Site icon Vistara News

Mobile Phone Export | ಪ್ರಸಕ್ತ ಸಾಲಿನಲ್ಲಿ 1 ಲಕ್ಷ ಕೋಟಿ ರೂ. ಮೊಬೈಲ್ ಫೋನ್ ರಫ್ತು ಗುರಿ: ರಾಜೀವ್ ಚಂದ್ರಶೇಖರ್

Google Gemini ai bias against modi and Minister assured action

ನವದೆಹಲಿ: ಈ ವರ್ಷದಲ್ಲಿ ಭಾರತವು ಒಂದು ಲಕ್ಷ ಕೋಟಿ ರೂ. ಮೊತ್ತದ ಮೊಬೈಲ್ ಫೋನ್ ರಫ್ತು (Mobile Phone Export) ಮಾಡುವ ಗುರಿಯನ್ನು ಹಾಕಿಕೊಂಡಿದೆ. ಇದು, ಪ್ರಧಾನಿ ನರೇಂದ್ರ ಮೋದಿ ಅವರ 2023ರ ವಿಷನ್ ಆಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಹೇಳಿದ್ದಾರೆ. ಭಾರತದ ಟಾಪ್ 10 ರಫ್ತು ವಿಭಾಗದಲ್ಲಿ ಮೊಬೈಲ್ ಉತ್ಪಾದನೆ ಮತ್ತು ರಫ್ತು ಕೂಡ ಇರಲಿದೆ.

ಪ್ರಸಕ್ತ ಸಾಲಿನಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲು ಬೇಕಾಗುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಲ್ಲದೇ ಮೊಬೈಲ್ ಫೋನ್ ಉತ್ಪಾದನೆ ಮಾತ್ರವಲ್ಲದೇ ಇತರ ಎಲೆಕ್ಟ್ರಾನಿಕ್ಸ್ ಸಾಧನಗಳ ಉತ್ಪಾದನಾ ವಲಯವನ್ನು ವಿಸ್ತರಿಸುವ ಗುರಿಯನ್ನು ಭಾರತವು ಹಾಕಿಕೊಂಡಿದೆ ಎಂದು ಸಚಿವರು ತಿಳಿಸಿದ್ದಾರೆ.

ಸದ್ಯ, ಭಾರತದ ಮೊಬೈಲ್ ಫೋನ್ ರಫ್ತು ಸುಮಾರು 45 ಸಾವಿರ ಕೋಟಿಯಷ್ಟಿದೆ. ಇದರಲ್ಲಿ ಆ್ಯಪಲ್ ಮತ್ತು ಸ್ಯಾಮ್ಸಂಗ್ ಕಂಪನಿಗಳು ಹೆಚ್ಚು ಪ್ರಾಬಲ್ಯವನ್ನು ಹೊಂದಿವೆ. ಹಾಗಾಗಿ, 2023ರಲ್ಲಿ ಈ ಮೊತ್ತವನ್ನು ಒಂದು ಲಕ್ಷ ಕೋಟಿಗೆ ಏರಿಸುವ ವಿಷನ್ ಮೋದಿ ಅವರದ್ದಾಗಿದೆ ಎಂದು ಸಚಿವ ಚಂದ್ರಶೇಖರ್ ಅವರು ತಿಳಿಸಿದ್ದಾರೆ.

ಕೇವಲ ಮೊಬೈಲ್ ಫೋನ್ ಮಾತ್ರವಲ್ಲದೇ, ಹೀಯರೇಬಲ್(ಕೇಳುವ) ಮತ್ತು ವೀಯರೇಬಲ್(ಧರಿಸುವ) ಸಾಧನಗಳು, ಐಟಿ ಹಾರ್ಡ್‌ವೇರ್, ಕಾಂಪೋನೆಂಟ್ಸ್ ಮತ್ತು ಇತರ ಎಲೆಕ್ಟ್ರಾನಿಕ್ಸ್ ಸಾಧನಗಳ ಉತ್ಪಾದನೆಯನ್ನು ಹೆಚ್ಚಿಸುವ ಬಗ್ಗೆ ಭಾರತವು ಮುಂದಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ | Chinese mobile | 12,000 ರೂ.ಗಿಂತ ಅಗ್ಗದ ಚೈನಾ ಮೊಬೈಲ್‌ ನಿಷೇಧ ಇಲ್ಲ: ರಾಜೀವ್‌ ಚಂದ್ರಶೇಖರ್

Exit mobile version