Site icon Vistara News

ಪಾಸ್‌ಪೋರ್ಟ್‌ ಪೊಲೀಸ್ ದೃಢೀಕರಣಕ್ಕಾಗಿ mPassport Police App ಲಾಂಚ್

mPassport Police App launched and check details

ನವದೆಹಲಿ: ಪಾಸ್‌ಪೋರ್ಟ್ ಪಡೆಯುವ ಪ್ರಕ್ರಿಯೆಗಳನ್ನು ಕೇಂದ್ರ ಸರ್ಕಾರವು ಈಗ ಮತ್ತಷ್ಟು ಸರಳಗೊಳಿಸಿದೆ. ಪಾಸ್‌ಪೋರ್ಟ್ ಪಡೆಯುವ ವ್ಯಕ್ತಿಯು ಪೊಲೀಸ್‌ ದೃಢೀಕರಣ ಮಾಡಿಸುವುದು ಅತ್ಯಗತ್ಯ. ಆದರೆ, ಈ ಪ್ರಕ್ರಿಯೆಯ ಕುರಿತು ಸಾಕಷ್ಟು ದೂರುಗಳಿದ್ದವು. ಈಗ ಕೇಂದ್ರ ಸರ್ಕಾರ ಪೊಲೀಸ್ ದೃಢೀಕರಣವನ್ನು ಡಿಜಿಟಿಲೈಸ್ ಮಾಡಿದೆ. ಇದಕ್ಕಾಗಿ ಭಾರತದ ವಿದೇಶಾಂಗ ಸಚಿವಾಲಯವು ಶುಕ್ರವಾರ mPassport Police App ಲಾಂಚ್ ಮಾಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ದೆಹಲಿ ಪೊಲೀಸ್ ವಿಶೇಷ ಶಾಖೆಯ ಸಿಬ್ಬಂದಿಗೆ 350 ಮೊಬೈಲ್ ಟ್ಯಾಬ್ಲೆಟ್‌ಗಳನ್ನು ಫೋರ್ಸ್ ರೈಸಿಂಗ್ ಡೇ ಸಂದರ್ಭದಲ್ಲಿ ಸಮರ್ಪಿಸಿದರು. ಈ ಸಾಧನಗಳು, ಪಾಸ್‌ಪೋರ್ಟ್‌ಗಾಗಿ, ಪೊಲೀಸ್ ಪರಿಶೀಲನೆ ಮತ್ತು ಸಲ್ಲಿಕೆ ವರದಿಯ ಸಂಪೂರ್ಣ ಪ್ರಕ್ರಿಯೆಯನ್ನು ಕಾಗದರಹಿತಗೊಳಿಸಲು ನೆರವು ನೀಡುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತಿಳಿಸಿದೆ.

ಆ್ಯಪ್ ಬಳಸಿಕೊಂಡು ಟ್ಯಾಬ್ಲೆಟ್ ಮೂಲಕ ಪೊಲೀಸ್ ಪರಿಶೀಲನೆಯನ್ನು ಕೈಗೊಳ್ಳುವುದರಿಂದ 15 ದಿನಗಳ ಪ್ರಕ್ರಿಯೆಯು ಈಗ 5 ದಿನಕ್ಕೆ ಇಳಿಕೆಯಾಗಲಿದೆ ಎಂದು ದಿಲ್ಲಿ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಅಭಿಷೇಕ್ ದುಬೇ ಹೇಳಿದ್ದಾರೆ.

ಇದನ್ನೂ ಓದಿ: Henley Passport Index | ಪಾಕಿಸ್ತಾನದ ಪಾಸ್‌ಪೋರ್ಟ್‌ಗೆ ಬೆಲೆಯೇ ಇಲ್ಲ! ಜಪಾನ್ ಪಾಸ್‌ಪೋರ್ಟ್ ಫುಲ್ ಸ್ಟ್ರಾಂಗ್

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದಿಲ್ಲಿ ಪೊಲೀಸ್ ಸಿಬ್ಬಂದಿಗೆ 350 ಮೊಬೈಲ್ ಟ್ಯಾಬ್ಲೆಟ್‌ಗಳನ್ನು ಅರ್ಪಿಸಿದ್ದಾರೆ. ಈ ಟ್ಯಾಬ್ಲೆಟ್‌ಗಳೊಂದಿಗೆ, ಪಾಸ್‌ಪೋರ್ಟ್ ಅರ್ಜಿ ಪರಿಶೀಲನೆಯ ಸಂಪೂರ್ಣ ಪ್ರಕ್ರಿಯೆಯು ಡಿಜಿಟಲ್ ಮತ್ತು ಪೇಪರ್‌ಲೆಸ್ ಆಗಲಿದೆ ಮತ್ತು ಪರಿಶೀಲನಾ ಸಮಯವನ್ನು 5 ದಿನಗಳವರೆಗೆ ಕಡಿಮೆಗೊಳಿಸಲಾಗುತ್ತದೆ ಎಂದು ದಿಲ್ಲಿ ಪೊಲೀಸ್ ಗುರುವಾರ ಟ್ವೀಟ್ ಮಾಡಿತ್ತು. ಅದೇ ರೀತಿ, ಶುಕ್ರವಾರ ಈ ಹೊಸ ಆ್ಯಪ್‌ ಲಾಂಚ್ ಮಾಡಲಾಗಿದೆ.

Exit mobile version