Site icon Vistara News

Jio AirFiber: ಜಿಯೋ ಏರ್‌ಫೈಬರ್‌ ಹೊಸ ಬೂಸ್ಟರ್ ಪ್ಲ್ಯಾನ್‌ಗಳು ಲಾಂಚ್‌!

Jio Airfiber now available in all district headquarters and over 200 cities in Karnataka

ಮುಂಬೈ: ರಿಲಯನ್ಸ್ ಜಿಯೋ (Reliance Jio) ಕೈಗೆಟುಕುವ ದರದಲ್ಲಿ ಡೇಟಾ ಯೋಜನೆಗಳು (Data Plans) ಮತ್ತು ಸಾಧನಗಳ ಬಿಡುಗಡೆಯೊಂದಿಗೆ ಭಾರತದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದೆ. ಇದೇ ಹಾದಿಯಲ್ಲಿ ಮುನ್ನಡೆಯುತ್ತಿರುವ ಜಿಯೋ ಏರ್‌ಫೈಬರ್ (Jio Airfiber) ತನ್ನ ಬಳಕೆದಾರರಿಗೆ ಹೊಸ ಬೂಸ್ಟರ್ ಪ್ಲಾನ್‌ಗಳನ್ನು ಲಾಂಚ್ ಮಾಡಿದೆ(New booster Plans).

ಸದ್ಯ ಇಂಟರ್ನೆಟ್ ಸೇವೆಗಳು ತಲುಪಲು ಕಷ್ಟಕರವಾದ ಪ್ರದೇಶಗಳಿಗೆ ಸಂಪರ್ಕವನ್ನು ನೀಡುತ್ತಿರುವ ಜಿಯೋ ಏರ್ ಫೈಬರ್ ಈಗ ಅದಕ್ಕೆ ಹೆಚ್ಚು ಅಗತ್ಯವಿರುವ ಉತ್ತೇಜನವನ್ನು ನೀಡಲು, ಕಂಪನಿಯು ಕ್ರಮವಾಗಿ 101 ಮತ್ತು 251 ರೂ ವೆಚ್ಚದ ಹೊಸ ಬೂಸ್ಟರ್ ಯೋಜನೆಗಳನ್ನು ಘೋಷಿಸಿದೆ. ತಿಂಗಳಿಗೆ 1TB ಯ ನ್ಯಾಯೋಚಿತ ಬಳಕೆಯ ನೀತಿ (FUP) ಮುಗಿದ ನಂತರ ಯೋಜನೆಗಳನ್ನು ಪಡೆಯಬಹುದಾಗಿದೆ. ಯೋಜನೆಗಳು MyJio ಮತ್ತು Jio.com ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಈಗಾಗಲೇ ರೂ 401ಕ್ಕೆ ಜಿಯೋ ಏರ್ ಫೈಬರ್ ಡೇಟಾ ಬೂಸ್ಟರ್ ಯೋಜನೆಯನ್ನು ನೀಡುತ್ತಿದೆ.

ರೂ. 251 ಡೇಟಾ ಬೂಸ್ಟರ್ ಯೋಜನೆ

ಈ ಯೋಜನೆಯಲ್ಲಿ ಏರ್ ಫೈಬರ್ ಬಳಕೆದಾರರಿಗೆ ವೇಗದ 500GB ಡೇಟಾವನ್ನು ಒದಗಿಸುತ್ತದೆ. ಆದರೆ ಇದು ಒಂದೇ ಬಿಲ್ಲಿಂಗ್ ಸೈಕಲ್‌ ನಲ್ಲಿ ಮಾತ್ರವೇ ಬಳಕೆಗೆ ಮಾನ್ಯವಾಗಿದೆ.

ರೂ. 101 ಡೇಟಾ ಬೂಸ್ಟರ್ ಯೋಜನೆ

ಈ ಯೋಜನೆಯಲ್ಲಿ ಏರ್ ಫೈಬರ್ ಬಳಕೆದಾರರಿಗೆ ವೇಗದ 100GB ಡೇಟಾವನ್ನು ನೀಡುತ್ತದೆ. ಆದರೆ ಇದು ಒಂದೇ ಬಿಲ್ಲಿಂಗ್ ಸೈಕಲ್‌ ನಲ್ಲಿ ಮಾತ್ರವೇ ಬಳಕೆಗೆ ಮಾನ್ಯವಾಗಿದೆ.

ಹೆಸರೇ ಸೂಚಿಸುವಂತೆ, ಇದು ಡೇಟಾ ಬೂಸ್ಟರ್ ಯೋಜನೆಯಾಗಿದೆ ಮತ್ತು ಇದನ್ನು ಬಳಕೆ ಮಾಡಿಕೊಳ್ಳಲು ಸಾಮಾನ್ಯ ಜಿಯೋ ಏರ್‌ಫೈಬರ್‌ ಅಥವಾ ಜಿಯೋ ಏರ್‌ಫೈಬರ್‌ಮ್ಯಾಕ್ಸ್ ಯೋಜನೆಯನ್ನು ಹೊಂದಿರಬೇಕು. ಸೀಮಿತ ಅವಧಿಗೆ ಹೆಚ್ಚುವರಿ ಡೇಟಾ ಅಗತ್ಯವಿರುವ ಬಳಕೆದಾರರಿಗಾಗಿ ಹೊಸ ಯೋಜನೆ ಸಹಾಯಕಾರಿಯಾಗಲಿದೆ.

ಜಿಯೋ ಏರ್‌ಫೈಬರ್ ಭೌತಿಕ ಸಂಪರ್ಕವಿಲ್ಲದ ಜಿಯೋ ಫೈಬರ್‌ನಂತಿಯೇ ಕೆಲಸ ಮಾಡಲಿದೆ. ಸೇವೆಯ ಚಂದಾದಾರರು ನಿಮ್ಮ ಮನೆ ಅಥವಾ ವ್ಯಾಪಾರದ ಆವರಣದಲ್ಲಿ ಸವೈಫೈ ರೂಟರ್, 4K ಸ್ಮಾರ್ಟ್ ಸೆಟ್ ಟಾಪ್ ಬಾಕ್ಸ್ ಮತ್ತು ಧ್ವನಿ-ಸಕ್ರಿಯ ರಿಮೋಟ್ ಬಳಕೆಯ ಲಾಭವನ್ನು ಪಡೆಯಬಹುದಾಗಿದೆ.

ಜಿಯೋ ಏರ್‌ಫೈಬರ್‌ಬಳಕೆದಾರರು ಪ್ರಮುಖ ಓಟಿಟಿ(OTT) ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯುತ್ತಾರೆ. ಬಳಕೆದಾರರು ಈ ಚಂದಾದಾರಿಕೆಯನ್ನು ಟಿವಿ, ಲ್ಯಾಪ್‌ಟಾಪ್, ಮೊಬೈಲ್ ಅಥವಾ ಟ್ಯಾಬ್ಲೆಟ್‌ನಂತಹ ಅವರ ಆಯ್ಕೆಯ ಯಾವುದೇ ಸಾಧನದಾದ್ಯಂತ ಬಳಸಬಹುದು. ಭಾರತದಲ್ಲಿ ಜಿಯೋ ಏರ್‌ಫೈಬರ್ ಸಬ್‌ಸ್ಕ್ರಿಪ್ಶನ್ ಬೆಲೆಯು ರೂ 599 ರಿಂದ ಪ್ರಾರಂಭವಾಗುತ್ತದೆ.

ಈ ಸುದ್ದಿಯನ್ನೂ ಓದಿ: Reliance Jio: ಜಿಯೋ ಬ್ರೈನ್ ಎಐ ಪ್ಲಾಟ್ ಫಾರ್ಮ್ ಆರಂಭಿಸಿದ ಜಿಯೋ ಪ್ಲಾಟ್ ಫಾರ್ಮ್ಸ್

Exit mobile version