Site icon Vistara News

Hybrid tech ಮಾರುತಿ ಸುಜುಕಿಯ ಗುರಿ

hybrid tech

ಮುಂಬಯಿ: ಮುಂದಿನ ಐದರಿಂದ ಏಳು ವರ್ಷಗಳ ಅವಧಿಯೊಳಗೆ ತಮ್ಮೆಲ್ಲ ಕಾರುಗಳಿಗೆ Hybrid tech ಅಳವಡಿಸುವ ಮಹತ್ವದ ಗುರಿಯನ್ನು ಭಾರತದ ಪ್ರಮುಖ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಹೇಳಿದೆ.

ಪೆಟ್ರೋಲ್‌ ಅಥವಾ ಡೀಸೆಲ್‌ ಚಾಲಿತ ಎಂಜಿನ್‌ಗಳು ಉಂಟು ಮಾಡುವ ಪರಿಸರ ಮಾಲಿನ್ಯದ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡಿರುವ ಕಂಪನಿ, ಸ್ವಯಂಚಾಲಿತ ಹೈಬ್ರಿಡ್‌ ತಂತ್ರಜ್ಞಾನವನ್ನು ಬಳಸುವುದಕ್ಕೆ ಮುಂದಾಗಿದೆ. ಇದರು ಇಂಧನ ದಕ್ಷತೆ ಹೆಚ್ಚಿಸುವ ಜತೆಗೆ ಕಾರ್ಬನ್‌ ಉಗುಳುವಿಕೆಯ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ.

ಮಾರುತಿ ಕಂಪನಿಯ ಹಲವು ಮಾಡೆಲ್‌ಗಳು ಸದ್ಯ ಮಾರುಕಟ್ಟೆಯಲ್ಲಿವೆ. ಈ ಎಲ್ಲ ಕಾರುಗಳಿಗೆ ಎಲೆಕ್ಟ್ರಿಕ್‌ ಮೋಟಾರ್‌ ಅಳವಡಿಸುವುದು ಕಂಪನಿಯ ಆದ್ಯತೆಯಾಗಿರುವ ಜತೆಗೆ ಮೈಲ್ಡ್‌ ಮತ್ತು ಸ್ಟ್ರಾಂಗ್‌ ಹೈಬ್ರಿಡ್‌ ತಂತ್ರಜ್ಞಾನವನ್ನು ಬಳಸುವ ಬಗ್ಗೆಯೂ ಯೋಜನೆ ರೂಪಿಸಿದೆ.

ಮಾರುತಿಯ ಹಿರಿಯ ತಾಂತ್ರಿಕ ಅಧಿಕಾರಿ ಸಿ. ವಿ ರಮಣ್‌ ಈ ಕುರಿತು ಮಾತನಾಡಿ “ಮುಂದಿನ ಐದು ವರ್ಷಗಳಲ್ಲಿ ಎಲ್ಲ ಮಾಡೆಲ್‌ಗಳಲ್ಲಿ ಗ್ರೀನ್‌ ತಂತ್ರಜ್ಞಾನ ಬಳಸಲಾಗುವುದು. ಹೀಗಾಗಿ ಪೂರ್ಣ ಪ್ರಮಾಣದ ಪೆಟ್ರೋಲ್‌ ವಾಹನಗಳ ಲಭಿಸುವುದಿಲ್ಲ. ಒಂದು ಬಾರಿ ತಂತ್ರಜ್ಞಾನ ಅಳವಡಿಕೊಳ್ಳಲು ಆಂಭಿಸಿದರೆ ಎಲ್ಲ ಮಾಡೆಲ್‌ಗಳಿಗೂ ಜಾರಿ ಮಾಡುತ್ತೇವೆ,ʼʼ ಎಂದು ಅವರು ಹೇಳಿದರು.

ಎಸ್‌ಯುವಿನಲ್ಲಿ ಬರಲಿದೆ ಹೈಬ್ರಿಡ್‌

ಜುಲೈ ಮಧ್ಯಂತರದಲ್ಲಿ ಮಾರುತಿ ಸುಜುಕಿ ಮಧ್ಯಮ ಗಾತ್ರದ ಎಸ್‌ಯುವಿ ಕಾರೊಂದನ್ನು ಬಿಡುಗಡೆ ಮಾಡಲಿದೆ ಎಂಬುದಾಗಿ ಸುದ್ದಿಯಾಗಿದೆ. ಈ ಕಾರು ಮೈಲ್ಡ್‌ ಮತ್ತು ಸ್ಟ್ರಾಂಗ್‌ ಹೈಬ್ರಿಡ್‌ ಎಂಜಿನ್‌ ಹೊಂದಿರುತ್ತದೆ ಎಂದು ಹೇಳಲಾಗಿದೆ. ಮೈಲ್ಡ್‌ ಹೈಬ್ರಿಡ್‌ನಲ್ಲಿ ಸಣ್ಣ ಪ್ರಮಾಣದ ಎಲೆಕ್ಟ್ರಿಕ್‌ ಮೋಟಾರ್‌ ಇದ್ದರೆ, ಸ್ಟ್ರಾಂಗ್‌ ಹೈಬ್ರಿಡ್‌ನಲ್ಲಿ ದೊಡ್ಡ ಬ್ಯಾಟರಿ ಇರುತ್ತದೆ. ಇದು ಇಂಧನ ಧಕ್ಷತೆಯನ್ನು ಹೆಚ್ಚಿಸುವ ಜತೆಗೆ ಕಾರ್ಬನ್‌ ಉಗುಳುವಿಕೆಯನ್ನೂ ಕಡಿಮೆ ಮಾಡುತ್ತದೆ,ʼ ಎಂದು ಹೇಳಲಾಗಿದೆ.

೨೦೩೦ರ ವೇಳೆಗೆ ಎಲೆಕ್ಟ್ರಿಕ್‌ ವಾಹನಗಳ ತಯಾರಿಯೇ ಸರಕಾರದ ಗುರಿ. ಈ ನಿಟ್ಟಿನಲ್ಲಿ ಮಾರುತಿ ಸುಜುಕಿ ಕೂಡ ಕಾರ್ಯ ನಿರ್ವಹಿಸಲಿದೆ. ಕಳೆದ ೩೦ ವರ್ಷಗಳಲ್ಲಿ ಸಾಂಪ್ರದಾಯಿಕ ವಾಹನಗಳ ಉತ್ಪಾದನೆಯನ್ನು ಸುಲಭವಾಗಿ ಮಾಡಿಕೊಂಡು ಬರಲಾಗುತ್ತಿತ್ತು. ಹೀಗಾಗಿ ಮುಂದಿನ ಎಂಟು ವರ್ಷಗಳು ಸವಾಲಿನಿಂದ ಕೂಡಿರಲಿದೆ,ʼʼ ಎಂದು ಅವರು ಹೇಳಿದರು.

ಇದನ್ನೂ ಓದಿ: Mid Size SUV ಕಾರು ಬಿಡುಗಡೆಗೆ ಮಾರುತಿ ಸುಜುಕಿ ಸಿದ್ಧತೆ

Exit mobile version