Site icon Vistara News

Poco F4 5G ಸ್ಮಾರ್ಟ್‌ ಫೋನ್‌ ನಾಳೆ ಬಿಡುಗಡೆ

poco f4 5g

ಬೆಂಗಳೂರು: ಚೀನಾ ಮೂಲದ ಸ್ಮಾರ್ಟ್‌ಫೋನ್‌ ತಯಾರಕ ಕಂಪನಿ ಪೋಕೊ ತನ್ನ ಹೊಚ್ಚ ಹೊಸ Poco F4 5G ಫೋನ್‌ ಅನ್ನು ಗುರುವಾರ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಇದೇ ವೇಳೆ Poco X4 5G ಕೂಡಾ ಅನಾವರಣ ಮಾಡಲಿದೆ.

ಶಿವೊಮಿ ಕಂಪನಿಯ ಸಬ್‌ ಬ್ರಾಂಡ್‌ ಆಗಿರುವ ಪೋಕೊ ತನ್ನ ಎಫ್‌೩ ಸ್ಮಾರ್ಟ್‌ ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿರಲಿಲ್ಲ. ಹೀಗಾಗಿ ಎಫ್‌೪ ಮೊಬೈಲ್‌ ಮಾರಕಟ್ಟೆಗೆ ಬರುತ್ತಿರುವುದು ಪೊಕೋ ಅಭಿಮಾನಿಗಳ ಪಾಲಿಗೆ ಸಂತಸದ ವಿಷಯ. ಮೊಬೈಲ್‌ ಕುರಿತು ಪೋಕೊ ಈಗಾಗಲೇ ಟೀಸರ್‌ ಬಿಡುಗಡೆ ಮಾಡಿದೆ. ಜತೆಗೆ ಫ್ಲೀಪ್‌ ಕಾರ್ಟ್‌ನಲ್ಲಿ ಅದರ ಫೀಚರ್‌ಗಳನ್ನು ಪರಿಚಯಿಸಲಾಗಿದೆ. ಈ ಮೂಲಕ ಫೋನ್‌ ಭಾರತಕ್ಕೆ ಅದ್ಧೂರಿ ಪ್ರವೇಶ ಮಾಡಲಿದೆ.

ಯೂಟ್ಯೂಬ್‌ ಹಾಗೂ ಫೋಕೊ ಸಂಸ್ಥೆಯ ಅಧಿಕೃತ ಸಾಮಾಜಿಕ ಜಾಲತಾಣಗಳ ಮೂಲಕ ಬಿಡುಗಡೆ ಕಾರ್ಯಕ್ರಮವು ಪ್ರಸಾರವಾಗಿದ್ದು, ಸಂಜೆ ೫.೩೦ ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. Poco F4 5G ತಕ್ಷಣದಲ್ಲೇ ಭಾರತದ ಮಾರುಕಟ್ಟೆಗೆ ಲಭ್ಯವಾಗಲಿದ್ದು, ಇ ಕಾಮರ್ಸ್‌ ಸಂಸ್ಥೆ ಫ್ಲಿಪ್‌ ಕಾರ್ಟ್‌ನಲ್ಲಿ ಜೂನ್‌ ೨೩ರಿಂದ ಲಭ್ಯವಾಗುವ ಕುರಿತು ಮಾಹಿತಿ ಪ್ರಕಟಿಸಲಾಗಿದೆ. ಆದರೆ Poco X4 5G ಫೋನ್‌ ತಕ್ಷಣಕ್ಕೆ ಗ್ರಾಹಕರ ಕೈ ತಲುಪುವುದೇ ಎಂಬುದರ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ.

 

ಫೀಚರ್‌ಗಳು

ಪೋಕೊ ಎಫ್‌೪ ಮೊಬೈಲ್‌ನ ಎರಡೂ ಬದಿಗಳು ಸಮತಟ್ಟಾಗಿ ಇರಲಿದ್ದು, ೬೪ ಮೆಗಾ ಪಿಕ್ಸೆಲ್‌ ಸಾಮರ್ಥ್ಯದ ಸೆನ್ಸರ್‌ ಕ್ಯಾಮೆರಾವನ್ನು ಹೊಂದಿದೆ. ಇದು ರೆಡ್‌ಮಿ ಕೆ೪೦ಎಸ್‌ ಮಾದರಿಯ ಸ್ಮಾರ್ಟ್‌ ಫೋನ್‌ ಆಗಿದ್ದರೂ, ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಕ್ಯಾಮೆರಾವನ್ನು ಹೊಂದಿದೆ. ರೆಡ್‌ಮಿಯಲ್ಲಿ ೪೮ ಕ್ಯಾಮೆರಾ ಬಳಸಲಾಗಿತ್ತು.

ಮುಂಭಾಗದಲ್ಲಿ ನಾಲ್ಕನೇ ಪೀಳಿಗೆಯ ಇ೪ ಸೂಪರ್‌ ಅಮೋಲ್ಡ್‌ ಡಿಸ್‌ಪ್ಲೇ ಬಳಸಲಾಗಿದ್ದು, ಎಚ್‌ಡಿಆರ್‌೧೦+ ಹಾಗೂ ಡಾಲ್ಬಿ ವಿಷನ್‌ ಹೊಂದಿದೆ. ಕ್ವಾಲ್‌ಕಾಮ್‌ನ ಸ್ನಾಪ್‌ಡ್ರಾಗನ್‌ ೮೭೦ ಚಿಪ್‌ಸೆಟ್‌ ಹೊಂದಿರುವ ಈ ಮೊಬೈಲ್‌ನಲ್ಲಿ ೧೨ ಜಿಬಿ ಎಲ್‌ಪಿಡಿಡಿಆರ್‌ಎಸ್‌೫ ರಾಮ್‌ ಹಾಗೂ ೨೫೬ ಜಿಬಿ ಯುಎಫ್‌ಎಸ್‌೩.೧ ಸ್ಟೋರೇಜ್‌ ಇದೆ. ಅದೇ ರೀತಿ ಲಿಕ್ವಿಡ್‌ ಕೂಲ್‌ ೨.೦ ತಂತ್ರಜ್ಞಾನವನ್ನು ಪೋಕೊ ಇದರಲ್ಲಿ ಬಳಸಿದೆ.

ಇದನ್ನೂ ಓದಿ| ನಿಮ್ಮ ಮೊಬೈಲ್‌ನಲ್ಲಿ ಈ ಆ್ಯಪ್‌ಗಳಿದ್ದರೆ ಕೂಡಲೇ ಡಿಲೀಟ್‌ ಮಾಡಿ!

Exit mobile version