Site icon Vistara News

Pragya Misra: ಭಾರತದಲ್ಲಿ ತನ್ನ ಮೊದಲ ಉದ್ಯೋಗಿಯನ್ನು ನೇಮಿಸಿದ ಒಪನ್ ಎಐ

Pragya Misra

ಚಾಟ್ ಜಿಪಿಟಿ (ChatGPT ) ಮಾರ್ಕರ್ ಒಪನ್ ಎಐ (OpenAI) ಭಾರತದಲ್ಲಿ (india) ತನ್ನ ಮೊದಲ ಉದ್ಯೋಗಿಯನ್ನು (first employee) ನೇಮಕ ಮಾಡಿದೆ. ಸಾರ್ವಜನಿಕ ನೀತಿ ವ್ಯವಹಾರ ಮತ್ತು ಪಾಲುದಾರಿಕೆಗಳನ್ನು ಮುನ್ನಡೆಸಲು 39 ವರ್ಷದ ಪ್ರಗ್ಯಾ ಮಿಶ್ರಾ (Pragya Misra) ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರದಲ್ಲಿ ಕೃತಕ ಬುದ್ಧಿಮತ್ತೆ (AI) ನಿಯಮಾವಳಿಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುವ ಈ ಸಂದರ್ಭದಲ್ಲಿ ಹೊಸ ಸರ್ಕಾರ ರಚನೆಯ ಸಿದ್ಧತೆಯಲ್ಲಿರುವಾಗ ಈ ಬೆಳವಣಿಗೆ ನಡೆದಿದೆ.ಮೈಕ್ರೋಸಾಫ್ಟ್ ಕಾರ್ಪ್ ಬೆಂಬಲಿತ ಕಂಪೆನಿಯು ಭಾರತದಲ್ಲಿ ಸಾರ್ವಜನಿಕ ನೀತಿ ವ್ಯವಹಾರಗಳು ಮತ್ತು ಪಾಲುದಾರಿಕೆಗಳನ್ನು ಮುನ್ನಡೆಸಲು ಪ್ರಗ್ಯಾ ಮಿಶ್ರಾ ಅವರನ್ನು ನೇಮಿಸಿಕೊಂಡಿದೆ. ಈ ತಿಂಗಳ ಅಂತ್ಯದಿಂದ ಮಿಶ್ರಾ ಅವರು OpenAI ನಲ್ಲಿ ಕೆಲಸ ಪ್ರಾರಂಭಿಸಲಿದ್ದಾರೆ.

ಇದನ್ನೂ ಓದಿ: ಜಗದ ಜನರ ಕೈಗಳಲ್ಲಿ ಮಿನುಗುವ ಮೊಬೈಲ್ ಫೋನುಗಳಲ್ಲೀಗ ಮೇಕ್ ಇನ್ ಇಂಡಿಯಾದ್ದೇ ಮೊಹರು!

ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನವನ್ನು ನಿಯಂತ್ರಿಸಲು ವಿಶ್ವದಾದ್ಯಂತ ಸರ್ಕಾರಗಳು ಪ್ರಯತ್ನಿಸುತ್ತಿದೆ. ಇದಕ್ಕೆ ಅನುಕೂಲಕರವಾಗಿ ನಿಯಮಗಳನ್ನು ರೂಪಿಸಲು AI ಕಂಪೆನಿಯು ಈ ನೇಮಕಾತಿಯನ್ನು ನಡೆಸಿದೆ. OpenAI ನ ಮೊದಲ ಭಾರತೀಯ ಉದ್ಯೋಗಿ ಪ್ರಗ್ಯಾ ಮಿಶ್ರಾ ಅವರ ಕುರಿತಾದ ಕಿರು ಮಾಹಿತಿ ಇಲ್ಲಿದೆ.

ಪ್ರಗ್ಯಾ ಮಿಶ್ರಾ ಅವರ ಪಾತ್ರ?

OpenAI ಯು ಸರ್ಕಾರಿ ಸಂಬಂಧಗಳ ಮುಖ್ಯಸ್ಥರನ್ನಾಗಿ ಪ್ರಗ್ಯಾ ಮಿಶ್ರಾ ಅವರನ್ನು ನೇಮಿಸಿದೆ. ಈ ಮೂಲಕ ಕಂಪೆನಿಗೆ ಮೊದಲ ಭಾರತೀಯರ ನೇಮಕವಾಗಿದೆ. ಕಂಪೆನಿಯು ಈ ನೇಮಕಾತಿಯ ಬಗ್ಗೆ ಇನ್ನೂ ಮಾಹಿತಿ ಬಹಿರಂಗ ಪಡಿಸಿಲ್ಲ ಎಂದು ಬ್ಲೂಮ್‌ಬರ್ಗ್ ತಿಳಿಸಿದ್ದು, ಭಾರತದಲ್ಲಿ ಸಾರ್ವಜನಿಕ ನೀತಿ ವ್ಯವಹಾರಗಳು ಮತ್ತು ಪಾಲುದಾರಿಕೆಗಳನ್ನು ಮುನ್ನಡೆಸಲು ಪ್ರಜ್ಞಾ ಮಿಶ್ರಾ ಅವರನ್ನು ನೇಮಿಸಿಕೊಳ್ಳಲಾಗಿದೆ ಎನ್ನಲಾಗಿದೆ.

ಯಾರು ಪ್ರಗ್ಯಾ ಮಿಶ್ರಾ ?

2021ರ ಜುಲೈ ನಿಂದ ಪ್ರಗ್ಯಾ ಮಿಶ್ರಾ ಅವರು ಟ್ರೂಕಾಲರ್‌ಗಾಗಿ ಸಾರ್ವಜನಿಕ ವ್ಯವಹಾರಗಳ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲಿ ಅವರು ಸರ್ಕಾರಿ ಸಚಿವಾಲಯಗಳು, ಪ್ರಮುಖ ಪಾಲುದಾರರು, ಹೂಡಿಕೆದಾರರು ಮತ್ತು ಮಾಧ್ಯಮ ಪಾಲುದಾರರೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಕೆಲಸ ಮಾಡಿದ್ದಾರೆ. ಮೂರು ವರ್ಷಗಳ ಮೊದಲು ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್‌ನೊಂದಿಗೆ ಕೆಲಸ ಮಾಡಿರುವ ಅವರು 2018 ರಲ್ಲಿ ತಪ್ಪು ಮಾಹಿತಿಯ ವಿರುದ್ಧ WhatsApp ಅಭಿಯಾನವನ್ನು ಮುನ್ನಡೆಸಿದರು. ಅನ್ ಸ್ಟಾರ್ ಆಂಡ್ ಯಂಗ್ ಮತ್ತು ನವದೆಹಲಿಯ ರಾಯಲ್ ಡ್ಯಾನಿಶ್ ರಾಯಭಾರ ಕಚೇರಿಯಲ್ಲೂ ಕೆಲಸ ಮಾಡಿದ ಅನುಭವ ಅವರಿಗಿದೆ.

ಶಿಕ್ಷಣ

ಪ್ರಗ್ಯಾ ಮಿಶ್ರಾ ಅವರು 2012ರಲ್ಲಿ ಇಂಟರ್ನ್ಯಾಷನಲ್ ಮ್ಯಾನೇಜ್ಮೆಂಟ್ ಇನ್ಸ್ ಟಿಟ್ಯೂಟ್ ನಿಂದ ತಮ್ಮ ಎಂಬಿಎ ಪದವಿ ಪಡೆದರು ಮತ್ತು ದೆಹಲಿ ವಿಶ್ವವಿದ್ಯಾಲಯದಿಂದ ವಾಣಿಜ್ಯದಲ್ಲಿ ಪದವೀಧರರಾಗಿದ್ದಾರೆ. ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಪೊಲಿಟಿಕಲ್ ಸೈನ್ಸ್‌ನಿಂದ ಬಾರ್ಗೇನಿಂಗ್ ಮತ್ತು ನೆಗೋಷಿಯೇಷನ್ಸ್‌ನಲ್ಲಿ ಡಿಪ್ಲೊಮಾವನ್ನೂ ಹೊಂದಿದ್ದಾರೆ.

ಗಾಲ್ಫ್ ಆಟಗಾರರು

ಪ್ರಗ್ಯಾ ಮಿಶ್ರಾ ಅವರು 1998 ಮತ್ತು 2007 ರ ನಡುವೆ ಹಲವಾರು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಗಾಲ್ಫ್ ಆಟಗಾರರಾಗಿದ್ದಾರೆ. ಅವರು ಹಾರ್ಟ್‌ಫುಲ್‌ನೆಸ್ ಧ್ಯಾನ ತರಬೇತುದಾರರಾಗಿದ್ದು, ಪ್ರಗ್ಯಾನ್ ಪಾಡ್‌ಕ್ಯಾಸ್ಟ್ ನಿಂದ ಅದನ್ನು ಆಯೋಜಿಸುತ್ತಾರೆ.

ಯಾಕೆ ಈ ನೇಮಕ ?

1.4 ಶತಕೋಟಿ ಜನರು ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯೊಂದಿಗೆ ಭಾರತದಲ್ಲಿ ಗಮನಾರ್ಹ ಬೆಳವಣಿಗೆಯ ಅವಕಾಶವಿದೆ. ವಿಶ್ವಾದ್ಯಂತ ಸರ್ಕಾರಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನವನ್ನು ಹೇಗೆ ನಿಯಂತ್ರಿಸಬೇಕೆಂದು ಪರಿಗಣಿಸುತ್ತಿರುವಾಗ ಅನುಕೂಲಕರವಾದ ನಿಯಮಗಳನ್ನು ರೂಪಿಸಲು AI ಕಂಪೆನಿಯ ಪ್ರಯತ್ನಗಳನ್ನು ಈ ನೇಮಕಾತಿಯು ಎತ್ತಿ ತೋರಿಸಿದೆ. ಹೀಗಾಗಿ ಪ್ರಗ್ಯಾ ಮಿಶ್ರಾ ಅವರಿಗೆ ಇದೊಂದು ಸಾಕಷ್ಟು ಸವಾಲಿನ ಕೆಲಸವಾಗಿರಲಿದೆ.

Exit mobile version