Site icon Vistara News

ಜೋಕರ್‌ ಮಾಲ್ವೇರ್‌ ನಿಮ್ಮ ಹಣ ಗುಳುಂ ಮಾಡಬಹುದು…ಹುಷಾರ್‌!

ಮೊಬೈಲ್‌ನ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಆ್ಯಪ್‌ಗಳಿಂದ ಅನೇಕ ಉಪಯೋಗಗಳಿವೆ. ಅದೇ ರೀತಿ, ಕೆಲವು ಅಪಾಯಕಾರಿ ಆ್ಯಪ್‌ಗಳು ಕೂಡ ಇಲ್ಲಿವೆ. ಈ ಆ್ಯಪ್‌ಗಳ ಮೂಲಕ ಜೋಕರ್‌ ಮಾಲ್ವೇರ್‌ ಎಂಬ ವೈರಸ್‌ ನಿಮ್ಮ ಫೋನ್‌ಗೆ ಬರಬಹುದು. ಬಂದರೆ ನೀವು ನಿಮ್ಮ ಹಣ ಕಳೆದುಕೊಳ್ಳಬಹುದು, ಎಚ್ಚರ!

ಮೊಬೈಲ್‌ಗೆ ಆ್ಯಪ್‌ಡೌನ್‌ಲೋಡ್‌ ಮಾಡುವ ಮುನ್ನ ಎಚ್ಚರ ವಹಿಸಬೇಕು. ಕೆಲವು ಆ್ಯಪ್‌ಗಳು ನಿಮ್ಮ ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳಬಹುದು. ಆದರೆ ಕೆಲವು ಆ್ಯಪ್‌ಗಳು ಎಲ್ಲದಕ್ಕಿಂತ ಡೇಂಜರ್! ನಿಮ್ಮ ಬ್ಯಾಂಕ್‌ ಖಾತೆಯಿಂದ ಹಣವನ್ನು ದೋಚುವಲ್ಲಿ ಈ ಆ್ಯಪ್‌ಗಳು ಯಶಸ್ವಿಯಾಗುತ್ತವೆ.

ಮುಖ್ಯವಾಗಿ ಈ ಮೂರು ಆ್ಯಪ್‌ಗಳು ನಿಮ್ಮ ಹಣವನ್ನು ದೋಚುತ್ತವೆ:

  1. ಸ್ಟೈಲ್‌ ಮೆಸೇಜ್‌
  2. ಬ್ಲಡ್‌ ಪ್ರೆಷರ್‌ ಆ್ಯಪ್‌
  3. ಕ್ಯಾಮೆರಾ ಪಿಡಿಎಫ್‌ ಸ್ಕಾನರ್‌
ಜೋಕರ್‌ ಮಾಲ್ವೇರ್‌

ಈ ಮೂರು ಆ್ಯಪ್‌ಗಳು ‘ಜೋಕರ್‌ ಮಾಲ್ವೇರ್‌‘ ಎಂಬ ವೈರಸ್‌ ನಿಮ್ಮ ಫೋನ್‌ ಒಲ್ಗೆ ಪ್ರವೇಶಿಸಲು ಸಹಾಯ ಮಾಡುತ್ತವೆ. ಈ ವೈರಸ್‌ ನಿಮ್ಮ ಫೋನ್‌ಗೆ ಪ್ರವೇಶಿಸುವುದರಿಂದ ನಿಮಗೇ ಗೊತ್ತಿಲ್ಲದಂತೆ ನಿಮ್ಮ ಹಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಮೊದಲಿಗೆ ಈ ಆ್ಯಪ್‌ಗೆ ಸಬ್ಸ್‌ಕ್ರೈಬ್‌ ಆಗಲು ಹಣ ಪಾವತಿ ಮಾಡುವಂತೆ ಕೇಳುತ್ತದೆ. ನಂತರ ನಿಮ್ಮ ಬ್ಯಾಂಕ್‌ ಖಾತೆಯಿಂದ ಹಣವನ್ನು ವಂಚಕರು ಹಣವನ್ನು ಪಡೆಯುತ್ತಾರೆ.

ಈ ಬಗ್ಗೆ ಕ್ಯಾಸ್‌ಪರ್ಸ್‌ಕೈ ಸಂಶೋಧಕ ಇಗೊರ್‌ ಗೊಲೊವಿನ್‌ ಸಂಶೋಧನೆ ನಡೆಸಿ ಈ ರೀತಿಯ ʼಜೋಕರ್‌ ಮಾಲ್ವೇರ್‌ʼ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ವೇಗವಾಗಿ ಹರಡುತ್ತವೆ. ಇದರ ಬಗ್ಗೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಪ್ರಸ್ತುತ ಗೂಗಲ್‌ ಪ್ಲೇ ಸ್ಟೋರ್‌ನಿಂದ ಇದನ್ನು ತೆಗೆಯಲಾಗಿದೆ. ಆದರೆ, ಈ ರೀತಿಯ ಆ್ಯಪ್‌ಗಳು ವಿವಿಧ ಹೆಸರಿನಲ್ಲಿ ಮತ್ತೆ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಎಚ್ಚರ ವಹಿಸಬೇಕು. ಈ ಮಾದರಿಯ ಆ್ಯಪ್‌ಗಳು ನಿಮ್ಮ ಪೋನ್‌ನಲ್ಲಿ ಇದ್ದರೆ ಕೂಡಲೇ ಡೀಲೀಟ್‌ ಮಾಡಿ ಸುರಕ್ಷಿತರಾಗಿ.

ಇದನ್ನೂ ಓದಿ: ಭಾರತದಲ್ಲಿ 2030ರೊಳಗೆ 6ಜಿ ನೆಟ್‌ವರ್ಕ್‌ ಬರಲಿದೆ ಎಂದ ಪ್ರಧಾನಿ ನರೇಂದ್ರ ಮೋದಿ

Exit mobile version