Site icon Vistara News

ChatGpt: ಚಾಟ್‌ಜಿಪಿಟಿಯಿಂದ ಈ ಎಲ್ಲ ಜಾಬ್‌ಗಳು ಸೇಫ್‌, ಲಿಸ್ಟ್‌ನಲ್ಲಿ ನಿಮ್ಮ ಜಾಬ್‌ ಇದೆಯಾ? ಪಟ್ಟಿ ನೋಡಿ

List of jobs that cannot be replaced by AI bots released

List of jobs that cannot be replaced by AI bots released

ನವದೆಹಲಿ: ಆಧುನಿಕ ತಂತ್ರಜ್ಞಾನವು ಮನುಷ್ಯನ ಕೆಲಸವನ್ನು ಎಷ್ಟು ಸುಲಭ ಮಾಡುತ್ತಿವೆಯೋ, ಅಷ್ಟೇ ಉದ್ಯೋಗಕ್ಕೂ ಕತ್ತರಿ ಬೀಳಿಸುತ್ತಿವೆ. ಅದರಲ್ಲೂ, ಚಾಟ್‌ಜಿಪಿಟಿ (ChatGpt) ಎಂಬ ಕೃತಕಬುದ್ಧಿಮತ್ತೆ ಆಧಾರಿತ (AI) ಚಾಟ್‌ಬಾಟ್‌ ತಂತ್ರಜ್ಞಾನ ಪರಿಚಯವಾದ ಮೇಲೆ ಹತ್ತಾರು ಉದ್ಯೋಗಗಳ ಮೇಲೆ, ಉದ್ಯೋಗಿಗಳ ಮೇಲೆ ಕರಿಛಾಯೆ ಮೂಡಿದೆ. ಕೋಡಿಂಗ್‌ ರಚನೆಯಿಂದ ಹಿಡಿದು, ಪ್ರಬಂಧ ಬರೆಯುವವರೆಗೆ ಬಹುತೇಕ ಕೆಲಸಗಳನ್ನು ಚಾಟ್‌ಜಿಪಿಟಿಯೇ ಮಾಡುತ್ತಿರುವ ಕಾರಣ ಹತ್ತಾರು ವೃತ್ತಿಪರರಿಗೆ ನಷ್ಟವಾಗುವ ಸಾಧ್ಯತೆ ಇದೆ ಎಂದು ವರದಿಯೊಂದು ತಿಳಿಸಿದೆ. ಹಾಗೆಯೇ, ಇದೇ ವರದಿಯು ಹಲವಾರು ಉದ್ಯೋಗಿಗಳಿಗೆ ಚಾಟ್‌ಜಿಟಿಪಿಯಿಂದ ಯಾವುದೇ ಕಿಂಚಿತ್ತೂ ನಷ್ಟವಿಲ್ಲ ಎಂದು ತಿಳಿಸಿದೆ.

ಚಾಟ್‌ಜಿಪಿಟಿ ಸಹಯೋಗದಲ್ಲಿ ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯವು ಚಾಟ್‌ಜಿಪಿಟಿಯಿಂದ ಉದ್ಯೋಗಿಗಳ ಮೇಲೆ ಪರಿಣಾಮ ಹಾಗೂ ಯಾವ ಉದ್ಯೋಗಿಗಳು ಸೇಫ್‌ ಎಂಬ ಕುರಿತು ವರದಿ ತಯಾರಿಸಿದೆ. ಇದರ ಪ್ರಕಾರ, ಒಂದಷ್ಟು ಜನರ ನೌಕರಿ ಮೇಲೆ ಪರಿಣಾಮ ಬೀರುವುದನ್ನು ತಿಳಿಸಿರುವ ವರದಿಯು, ಯಾರಿಗೆ ಪರಿಣಾಮ ಬೀರುವುದಿಲ್ಲ ಎಂಬುದನ್ನೂ ತಿಳಿಸಿದೆ. ಹಾಗಾಗಿ, ಒಂದಷ್ಟು ಉದ್ಯೋಗದಲ್ಲಿರುವವರು ನಿರುಮ್ಮಳವಾಗಿ ಇರಬಹುದಾಗಿದೆ. ಚಾಟ್‌ಜಿಪಿಟಿಯು ಉದ್ಯೋಗದ ಮೇಲೆ ಪರಿಣಾಮ ಬೀರುವ ಹಾಗೂ ಬೀರದಿರುವ ಕುರಿತು ಜಾಗತಿಕವಾಗಿ ಚರ್ಚೆ, ಸಂವಾದಗಳು ನಡೆಯುತ್ತಿರುವ ವೇಳೆಯೇ ವರದಿ ಪ್ರಕಟವಾಗಿರುವುದು ಪ್ರಮುಖ ಎನಿಸಿದೆ.

ಯಾವ ಉದ್ಯೋಗದಲ್ಲಿರುವವರು ಸೇಫ್‌?

ಕೃಷಿ ಉಪಕರಣಗಳನ್ನು ಬಳಸುವವರು, ಅಥ್ಲಿಟ್‌ಗಳು, ಯಾವುದೇ ಕ್ರೀಡಾಪಟುಗಳು, ಆಟೋ ಮೆಕ್ಯಾನಿಕ್‌ಗಳು ಸೇರಿ ಹಲವು ಉದ್ಯೋಗ ಅಥವಾ ವೃತ್ತಿಯಲ್ಲಿ ತೊಡಗಿಕೊಂಡವರು ಸೇಫ್‌ ಆಗಿದ್ದಾರೆ. ಹಾಗೆಯೇ, ಸಿಮೆಂಟ್‌ ಕಾರ್ಮಿಕರು, ಬಾಣಸಿಗರು, ಕೆಫೆಟೇರಿಯಾ ಸರ್ವರ್‌ಗಳು, ಪಾತ್ರೆ ತೊಳೆಯುವವರು, ವಿದ್ಯುತ್‌ ಪವರ್‌-ಲೇನ್‌ ಇನ್‌ಸ್ಟಾಲ್‌ ಮಾಡುವವರು, ರಿಪೇರಿ ಮಾಡುವವರು, ಕಾರ್ಪೆಂಟರ್‌ಗಳು, ಪೇಂಟ್‌ ಮಾಡುವವರು, ಪ್ಲಂಬರ್‌ಗಳು, ಮಾಂಸ ಕಡಿಯುವವರು, ಪ್ಯಾಕ್‌ ಮಾಡುವವರು, ಕಲ್ಲು ಗಣಿಗಾರಿಕೆಯಲ್ಲಿ ತೊಡಗಿಕೊಂಡವರಿಗೆ ಚಾಟ್‌ಜಿಪಿಟಿಯಿಂದ ಯಾವುದೇ ತೊಂದರೆ ಇಲ್ಲ ಎಂದು ವರದಿ ತಿಳಿಸಿದೆ.

ಯಾವ ಉದ್ಯೋಗಿಗಳಿಗೆ ತೊಂದರೆ?

ಅನುವಾದಕರು ಮತ್ತು ಇಂಟರ್‌ಪ್ರೆಟರ್ಸ್‌ , ಸರ್ವೇ ಸಂಶೋಧಕರು, ಕವಿಗಳು, ಕ್ರಿಯೇಟಿವ್‌ ಲೇಖಕರು, ಆನಿಮಲ್‌ ಸೈಂಟಿಸ್ಟ್‌, ಸಾರ್ವಜನಿಕ ಸಂಪರ್ಕ ತಜ್ಞರು, ಗಣಿತಜ್ಞರು, ತೆರಿಗೆ ಸಲಹೆಗಾರರು, ವೆಬ್‌ ಮತ್ತು ಡಿಜಿಟಲ್‌ ಇಂಟರ್‌ಫೇಸ್‌ ಡಿಸೈನರ್ಸ್‌, ಕರೆಸ್ಪಾಂಡೆನ್ಸ್‌ ಕ್ಲರ್ಕ್‌, ಬ್ಲಾಕ್‌ಚೈನ್‌ ಎಂಜಿನಿಯರ್ಸ್‌, ಕೋರ್ಟ್‌ ರಿಪೋರ್ಟರ್‌, ಅಕೌಂಟೆಂಟ್ಸ್‌, ಆಡಿಟರ್ಸ್‌, ವಾರ್ತಾ ವಿಶ್ಲೇಷಕರು, ವರದಿಗಾರರು, ಪತ್ರಕರ್ತರು, ಕಾನೂನು ಸಲಹೆಗಾರರ ಉದ್ಯೋಗದ ಮೇಲೆ ಪರಿಣಾಮ ಬೀರಲಿದೆ.

ಇದನ್ನೂ ಓದಿ: GPT-4: ಚಾಟ್‌ಜಿಪಿಟಿಯ ಹೊಸ ವರ್ಷನ್ ಜಿಪಿಟಿ-4 ಲಾಂಚ್, ಫೀಚರ್ಸ್‌ಗಳೇನು?

ಹಾಗೆಯೇ, ಆಡಳಿತಾತ್ಮಕ ಸಹಾಯಕರು, ಕ್ಲಿನಿಕಲ್‌ ಡೇಟಾ ಮ್ಯಾನೇಜರ್‌, ಹವಾಮಾನ ಬದಲಾವಣೆ ವಿಶ್ಲೇಷಕರು, ಮಾರ್ಕೆಟಿಂಗ್‌ ಸ್ಟ್ರಾಟಜಿಸ್ಟ್ಸ್‌, ಗ್ರಾಫಿಕ್‌ ಡಿಸೈನರ್ಸ್‌, ಇನ್ವೆಸ್ಟ್‌ಮೆಂಟ್‌ ಫಂಡ್‌ ಮ್ಯಾನೇಜರ್ಸ್‌, ಇನ್ಷೂರೆನ್ಸ್‌ ಅಪ್ರೈಸರ್ಸ್‌ಗಳಿಗೆ ಚಾಟ್‌ಜಿಪಿಟಿ ಪರಿಣಾಮ ಬೀರಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸದ್ಯದ ವರದಿಯು ಅಮೆರಿಕದ ನಾಗರಿಕರನ್ನು ಗಮನದಲ್ಲಿಟ್ಟುಕೊಂಡು ರಚಿಸಿದ ವರದಿಯಾಗಿದೆ. ಆದರೆ, ಇದು ಭಾರತೀಯರ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದರ ನಿಖರ ಮಾಹಿತಿ ಇಲ್ಲ.

Exit mobile version