ರತ್ಲಾಮ್: ಮೊಬೈಲ್ ಫೋನ್ ಸ್ಫೋಟಗೊಂಡು (Phone Exploded) ಸ್ವಲ್ಪದರಲ್ಲೇ ಅಂಗಡಿಯಾತ ಪ್ರಾಣಾಪಾಯದಿಂದ ಪಾರಾದ ಘಟನೆ ಮಧ್ಯಪ್ರದೇಶದ ರತ್ಲಾಮ್ ನಗರದ ಹಾಥಿಖಾನಾ ಪ್ರದೇಶದಲ್ಲಿ ನಡೆದಿದೆ. ಅಂಗಡಿಯಾತ ಅಕ್ರಮ್ ಅನ್ಸಾರಿ ಮುಖದೆದುರೇ ಮೊಬೈಲ್ ಬ್ಯಾಟರಿ ಸ್ಫೋಟಗೊಂಡಿದೆ.
ಮೊಬೈಲ್ ಬ್ಯಾಟರಿ ಸ್ಫೋಟಗೊಂಡ ಇಡೀ ಘಟನೆಯು ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ವೇಳೆ ಹಾಜರಿದ್ದ ಗ್ರಾಹಕರೂ ಸ್ಫೋಟದ ಭಯಕ್ಕೆ ಬೆಚ್ಚಿ ಬಿದ್ದು, ಅಂಗಡಿಯಿಂದ ಹೊರ ಓಡಿ ಹೋಗಿದ್ದಾರೆ ಮತ್ತು ಸಂಭಾವ್ಯ ಅಪಾಯವನ್ನು ತಪ್ಪಿಸಿಕೊಂಡಿದ್ದಾರೆ.
ಈ ಘಟನೆ ಶನಿವಾರ ರಾತ್ರಿ 9 ಗಂಟೆಗೆ ನಡೆದಿದೆ. ಮೊಬೈಲ್ ಸ್ಫೋಟಗೊಳ್ಳುತ್ತಿದ್ದಂತೆ ಬೆಂಕಿ ಹತ್ತಿಕೊಂಡಿದೆ. ಕೂಡಲೇ ಅಂಗಡಿಯಾತ ಆ ಬೆಂಕಿಯು ಮತ್ತಷ್ಟು ಅಂಗಡಿಗೆ ವಿಸ್ತರಿಸಿಕೊಳ್ಳದಂತೆ ತಪ್ಪಿಸಲು ಯಶಸ್ವಿಯಾಗಿದ್ದಾರೆ. ಇದೇ ರೀತಿಯ ಘಟನೆಯೊಂದು ಮಧ್ಯಪ್ರದೇಶದಲ್ಲೇ ಕಳೆದ ಆಗಸ್ಟ್‌ನಲ್ಲಿ ನಡೆದಿತ್ತು. ಮೊಬೈಲ್ ಅಂಗಡಿಯಲ್ಲಿ ಮೊಬೈಲ್ ಬ್ಯಾಟರಿ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಗ್ರಾಹಕರು ತೀವ್ರವಾಗಿ ಗಾಯಗೊಂಡಿದ್ದರು.
ಇದನ್ನೂ ಓದಿ | Crime | ಯುವತಿ ಮೊಬೈಲ್ ಕಿತ್ತು ಕಳ್ಳರ ಎಸ್ಕೇಪ್, ಆ್ಯಪ್ ಮೂಲಕ ಆರೋಪಿಗಳ ಪತ್ತೆ ಹಚ್ಚಿದ ಡೆಲಿವರಿ ಸಿಬ್ಬಂದಿ