Site icon Vistara News

Auto Expo 2023 | ಮಾರುತಿ ಸುಜುಕಿಯ ಇವಿಎಕ್ಸ್​ ಎಸ್​ಯುವಿ ಕಾನ್ಸೆಪ್ಟ್​ ಕಾರು ಅನಾವರಣ, 2025ಕ್ಕೆಮಾರಾಟ ಅರಂಭ

eVX SUV

ನವ ದೆಹಲಿ : ಬ್ಯಾಟರಿ ಚಾಲಿತ ವಾಹನಗಳಿಗೆ ದಿನದಿಂದ ದಿನಕ್ಕೆ ಮಾರುಕಟ್ಟೆ ಹೆಚ್ಚಾಗುತ್ತಿದೆ. ಕಂಪನಿಗಳು ಕೂಡ ಅದಕ್ಕೆ ಪೂರಕವಾಗಿ ಹೊಸ ಹೊಸ ಮಾಡೆಲ್​ಗಳನ್ನು ಬಿಡುಗಡೆ ಮಾಡುತ್ತಿವೆ. ಇದುವರೆಗೆ ಎಲೆಕ್ಟ್ರಿಕ್​ ಕಾರುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದಿದ್ದ ಮಾರುತಿ ಕೂಡ ಆ ನಿಟ್ಟಿನಲ್ಲಿ ಪೈಪೋಟಿ ಒಡ್ಡಲು ಶುರು ಮಾಡಿದೆ. ಈ ಯೋಜನೆಯ ಭಾಗವಾಗಿ ಗ್ರೇಟರ್​ ನೊಯ್ಡಾದಲ್ಲಿ ನಡೆಯುತ್ತಿರುವ ಆಟೋ ಎಕ್ಸ್​ಪೊದಲ್ಲಿ (Auto Expo 2023) ಕಾನ್ಸೆಪ್ಟ್​ ಎಸ್​ಯುವಿ ಇವಿಎಕ್ಸ್​ ಎಲೆಕ್ಟ್ರಿಕ್​ ಕಾರನ್ನು ಬಿಡುಗಡೆ ಮಾಡಿದೆ. ಇದು 2025ರಲ್ಲಿ ಗ್ರಾಹಕರ ಮನೆ ಸೇರಲಿದೆ.

ಕಾನ್ಸೆಪ್ಟ್​ ಕಾರಿಗೆ ಇವಿಎಕ್ಸ್ ಎಂದು ಕರೆಯಲಾಗಿದ್ದು, ಕಂಪನಿಯ ಬ್ಯಾಟರಿ ಚಾಲಿತ ಮೊದಲ ಎಸ್​ಯುವಿಯಾಗಿದೆ. ಇದು 2025ರಲ್ಲಿ ಭಾರತದ ರಸ್ತೆಗೆ ಇಳಿಯಲಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಮಾರುತಿ ಸುಜುಕಿ ಬ್ಯಾಟರಿ ಚಾಲಿತ ಕಾರುಗಳು ಉತ್ಪಾದನೆಗೆ 100 ಶತಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು, ಅದರಲ್ಲಿ ಇವಿಎಕ್ಸ್ ಎಸ್​ಯುವಿ ಕೂಡ ಸೇರಿಕೊಂಡಿದೆ. ಬುಧವಾರ ಪ್ರದರ್ಶನಗೊಂಡ ಈ ಮಾಡೆಲ್​ನ ಕಾರಿನಲ್ಲಿ 60ಕಿಲೋ ವ್ಯಾಟ್​ನ ಬ್ಯಾಟರಿ ಇರಲಿದ್ದು, ಒಂದು ಬಾರಿ ಚಾರ್ಜ್​ ಮಾಡಿದರೆ 550 ಕಿಲೋ ಮೀಟರ್ ಕ್ರಮಿಸುತ್ತದೆ ಎಂದು ಹೇಳಲಾಗಿದೆ.

ಇವಿಎಕ್ಸ್​ ಕಾಂಪಾಕ್ಟ್​ ಎಸ್​ಯುವಿಯಾಗಿದ್ದು, ನಗರದ ಪ್ರಯಾಣ ಹಾಗೂ ಗ್ರಾಮಾಂತರ ಪ್ರದೇಶಕ್ಕೂ ಸೂಕ್ತವಾಗಿದೆ. ಇದರಲ್ಲಿ 4×4 ಸಾಮರ್ಥ್ಯವೂ ಇರಲಿದೆ. ಬಲೆನೊ ಕಾರಿನ ವಿನ್ಯಾಸವನ್ನೇ ಆಧರಿಸಿಕೊಂಡು ಇವಿಎಕ್ಸ್ ಅನ್ನು ನಿರ್ಮಿಸಲಾಗಿದೆ. ಜತೆಗೆ ದೊಡ್ಡ ವೀಲ್​ ಬೇಸ್, ಕಡಿಮೆ ಓವರ್​ಹ್ಯಾಂಗ್ಸ್​, ಸಮಾಧಾನಕರ ಗ್ರೌಂಡ್​ ಕ್ಲಿಯರೆನ್ಸ್ ಈ ಕಾರಿನ ಪ್ರಮುಖ ಫೀಚರ್​ಗಳಾಗಿವೆ.

ಕಾನ್ಸೆಪ್ಟ್​ ಕಾರು ಮಾತ್ರವಲ್ಲದೆ ಮಾರುತಿ ಸುಜುಕಿ ಕಂಪನಿಯು ಒಟ್ಟು 16 ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಗ್ರಾಂಡ್​ ವಿಟಾರ, ಎಕ್ಸ್​ಎಲ್​6, ಎರ್ಟಿಗಾ, ಬ್ರೆಜಾ, ವ್ಯಾಗನ್​ಆರ್​ ಈ ಪಟ್ಟಿಯಲ್ಲಿವೆ. ಅದೇ ರೀತಿ ಎಥೆನಾಲ್​ ಮೂಲಕ ಓಡುವ (ಫ್ಲೆಕ್ಸ್​ ಫ್ಯುಯಲ್​) ವ್ಯಾಗನ್​ ಆರ್​ ಕಾರನ್ನೂ ಅನಾವರಣ ಮಾಡಿದೆ.

ಇದನ್ನೂ ಓದಿ | Auto Expo 2023 | ಟಾಟಾ ಹ್ಯಾರಿಯರ್​ ಇವಿ ಆಟೋ ಎಕ್ಸ್​ಪೊದಲ್ಲಿ ಅನಾವರಣ, 2024ಕ್ಕೆ ಮಾರುಕಟ್ಟೆಗೆ

Exit mobile version