Site icon Vistara News

ದಾವಣಗೆರೆ, ಹೊಸಪೇಟೆ, ಶಿವಮೊಗ್ಗ, ಬೀದರ್, ಗದಗ-ಬೆಟಗೇರಿಯಲ್ಲೂ Jio True 5G ಸೇವೆ ಶುರು

Jio True 5G @ Karnataka

ಬೆಂಗಳೂರು: ಕರ್ನಾಟಕದ ದಾವಣಗೆರೆ, ಹೊಸಪೇಟೆ, ಶಿವಮೊಗ್ಗ, ಬೀದರ್, ಗದಗ-ಬೆಟಗೇರಿ ನಗರಗಳಲ್ಲಿ ರಿಲಯನ್ಸ್ ಜಿಯೋ ತನ್ನ 5ಜಿ ಸೇವೆಯನ್ನು (Jio True 5G) ಆರಂಭಿಸಿದೆ. ಜತೆಗೆ, ಆಂಧ್ರ ಪ್ರದೇಶದ ಕಾಕಿನಾಡ, ಕರ್ನೂಲ್, ಅಸ್ಸಾಮ್‌ನ ಸಿಲ್ಚಾರ್, ಕೇರಳದ ಮಲಪ್ಪುರಂ ಸೇರಿದಂತೆ 16 ನಗರಗಳಲ್ಲಿ ರಿಲಯನ್ಸ್ ಜಿಯೋ ತನ್ನ ಟ್ರೂ 5G ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದರಲ್ಲಿ ಕೇರಳದ ಪಾಲಕ್ಕಾಡ್, ಕೊಟ್ಟಾಯಂ, ಕಣ್ಣೂರು, ತಮಿಳುನಾಡಿನ ತಿರುಪ್ಪೂರ್, ತೆಲಂಗಾಣದ ನಿಜಾಮಾಬಾದ್, ಖಮ್ಮಂ ಮತ್ತು ಉತ್ತರ ಪ್ರದೇಶದ ಬರೇಲಿ ನಗರಗಳೂ ಸೇರಿವೆ.

ರಿಲಯನ್ಸ್ ಜಿಯೋ ಕರ್ನಾಟಕದ ದಾವಣಗೆರೆ, ಹೊಸಪೇಟೆ, ಶಿವಮೊಗ್ಗ, ಬೀದರ್, ಗದಗ-ಬೆಟಗೇರಿ ಮತ್ತು ಇತರ 11 ನಗರಗಳಲ್ಲಿ ಟ್ರೂ 5ಜಿ ಸೇವೆಗಳ ಬಹು-ರಾಜ್ಯ ಬಿಡುಗಡೆಯನ್ನು ಘೋಷಿಸಿದೆ. ರಿಲಯನ್ಸ್ ಜಿಯೋ ದಾವಣಗೆರೆ, ಹೊಸಪೇಟೆ, ಶಿವಮೊಗ್ಗ, ಬೀದರ್, ಗದಗ-ಬೆಟಗೇರಿಯಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸಿದ ಮೊದಲ ಮತ್ತು ಏಕೈಕ ಆಪರೇಟರ್ ಆಗಿದೆ. ಜ.17ರಿಂದ ಆರಂಭವಾಗಿರುವ ಸೇವೆಯನ್ನು ಪಡೆಯುವುದಕ್ಕೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಲು ಈ ನಗರಗಳಲ್ಲಿನ ಜಿಯೋ ಬಳಕೆದಾರರನ್ನು ಜಿಯೋ ವೆಲ್ ಕಮ್ ಕೊಡುಗೆಗೆ ಆಹ್ವಾನಿಸಲಾಗುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಜಿಯೋ ವಕ್ತಾರರು, 7 ರಾಜ್ಯಗಳಾದ್ಯಂತ 16 ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳನ್ನು ಬಿಡುಗಡೆ ಮಾಡಲು ನಾವು ಹೆಮ್ಮೆಪಡುತ್ತೇವೆ, ಇದರೊಂದಿಗೆ ಒಟ್ಟು ಸಂಖ್ಯೆಯನ್ನು 134 ನಗರಗಳಿಗೆ ಕೊಂಡೊಯ್ದಿದ್ದೇವೆ. 2023ರ ಹೊಸ ವರ್ಷದಲ್ಲಿ ಜಿಯೋ ಟ್ರೂ 5ಜಿ ತಂತ್ರಜ್ಞಾನದ ರೂಪಾಂತರದ ಪ್ರಯೋಜನಗಳನ್ನು ಪ್ರತಿ ಜಿಯೋ ಬಳಕೆದಾರರು ಆನಂದಿಸಲು ನಾವು ಬಯಸುತ್ತೇವೆ. ಏಕೆಂದರೆ ನಾವು ದೇಶದಾದ್ಯಂತ ಟ್ರೂ 5ಜಿ ಜಾರಿಯ ‌‌ವೇಗ ಮತ್ತು ತೀವ್ರತೆಯನ್ನು ಹೆಚ್ಚಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Jio True 5G | ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಮಂಗಳೂರಿನಲ್ಲಿ ಜಿಯೋ ಟ್ರೂ 5ಜಿ ಸೇವೆ ಶುರು

Exit mobile version