ಬೆಂಗಳೂರು: ಗುರುವಾರ ಸಂಜೆಯ ವೇಳೆ ವಿಶ್ವದಾದ್ಯಂತ ಇನ್ಸ್ಟಾಗ್ರಾಮ್ ಬಳಕೆದಾರರು ಮೊಬೈಲ್ ಅಪ್ಲಿಕೇಶನ್ನಲ್ಲಿ ಸರ್ವರ್ ಸಮಸ್ಯೆಗಳನ್ನು (Instagram Down) ಎದುರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಟ್ರ್ಯಾಕಿಂಗ್ ವೆಬ್ಸೈಟ್ ಡೌನ್ಡಿಟೆಕ್ಟರ್ ಕೂಡ ಈ ಮಾಹಿತಿಯನ್ನು ಸ್ಪಷ್ಟಪಡಿಸಿದೆ. ಸಂಜೆ 7 ಗಂಟೆಯಿಂದ ಪ್ರಾರಂಭಗೊಂಡ ಸಮಸ್ಯೆ ಮುಂದುವರಿದಿದೆ ಎಂದು ಬರೆಯಲಾಗಿದೆ. ಈ ಬಗ್ಗೆ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬುದಾಗಿ ಹೇಳಿದೆ. ವಿಶ್ವದಾದ್ಯಂತ ಸಾವಿರಾರು ಬಳಕೆದಾರರು ಮತ್ತು ಭಾರತದಲ್ಲಿ 150 ಕ್ಕೂ ಹೆಚ್ಚು ಬಳಕೆದಾರರು ಸಮಸ್ಯೆ ಎದುರಿಸಿರುವ ಬಗ್ಗೆ ಡೌನ್ಡಿಟೆಕ್ಟರ್ ವೆಬ್ಸೈಟ್ನಲ್ಲಿ ವರದಿ ಮಾಡಿದ್ದಾರೆ.
ಡೌನ್ಡಿಟೆಕ್ಟರ್ ಪ್ರಕಾರ, ಬಳಕೆದಾರರಲ್ಲಿ ಶೇಕಡಾ 56ರಷ್ಟು ಜನರು ಸರ್ವರ್ ಸಂಪರ್ಕ ಸಮಸ್ಯೆಗಳನ್ನು ಎದುರಿಸಿದ್ದಾರೆ. 38 ಪ್ರತಿಶತದಷ್ಟು ಜನರು ಅಪ್ಲಿಕೇಶನ್ನಲ್ಲಿ ಸಮಸ್ಯೆಗಳನ್ನು ಎದುರಿಸಿದ್ದಾರೆ. 7 ಪ್ರತಿಶತದಷ್ಟು ಜನರು ಇನ್ಸ್ಟಾಗ್ರಾಮ್ಗೆ ಲಾಗಿನ್ ಆಗುವಾಗ ಸಮಸ್ಯೆಗಳನ್ನು ಎದುರಿಸಿದ್ದಾರೆ.
ಸಮಸ್ಯೆ ಕಾಣಿಸಿಕೊಂಡ ತಕ್ಷಣ ಎಕ್ಸ್ ನಲ್ಲಿ ಪ್ರತಿಕ್ರಿಯೆಗಳು ಬರಲಾರಂಭಿಸಿದವು. ಎಕ್ಸ್ ಬಳಕೆದಾರರು ಹೀಗೆ ಬರೆದುಕೊಂಡಿದ್ದಾರೆ. “ನಾನು ಯಾರೊಂದಿಗಾದರೂ ಚಾಟ್ ಮಾಡುವಾಗ ಪ್ರತಿ ಬಾರಿಯೂ ಇನ್ಸ್ಟಾಗ್ರಾಮ್ ಏಕೆ ಸ್ಥಗಿತಗೊಳ್ಳುತ್ತದೆ. ಇನ್ನೂ ಕೆಲವರು “ಇನ್ಸ್ಟಾಗ್ರಾಮ್ ಡೌನ್ ಆಗಿರುವಾಗ ಎಲ್ಲರೂ ಟ್ವಿಟರ್ಗೆ ಬರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಕೆಲವು ಬಳಕೆದಾರರು ಇನ್ಸ್ಟಾಗ್ರಾಮ್ ಡೌನ್ ಆಗಿದೆಯೇ ಅಥವಾ ಅವುಗಳನ್ನು ಹ್ಯಾಕ್ ಮಾಡಲಾಗಿದೆಯೇ ಎಂದು ಪ್ರಶ್ನಿಸಿದರು. ” ಇನ್ಸ್ಟಾಗ್ರಾಮ್ ಮತ್ತೆ ಡೌನ್ ಆಗಿದೆ. ನಾನು ಹ್ಯಾಕ್ ಮಾಡಲಾಗಿದೆ ಎಂದು ನಾನು ತಕ್ಷಣ ಭಾವಿಸುತ್ತೇನೆ …” ಎಂದು ಎಕ್ಸ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Narendra Modi : ಬುಡಕಟ್ಟು ಸಮುದಾಯಕ್ಕೆ ಕಾಂಗ್ರೆಸ್ ಅಪಮಾನ ಮಾಡಿದೆ ಎಂದು ಮೋದಿ ಹೇಳಿದ್ದು ಯಾಕೆ?
ಇದಲ್ಲದೆ, ಐದು ಬಾರಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕೂಡ ಟ್ವಿಟರ್ ಮೂಲಕ ಇನ್ಸ್ಟಾಗ್ರಾಮ್ ಸಮಸ್ಯೆಯನ್ನು ಹೇಳಿಕೊಂಡಿದೆ. “ಹೌದು, ಭಾರತ ತಂಡ ಬೌಲಿಂಗ್ ದಾಳಿಯು ಇನ್ಸ್ಟಾಗ್ರಾಮ್ ಡೌನ್ ಆಗುವಂತೆ ಮಾಡಿದೆ ಎಂದು ಪೋಸ್ಟ್ ಮಾಡಿದೆ. ಇದು ಪ್ರಸ್ತುತ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್ 2023ರ ಕುರಿತ ಉಲ್ಲೇಖವಾಗಿದೆ. ಗುರುವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ 302 ರನ್ಗಳ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತ್ತು.
71.1 ಲಕ್ಷ ವಾಟ್ಸ್ಆ್ಯಪ್ ಖಾತೆಗಳ ಬಂದ್
ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸ್ಆ್ಯಪ್ ಬಿಡುಗಡೆ ಮಾಡಿದ ಇತ್ತೀಚಿನ ಭಾರತದ ಮಾಸಿಕ ವರದಿಯ ಪ್ರಕಾರ, ಮೆಟಾ ಒಡೆತನದ ವಾಟ್ಸಾಪ್ ಐಟಿ ನಿಯಮಗಳಿಗೆ ಅನುಸಾರವಾಗಿ ಸೆಪ್ಟೆಂಬರ್ನಲ್ಲಿ 71.1 ಲಕ್ಷ ಖಾತೆಗಳನ್ನು ನಿಷೇಧಿಸಿದೆ. ಈ ಪೈಕಿ 25.7 ಲಕ್ಷ ಖಾತೆಗಳನ್ನು ಬಳಕೆದಾರರಿಂದ ಯಾವುದೇ ವರದಿ ಬರುವ ಮೊದಲೇ ನಿಷೇಧಿಸಲಾಗಿದೆ.
ಭಾರತೀಯ ಖಾತೆಯನ್ನು ‘+91’ ದೇಶದ ಕೋಡ್ ಮೂಲಕ ಗುರುತಿಸಲಾಗುತ್ತದೆ. ಸೆಪ್ಟೆಂಬರ್ 1, 2023 ಮತ್ತು ಸೆಪ್ಟೆಂಬರ್ 30, 2023 ರ ನಡುವೆ 71,11,000 ವಾಟ್ಸಾಪ್ ಖಾತೆಗಳನ್ನು ನಿಷೇಧಿಸಲಾಗಿದೆ. ಬಳಕೆದಾರರಿಂದ ಯಾವುದೇ ವರದಿಗಳು ಬರುವ ಮೊದಲು ಈ 25,71,000 ಖಾತೆಗಳನ್ನು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ” ಎಂದು ಅದು ಹೇಳಿದೆ.
‘ಬಳಕೆದಾರ-ಸುರಕ್ಷತಾ ವರದಿ’ ಸ್ವೀಕರಿಸಿದ ಬಳಕೆದಾರರ ದೂರುಗಳ ವಿವರಗಳು ಮತ್ತು ವಾಟ್ಸಾಪ್ ತೆಗೆದುಕೊಂಡ ಸಂಬಂಧಿತ ಕ್ರಮಗಳು ಮತ್ತು ಪ್ಲಾಟ್ಫಾರ್ಮ್ನಲ್ಲಿ ದುರುಪಯೋಗವನ್ನು ಎದುರಿಸಲು ವಾಟ್ಸಾಪ್ನ ಸ್ವಂತ ತಡೆಗಟ್ಟುವ ಕ್ರಮಗಳನ್ನು ಒಳಗೊಂಡಿದೆ.