Site icon Vistara News

Reliance Jio: 9 ಪ್ರಶಸ್ತಿ ಗೆದ್ದ ರಿಲಯನ್ಸ್ ಜಿಯೋ! ಅಪ್‌ಲೋಡ್, ಡೌನ್‌ಲೋಡ್‌ ವೇಗದಲ್ಲಿ ನಂಬರ್ 1

RS 5208 crore net profit for Jio infocom in the 3rd quarter

ಮುಂಬೈ: ಓಕ್ಲಾದ ಮೆಟ್ರಿಕ್ ಪರೀಕ್ಷೆಯಲ್ಲಿ ರಿಲಯನ್ಸ್ ಜಿಯೋ (Reliance Jio) ಟಾಪ್ ಟೆಲಿಕಾಂ (Top Telecom) ಆಗಿ ಹೊರಹೊಮ್ಮಿದೆ. 2023ರ ಮೊದಲ ತ್ರೈಮಾಸಿಕದಿಂದ ಎರಡನೇ ತ್ರೈಮಾಸಿಕದಲ್ಲಿ 5ಜಿ ಡೌನ್ ಲೋಡ್ (4G Download) ಮತ್ತು ಅಪ್ ಲೋಡ್ (5G Upload) ವೇಗದಲ್ಲಿ ತನ್ನ ಪ್ರಮುಖ ಪ್ರತಿಸ್ಪರ್ಧಿ ಭಾರ್ತಿ ಏರ್ ಟೆಲ್ ಗಿಂತ (Bharti AirTel) ಭಾರೀ ಅಂತರದಿಂದ ಮುಂದಿದೆ.

“ಭಾರತದ ನಂಬರ್ ಒನ್ ನೆಟ್ ವರ್ಕ್ ಆಗಿ ಜಿಯೋ ರೂಪುಗೊಂಡಿದ್ದು, ಮೊಬೈಲ್ ನೆಟ್ ವರ್ಕ್ ಗಾಗಿ ಮಾರುಕಟ್ಟೆಯ ಎಲ್ಲ ಒಂಬತ್ತು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಜತೆಗೆ 5ಜಿ ನೆಟ್ ವರ್ಕ್ ಗಾಗಿನ ಎಲ್ಲ ಪ್ರಶಸ್ತಿಯನ್ನೂ ಪಡೆದುಕೊಂಡಿದೆ. ಈ ರೀತಿ ಜಗತ್ತಿನಲ್ಲಿ ಯಾವುದೇ ಸೇವಾ ಪೂರೈಕೆದಾರರಿಗೆ ಆಗಿರುವುದು ಇದೇ ಮೊದಲಾಗಿದೆ,” ಎಂದು ಮಂಗಳವಾರ ಓಕ್ಲಾದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಬೆಸ್ಟ್ ಮೊಬೈಲ್ ನೆಟ್ ವರ್ಕ್, ಫಾಸ್ಟೆಸ್ಟ್ ಮೊಬೈಲ್ ನೆಟ್ ವರ್ಕ್, ಬೆಸ್ಟ್ ಮೊಬೈಲ್ ಕವರೇಜ್, ಟಾಪ್ ರೇಟೆಡ್ ಮೊಬೈಲ್ ನೆಟ್ ವರ್ಕ್, ಬೆಸ್ಟ್ ಮೊಬೈಲ್ ವಿಡಿಯೋ ಎಕ್ಸ್ ಪೀರಿಯೆನ್ಸ್, ಬೆಸ್ಟ್ ಮೊಬೈಲ್ ಗೇಮಿಂಗ್ ಎಕ್ಸ್ ಪೀರಿಯೆನ್ಸ್, ಫಾಸ್ಟೆಸ್ಟ್ 5ಜಿ ಮೊಬೈಲ್ ನೆಟ್ ವರ್ಕ್, ಬೆಸ್ಟ್ 5ಜಿ ಮೊಬೈಲ್ ವಿಡಿಯೋ ಎಕ್ಸ್ ಪೀರಿಯೆನ್ಸ್, ಹಾಗೂ ಬೆಸ್ಟ್ 5ಜಿ ಮೊಬೈಲ್ ಗೇಮಿಂಗ್ ಎಕ್ಸ್ ಪೀರಿಯೆನ್ಸ್ ಹೀಗೆ ಒಂಬತ್ತು ಪ್ರಶಸ್ತಿಗಳು ಬಂದಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

5ಜಿ ಮೊಬೈಲ್ ನೆಟ್ ವರ್ಕ್ ಮೆಟ್ರಿಕ್ ನಲ್ಲಿ ಜಿಯೋ 335.75 ಅಂಕ ಪಡೆದ್ದರೆ, ಭಾರ್ತಿ ಏರ್ ಟೆಲ್ 179.49 ಅಂಕ ಪಡೆದಿದೆ. ಜಿಯೋದ 5ಜಿ ಬಳಕೆದಾರರು ಮೀಡಿಯನ್ ಡೌನ್ ಲೋಡ್ ವೇಗ 416.55 ಎಂಬಿಪಿಎಸ್ ಪಡೆಯುತ್ತಿದ್ದರೆ, ಏರ್ ಟೆಲ್ ವೇಗ 213.3 ಎಂಬಿಪಿಎಸ್ ಇದೆ. ಮತ್ತು ಜಿಯೋದ ಮೀಡಿಯನ್ ಅಪ್ ಲೋಡ್ ವೇಗ 21.20 ಎಂಬಿಪಿಎಸ್ ಇದ್ದರೆ, ಏರ್ ಟೆಲ್ ವೇಗ 19.83 ಎಂಬಿಪಿಎಸ್ ಇದೆ.

ಜಿಯೋ 5ಜಿ ಬಳಕೆದಾರರು ಅತಿ ಹೆಚ್ಚು ಡೌನ್ ಲೋಡ್ ವೇಗ ಎಂದು 432.97 ಎಂಬಿಪಿಎಸ್ ಪಡೆದಿದ್ದರೆ, ಅತಿ ಹೆಚ್ಚು ಅಪ್ ಲೋಡ್ ವೇಗ ಎಂದು 19.12 ಎಂಬಿಪಿಎಸ್ ಪಡೆದಿದ್ದಾರೆ. ಮುಂಬೈನಲ್ಲಿ ಏರ್ ಟೆಲ್ ಗ್ರಾಹಕರು ಅತಿ ಹೆಚ್ಚು ಡೌನ್ ಲೋಡ್ ವೇಗ 269.63 ಎಂಬಿಪಿಎಸ್ ವೇಗ ಪಡೆದಿದ್ದಾರೆ. ಮತ್ತು ಅತಿ ಹೆಚ್ಚು ಅಪ್ ಲೋಡ್ ಬೆಂಗಳೂರಿನಲ್ಲಿ ದಾಖಲಿಸಿದ್ದು, 30.83 ಎಂಬಿಪಿಎಸ್ ವೇಗ ಪಡೆದಿದ್ದಾರೆ.

ರಿಲಯನ್ಸ್ ಜಿಯೋದ ಚೇರ್ ಮನ್ ಆಕಾಶ್ ಅಂಬಾನಿ ಮಾತನಾಡಿ, ಭಾರತದಲ್ಲಿ ಡಿಜಿಟಲ್ ಸಮಾಜದ ನಿರ್ಮಾಣ ಕನಸನ್ನು ಸಂಸ್ಥೆಯು ಹೇಳಿಕೊಂಡಿದೆ. ನಮ್ಮ ಜೀವನದ ಎಲ್ಲ ವಲಯಗಳಲ್ಲಿ ಸಕಾರಾತ್ಮಕ ಬದಲಾವಣೆ ಕಾಣುವುದಕ್ಕೆ ತಂತ್ರಜ್ಞಾನವೇ ಚಾಲಕ ಶಕ್ತಿಯಾಗಿದೆ. ಈ ಕ್ರಾಂತಿಗೆ ನಾವು ಕೊಡುಗೆ ನೀಡುತ್ತಿರುವುದು ನಮ್ಮ ಸೌಭಾಗ್ಯ. ಈ ದೃಷ್ಟಿಯನ್ನು ನಿಜ ಮಾಡುವುದಕ್ಕೆ ನಮ್ಮ ಹೃದಯ, ಆತ್ಮವನ್ನು ಇದರಲ್ಲಿ ತುಂಬಿಕೊಂಡಿದ್ದೇವೆ, ಎಂದು ಹೇಳಿದ್ದಾರೆ.

“ವೇಗ, ವಿಡಿಯೋ ಮತ್ತು ಗೇಮಿಂಗ್ ನಲ್ಲಿ ಗ್ರಾಹಕರಿಗೆ ಅತ್ಯುತ್ತಮ ಅನುಭವವನ್ನು ಒದಗಿಸುವುದಕ್ಕೆ ಜಿಯೋ ಹಾಕುತ್ತಿರುವ ಶ್ರಮವನ್ನು ಗುರುತಿಸುವುದಕ್ಕೆ ನಮಗೆ ಬಹಳ ಹೆಮ್ಮೆ ಆಗುತ್ತದೆ. ಈ ಪ್ರಶಸ್ತಿಗಳು ಮತ್ತು ಗುರುತಿಸುವಿಕೆ ಮೂಲಕವಾಗಿ ಭಾರತದಲ್ಲಿಯೇ ಅತಿ ಹೆಚ್ಚು ಪ್ರಶಸ್ತಿ ಪಡೆದ ನೆಟ್ ವರ್ಕ್ ಎನಿಸಿಕೊಂಡಿದೆ. ತನ್ನ ಗ್ರಾಹಕರಿಗೆ ನೆಟ್ ವರ್ಕ್ ಗಳಲ್ಲಿ ಅತ್ಯುತ್ತಮವಾದದ್ದನ್ನೇ ನೀಡಬೇಕು ಎಂಬ ಜಿಯೋದ ಮಹತ್ವಾಕಾಂಕ್ಷಿಯನ್ನು ಇದು ಖಾತ್ರಿಪಡಿಸುತ್ತದೆ,” ಎಂಬುದಾಗಿ ಝಿಫ್ ಡೇವಿಸ್ ಒಂದು ಭಾಗವಾದ ಓಕ್ಲಾದ ಅಧ್ಯಕ್ಷ ಮತ್ತು ಸಿಇಒ ಸ್ಟೀಫನ್ ಬೈ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Reliance Industries: ರಿಲಯನ್ಸ್ ಕಂಪನಿ ಆಡಳಿತ ಮಂಡಳಿಗೆ ಅಂಬಾನಿ ಪುತ್ರ ನೇಮಕ ಆಗೋದು ಡೌಟಾ?

ಆಕಾಶ್ ಅಂಬಾನಿ ಮಾತನಾಡಿ, ಡಿಜಿಟಲ್ ಇಂಡಿಯಾದ ಪೂರ್ತಿ ಪ್ರಯೋಜನವನ್ನು ಸಾಧಿಸುವ ವಿಚಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ. ಮತ್ತು ಭಾರತವನ್ನು ಜಾಗತಿಕ ವೇದಿಕೆಯಲ್ಲಿ ನಾಯಕ ಮಾಡುವುದಕ್ಕೆ ಸಹಾಯ ಮಾಡುತ್ತೇವೆ ಎಂದಿದ್ದಾರೆ. 5ಜಿ ನೆಟ್ ವರ್ಕ್ ಅನ್ನು ತಲುಪಿಸುವುದರಲ್ಲಿ ನಮ್ಮ ವೇಗದ ಕೆಲಸದ ಬಗ್ಗೆ ಬಹಳ ಹೆಮ್ಮೆ ಇದೆ. ಈ ವರ್ಷದ ಡಿಸೆಂಬರ್ ಹೊತ್ತಿಗೆ ಏನು ಇಡೀ ದೇಶದಾದ್ಯಂತ 5ಜಿ ಕವರ್ ಮಾಡುವುದಾಗಿ ಮಾತು ನೀಡಿದ್ದೆವು, ಅದಕ್ಕಿಂತ ಮುಂಚೆಯೇ ಇಡೀ ದೇಶಾದ್ಯಂತ ಕವರ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಜಿಯೋದಿಂದ ಶೇಕಡಾ ಎಂಬತ್ತೈದರಷ್ಟು 5ಜಿ ನಿಯೋಜನೆ ಆಗಿದೆ. ಜಿಯೋ ಕಂಪನಿಯು ಪ್ರತಿ ಹತ್ತು ಸೆಕೆಂಡ್ ಗೆ ಒಂದು 5ಜಿ ಸೆಲ್ ನಿಯೋಜನೆ ಮಾಡುವುದನ್ನು ಮುಂದುವರಿಸಿದೆ. ಜಿಯೋ ಹಾಗೂ ಏರ್ ಟೆಲ್ ಎರಡೂ ತಮ್ಮ 5ಜಿ ಜಾರಿ ತುಂಬ ವೇಗವಾಗಿ ಮುಗಿಸುವುದಕ್ಕೆ ಮುಂದಾಗಿವೆ. ತಮ್ಮ 5ಜಿ ನೆಟ್ ವರ್ಕ್ ಆರಂಭಿಸಿದ ಒಂದು ವರ್ಷದೊಳಗೆ ಐದು ಕೋಟಿ ಬಳಕೆದಾರರ ಗುರಿಯನ್ನು ಮುಟ್ಟಿದ ಬಗ್ಗೆ ಹೇಳಿಕೊಂಡಿವೆ. ವಿಐ (ವೊಡಾಫೋನ್ ಐಡಿಯಾ) 5ಜಿ ನೆಟ್ ವರ್ಕ್ ಆರಂಭಕ್ಕೆ ಸಂಬಂಧಿಸಿದಂತೆ ಇನ್ನೂ ಘೋಷಣೆ ಮಾಡಬೇಕಿದೆ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version