Site icon Vistara News

Instagram | ಹೊಸ ವಿನ್ಯಾಸದಲ್ಲಿ ʼಇನ್‌ಸ್ಟಾಗ್ರಾಂ ಸ್ಯಾನ್ಸ್‌ʼ

ಇನ್‌ಸ್ಟಾಗ್ರಾಮ್‌ (INSTAGRAM) ಈಗ ಹೊಸ ರೂಪದಲ್ಲಿ ಪ್ರಸ್ತುತಗೊಳ್ಳುತ್ತಿದೆ. ವಿನ್ಯಾಸ ಹೊಸದಾಗಿದೆ. ಲೋಗೋ ಬದಲಾವಣೆಗೊಂಡಿದೆ. ಹೊಸ ರೂಪದಲ್ಲಿ ಮೂಡಿಬರುತ್ತಿರುವ ಅತ್ಯಂತ ಚಾಲ್ತಿಯಲ್ಲಿರುವ ಇನ್‌ಸ್ಟಾಗ್ರಾಂ ಆಪ್ ನಲ್ಲಿ ಕಂಟೆಂಟ್‌ ಪ್ರಧಾನವಾಗಿರಲಿದೆ ಎಂದು ತಿಳಿಸಲಾಗಿದೆ.

ಈ ಕುರಿತ ಮಾಹಿತಿ ಇಲ್ಲಿದೆ:

1. ಇನ್‌ಸ್ಟಾಗ್ರಾಂ ಲೋಗೊ ಸ್ವಲ್ಪ ಬದಲಾಗಿದೆ. ಹೊಸ ವಿನ್ಯಾಸ ವ್ಯವಸ್ಥೆ ನೀಡಲಾಗಿದೆ ಹಾಗೂ ನೂತನ ಟೈಪ್‌ಫೇಸ್‌ ನೀಡಲಾಗಿದೆ.
2. ಇನ್‌ಸ್ಟಾಗ್ರಾಂ ಲೋಗೊ ವಿನೂತನವಾಗಿದ್ದು, ಹೆಚ್ಚು ಆಕರ್ಷಕವಾದ ಬಣ್ಣವನ್ನು ನೀಡಲಾಗಿದೆ. ಈ ಲೋಗೊ ನೋಡಿದವರ ಮನಸ್ಸಿಗೆ ಹಿತವಾಗಬೇಕು ಹಾಗೂ ‘ಲೈವ್’ ಫೀಲ್ ಮೂಡಬೇಕು ಎಂಬ ಉದ್ದೇಶ ಹೊಂದಲಾಗಿದೆ.
3. ಈ ನೂತನ ವಿನ್ಯಾಸವನ್ನು ʼಇನ್‌ಸ್ಟಾಗ್ರಾಂ ಸ್ಯಾನ್ಸ್‌ʼ ಎಂದು ಕರೆಯಲಾಗಿದೆ.

ಇನ್‌ಸ್ಟಾಗ್ರಾಂ ತನ್ನ ಲೋಗೊ ಬದಲಾಯಿಸುವ ಜತೆಗೆ ಕಂಟೆಂಟ್‌ಗೆ ಪ್ರಾಮುಖ್ಯತೆ ನೀಡುವ ವ್ಯವಸ್ಥೆಯನ್ನು ಕಲ್ಪಿಸಿದೆ. ಅದಕ್ಕೆ ಸೂಕ್ತವಾಗಿರುವ ಲೇಔಟ್‌ ಕೂಡ ನೀಡಲಾಗುತ್ತಿದೆ ಎಂದು ತಿಳಿಸಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಬಳಸಲಾಗುತ್ತಿರುವ ಹೊಸ ಫಾಂಟ್‌ ವೆಬ್‌ಸೈಟ್‌ ಸೇರಿದಂತೆ ಎಲ್ಲೆಡೆ ಬಳಸಲಾಗುತ್ತದೆ ಎಂದು ಇನ್‌ಸ್ಟಾಗ್ರಾಂ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

ʼಇನ್‌ಸ್ಟಾಗ್ರಾಂ ಸ್ಯಾನ್ಸ್‌ ಕೂಡ ಗ್ರಾಹಕರು ತಮ್ಮನ್ನು ತಾವು ಅಭಿವ್ಯಕ್ತಗೊಳಿಸುವ ಒಂದು ಮಾಧ್ಯಮವಾಗಲಿದೆ. ಈ ಹೊಸ ಟೈಪ್‌ಫೇಸ್‌ ವಿಶ್ವಾದ್ಯಂತ ಲಭ್ಯವಾಗುವ ಉದ್ದೇಶದಿಂದ ಇದನ್ನು ಸೃಷ್ಟಿಸಲಾಗಿದೆʼ ಎಂದವರು ತಿಳಿಸಿದ್ದಾರೆ.

ಶೀಘ್ರದಲ್ಲೇ ಈ ಹೊಸ ರೂಪ ಎಲ್ಲರ ಮೊಬೈಲ್‌ ಫೋನ್‌ನಲ್ಲಿ ಲಭ್ಯವಾಗಲಿದೆ. ʼಸಿಂಪ್ಲಿಸಿಟಿ ಹಾಗೂ ಸೆಲ್ಫ್ ಎಕ್ಸ್‌ಪ್ರೆಶನ್‌ʼ ಎಂಬ ಟಾಗ್‌ಲೈನ್‌ ನೀಡಿ ಈ ವಿನ್ಯಾಸ ಮಾಡಲಾಗಿದೆ. ಈ ಹೊಸ ರೂಪಕ್ಕೆ ಜನರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಬಗ್ಗೆ ಕುತೂಹಲ ಮೂಡಿದೆ.

ಇದನ್ನೂ ಓದಿ: ಡಿಜಿ ಲಾಕರ್‌ ಈಗ ವಾಟ್ಸ್‌ ಆಪ್‌ನಲ್ಲಿ ಲಭ್ಯ, ದಾಖಲೆಗಳನ್ನು ಇಡಲು ಡಿಜಿಟಲ್‌ ಸೇವೆ

Exit mobile version