Site icon Vistara News

International Women’s Day: ಏರ್‌ಬಿಎನ್‌ಬಿಯಲ್ಲಿ ಹೋಸ್ಟಿಂಗ್ ಮಾಡಿ 100 ಕೋಟಿ ರೂ. ಸಂಪಾದಿಸಿದ ಭಾರತೀಯ ಮಹಿಳೆಯರು!

International Women's Day,Indian women earns rs 100 crore by hosting on airbnb

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಏರ್‌ಬಿಎನ್‌ಬಿ (Airbnb) ಪ್ಯಾನೆಲ್ ಚರ್ಚೆಯನ್ನು ಆಯೋಜಿಸಿದ್ದು(International Women’s Day), ನಟಿ ಮತ್ತು ಲೇಖಕಿ ಸೋಹಾ ಅಲಿ ಖಾನ್, ಗಾಯಕಿ ಮತ್ತು ಕವಯತ್ರಿ ಲಿಸಾ ಮಿಶ್ರಾ, ಮಹಿಳಾ ಉದ್ಯಮಿ ಕೀರ್ತಿ ಪೂನಿಯಾ (ಸಹ-ಸಂಸ್ಥಾಪಕಿ, ರಿಲವ್) ಮತ್ತು ಏರ್‌ಬಿಎನ್‌ಬಿ ಹೋಸ್ಟ್ ಕಾಕೋಲಿ ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದರು . ಅಂತಾರಾಷ್ಟ್ರೀಯ ಮಹಿಳಾ ದಿನದ ಈ ವರ್ಷದ ಥೀಮ್ ಆಗಿರುವ ‘ಸಮಾಜನತೆಯನ್ನು ಸ್ವೀಕರಿಸಿ’ (Embrace Equity) ಕುರಿತು ತಮ್ಮ ವಿಚಾರಗಳನ್ನು ಈ ಸಾಧಕಿಯರು ಹಂಚಿಕೊಂಡರು.

ಭಾರತದಲ್ಲಿ ಮತ್ತು ಜಾಗತಿಕವಾಗಿ ಏರ್‌ಬಿಎನ್‌ಬಿಯ ಆತಿಥೇಯರ ಸಮುದಾಯಕ್ಕೆ ಮಹಿಳೆಯರು ಶಕ್ತಿ ತುಂಬುತ್ತಾರೆ. ಏರ್‌ಬಿಎನ್‌ಬಿ ಹೋಸ್ಟ್ ಜಾಗತಿಕ ಸಮುದಾಯದಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರೇ ಇದ್ದಾರೆ. ಅಂಥ ಅನೇಕ ಹೋಸ್ಟ್ ಗಳು ತಮ್ಮ ಸ್ಥಳೀಯ ಸಮುದಾಯಗಳಿಗೆ ಆಧಾರ ಸ್ತಂಭಗಳಾಗಿದ್ದಾರೆ – ಹಿಂದುಳಿದ ಸಮುದಾಯಗಳ ಮಹಿಳೆಯರ ಆರ್ಥಿಕ ಚಟುವಟಿಕೆಗೆ ಶಕ್ತಿ ತುಂಬಿ, ಅವರ ಬೆಳವಣಿಗೆಗೆ ಕಾರಣೀಭೂತರಾಗಿದ್ದಾರೆ. ಏರ್‌ಬಿಎನ್‌ಬಿಯ ಆಂತರಿಕ ಮಾಹಿತಿಯ ಪ್ರಕಾರ 2022ರಲ್ಲಿ ಭಾರತದಲ್ಲಿ ಮಹಿಳಾ ಹೋಸ್ಟ್ ಗಳು 100 ಕೋಟಿಗೂ ಹೆಚ್ಚು ಹಣ ಗಳಿಸಿದ್ದಾರೆ. ಇದರ ಜೊತೆಗೆ, 60 ವರ್ಷ ಮೇಲ್ಪಟ್ಟ ಮಹಿಳಾ ಹೋಸ್ಟ್‌ಗಳು ಏರ್‌ಬಿಎನ್‌ಬಿ ನಲ್ಲಿ 20 ಕೋಟಿ ರೂ.ಗೂ ಮಿಕ್ಕಿ ಸಂಪಾದಿಸಿದ್ದಾರೆ. ಇವರಲ್ಲಿ ಅನೇಕರಿಗೆ ಇದು ಅಗತ್ಯ ಆದಾಯವಾಗಿತ್ತು ಮತ್ತು ನಿವೃತ್ತಿ ಬದುಕಿಗೆ ಸಹಾಯಕವಾಗಿತ್ತು.

ಏರ್‌ಬಿಎನ್‌ಬಿ ವೇದಿಕೆಯಲ್ಲಿ ಮಹಿಳೆಯರು ಹೋಸ್ಟ್‌ಗಳಾಗುವುದರ ಮಹತ್ವವನ್ನು ಸಾರಿದ ಏರ್‌ಬಿಎನ್‌ಬಿ ಭಾರತ, ಆಗ್ನೇಯ ಏಷ್ಯಾ, ಹಾಂಗ್ ಕಾಂಗ್ ಮತ್ತು ತೈವಾನ್ ಮಹಾಪ್ರಬಂಧಕ ಅಮನ್‌ಪ್ರೀತ್ ಬಜಾಜ್ ಅವರು, ಏರ್‌ಬಿಎನ್‌ಬಿಯ ಅತಿಥಿಗಳು ಮತ್ತು ಆತಿಥೇಯ ಸಮುದಾಯಗಳಲ್ಲಿ ವೈವಿಧ್ಯ, ಸಮಾನತೆ ಮತ್ತು ಏಕತೆಯನ್ನು ಬೆಳೆಸಲು ನಾವು ಬದ್ಧರಾಗಿದ್ದೇವೆ. ನಮ್ಮ ಅತಿಥಿಗಳಿಗೆ ಏರ್‌ಬಿಎನ್‌ಬಿ ಯ ಸಮೃದ್ಧ ಅನುಭವ, ವೈವಿಧ್ಯಮಯ ದೃಷ್ಟಿಕೋನ ಮತ್ತು ಶಕ್ತಿಯನ್ನು ನೀಡುವ ಮಹಿಳಾ ಹೋಸ್ಟ್‌ಗಳು ನಮ್ಮ ವೇದಿಕೆಗೆ ತರುವ ಅನನ್ಯ ಮೌಲ್ಯವನ್ನು ನಾವು ಗುರುತಿಸುತ್ತೇವೆ ಎಂದರು.

ಇದನ್ನೂ ಓದಿ: ICC Women’s ODI Team of the Year: ಐಸಿಸಿ ವರ್ಷದ ಮಹಿಳಾ ಏಕದಿನ ತಂಡಕ್ಕೆ ಟೀಮ್​ ಇಂಡಿಯಾದ ಹರ್ಮನ್​ಪ್ರೀತ್​ ಕೌರ್​ ನಾಯಕಿ

ಏರ್‌ಬಿಎನ್‌ಬಿ ಡೇಟಾದ ಪ್ರಕಾರ, ದೇಶದಲ್ಲಿ ಅತಿ ಹೆಚ್ಚು ಮಹಿಳಾ ಹೋಸ್ಟ್‌ಗಳಿರುವ ಟಾಪ್ 5 ರಾಜ್ಯಗಳೆಂದರೆ – ಮಹಾರಾಷ್ಟ್ರ, ಗೋವಾ, ಕರ್ನಾಟಕ, ದೆಹಲಿ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಾಗಿವೆ.

Exit mobile version