆಪನ್ ಸ್ಟೇಷನ್ ಮತ್ತು ರೊಬೋಟಿಕ್ ಮೈನ್ ಪತ್ತೆ, ಒಳ ನುಗ್ಗುವಿಕೆ ಪತ್ತೆ ವ್ಯವಸ್ಥೆಗಳಲ್ಲಿ ಎಐ ಆಧರಿತ ತಂತ್ರಜ್ಞಾನವನ್ನು ಬಳಸುತ್ತಿದೆ.
ಇದನ್ನೂ ಓದಿ: Mahindra Scorpio | 1470 ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಕಾರುಗಳನ್ನು ಬುಕ್ ಮಾಡಿದ ಭಾರತೀಯ ಸೇನೆ
ಕಾಶ್ಮೀರದಿಂದ ಸಿಕ್ಕಿಮ್‌ವರೆಗೆ ಭಾರತದ ಬಹುತೇಕ ಸೂಕ್ಷ್ಮ ಗಡಿಗಳು ಹಿಮಾಲಯಗುಂಟವೇ ಇದೆ. ಭಾರತೀಯ ಸೇನೆಯು ತಮ್ಮ ಕಾರ್ಯಗಳನ್ನು ಹೆಚ್ಚು ಸುಲಭವಾಗಿ ಮತ್ತು ವೇಗವಾಗಿ ನಿರ್ವಹಿಸಲು, ಸೈನ್ಯವನ್ನು ಸಶಕ್ತಗೊಳಿಸಲು ಇಂತಹ ನಿರ್ಣಾಯಕ ಸ್ಥಳಗಳಲ್ಲಿ ಎಐ ತಂತ್ರಜ್ಞಾನ ಸಾಮರ್ಥ್ಯವನ್ನು ಬಳಸಿಕೊಳ್ಳಲು ಉದ್ದೇಶಿಸಿದೆ ಎಂದು ಹೇಳಲಾಗುತ್ತಿದೆ.