ನವ ದೆಹಲಿ: ಭಾರತದ ಮೊತ್ತಮೊದಲ ಮೆಕ್‌ಲಾರೆನ್ ಜಿ.ಟಿ ಕಾರು ಬಾಲಿವುಡ್‌ನ ಯುವ ನಟ ಕಾರ್ತಿಕ್ ಆರ್ಯನ್ ಮನೆ ಸೇರಿದೆ. ಕಾರ್ತಿಕ್ ಆರ್ಯನ್ ಅಭಿನಯದ ಭೂಲ್ ಭುಲಯ್ಯ 2 ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿತ್ತು. ಇದರಿಂದ ಖುಷಿಯಾಗಿ ಟಿ-ಸಿರೀಸ್ ಮುಖ್ಯಸ್ಥ ಭೂಷಣ್ ಕುಮಾರ್ ಕಾರ್ತಿಕ್ ಆರ್ಯನ್‌ಗೆ 3.73 ಕೋಟಿ ರೂಪಾಯಿ ಮೌಲ್ಯದ ಮೆಕ್ಲಾರೆನ್ ಜಿಟಿ (McLaren GT) ಉಡುಗೊರೆಯಾಗಿ ನೀಡಿದ್ದಾರೆ.
ಭೂಲ್ ಭುಲಯ್ಯ 2 ಚಿತ್ರ ಇತ್ತೀಚೆಗೆ ಬಾಕ್ಸ್ ಆಫೀಸ್‌ನಲ್ಲಿ 180 ಕೋಟಿ ರೂಪಾಯಿ ಗಳಿಸಿ 2022ರಲ್ಲಿ ಅತ್ಯಂತ ಹೆಚ್ಚು ಹಣಗಳಿಸಿದ ಸಿನಿಮಾ ಎಂಬ ಖ್ಯಾತಿ ಗಳಿಸಿತ್ತು. ಈ ಯಶಸ್ಸಿನಿಂದ ಖುಷಿಯಾದ ನಿರ್ಮಾಪಕ ಭೂಷಣ್ ಕುಮಾರ್ ನಟ ಕಾರ್ತಿಕ್ ಆರ್ಯನ್‌ಗೆ 3.73 ಕೋಟಿ ರೂಪಾಯಿ ಮೌಲ್ಯದ ಮಕ್ಲಾರೆನ್ ಜಿ.ಟಿ. ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಕಾರ್ತಿಕ್ ಆರ್ಯನ್ ಅವರ ಕಾರ್ ಕೇಸರಿ ಶೇಡ್ ಹೊಂದಿದ್ದು, ಕಪ್ಪು ಬಣ್ಣದ ಅಲಾಯ್ ವೀಲ್ ಹೊಂದಿದೆ. ಕಾರ್ತಿಕ್ ಆರ್ಯನ್ ಹೊಸ ಕಾರ್‌ನೊಂದಿಗೆ ಮನಮೋಹಕ ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಭೂಷಣ್ ಕುಮಾರ್‌ಗೆ ಮುಂದಿನ ಉಡುಗೊರೆಯಾಗಿ ಖಾಸಗಿ ಜೆಟ್ ನೀಡುವಂತೆ ತಮಾಷೆ ಮಾಡಿದ್ದಾರೆ.
ಮೆಕ್ಲಾರೆನ್ ಜಿ.ಟಿ ವಿಶೇಷತೆ
ಮೆಕ್ಲಾರೆನ್ ಜಿ.ಟಿ ಎಂದರೆ ಇದೊಂದು ಗ್ರಾಂಡ್ ಟೂರರ್(ಜಿಟಿ) ಕಾರ್. ಇದು ಸ್ಪೋರ್ಟ್ಸ್ ಕಾರ್ ಮಾದರಿಯಲ್ಲಿ ವಿನ್ಯಾಸಗೊಂಡಿದ್ದು, ಅತ್ಯಂತ ವೇಗವಾಗಿ ಪ್ರಯಾಣಿಸುವ ಕಾರ್. ಈ ಸೂಪರ್‌ಕಾರಿಗೆ 4 ಲೀಟರ್, ಟ್ವಿನ್ ಟರ್ಬೊ ವಿ8 ಎಂಜಿನ್ ಅಳವಡಿಸಲಾಗಿದೆ. 611 ಬಿಎಚ್‌ಪಿ ಪವರ್ ಹಾಗೂ 630Nm ಟಾರ್ಕ್ ಹೊಂದಿದ್ದು, ೦ಯಿಂದ 100 ಕಿ, ಮೀ ವೇಗ ಪಡೆಯಲು 3.2 ಸೆಕೆಂಡುಗಳು ಸಾಕಾಗುತ್ತದೆ. 9 ಸೆಕೆಂಡುಗಳಲ್ಲಿ 200ಕಿಮಿ ವೇಗಕ್ಕೆ ತಲುಪುವ ಸಾಮರ್ಥ್ಯ ಈ ಕಾರಿಗಿದೆ. ಈ ಕಾರಿನಲ್ಲಿ ಒಂದು ಗಂಟೆಗೆ 327 ಕಿಮಿ ವೇಗದಲ್ಲಿ ಪ್ರಯಾಣಿಸಬಹುದು.
ಕಾರ್ ಪ್ರಿಯರಾದ ಕಾರ್ತಿಕ್ ಆರ್ಯನ್ ಗ್ಯಾರೇಜ್‌ನಲ್ಲಿ ಬಿಎಂಡಬ್ಲೂ 5 ಸಿರೀಸ್, ಮಿನಿ ಕೂಪರ್ ಎಸ್ ಕನ್ವರ್ಟಿಬಲ್, ಪೊರ್ಷಾ 718 ಬಾಕ್ಸ್‌ಟರ್ ಮತ್ತು ಅವರ ಅಚ್ಚುಮೆಚ್ಚಿನ ಲಾಂಬರ್ಗಿನಿ ಅರಸ್ ಕ್ಯಾಪ್ಸಲ್ ಎಡಿಷನ್ ಕೂಡ ಕಾಣಸಿಗಿತ್ತದೆ.
ಇದನ್ನೂ ಓದಿ: ಕ್ರಿಸ್ಟಿಯಾನೊ ರೊನಾಲ್ಡೊನ ದುಬಾರಿ ಬೆಲೆಯ Bugatti Veyron ಕಾರು ಗುದ್ದಿಸಿ ಪುಡಿಮಾಡಿದ ಚಾಲಕ