Site icon Vistara News

Tata Motors : ದುಬಾರಿಯಾಗಲಿವೆ ಸಫಾರಿ, ಹ್ಯಾರಿಯರ್​, ನೆಕ್ಸಾನ್​; ಯಾವಾಗ ಬೆಲೆ ಏರಿಕೆ?

tata safari

#image_title

ಮುಂಬಯಿ: ಭಾರತದ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ದೊಡ್ಡ ಸಂಖ್ಯೆಯ ಗ್ರಾಹಕರನ್ನು ಹೊಂದಿರುವ ಟಾಟಾ ಮೋಟಾರ್ಸ್ (Tata Motors)​ ತನ್ನ ಪ್ರಯಾಣಿಕ ಕಾರುಗಳ ಬೆಲೆಯನ್ನು ಮತ್ತೊಂದು ಬಾರಿ ಏರಿಕೆ ಮಾಡಲು ನಿರ್ಧರಿಸಿದೆ. ಹೊಸ ದರ ಫೆಬ್ರವರಿ 1ರಿಂದ ಏರಿಕೆಯಾಗಲಿದ್ದು, ಕಂಪನಿಯು ಉತ್ಪಾದಿಸುವ ಬಹುತೇಕ ಕಾರುಗಳಿಗೆ ಇದು ಅನ್ವಯವಾಗಲಿದೆ. ಹೀಗಾಗಿ ಟಾಟಾದ ಸಫಾರಿ, ಹ್ಯಾರಿಯರ್​, ನೆಕ್ಸಾನ್​ ಸೇರಿದಂತೆ ಎಲ್ಲ ಕಾರುಗಳ ಬೆಲೆ ಫೆಬ್ರವರಿಯಿಂದ ಶೇಕಡಾ 1.5 ರಷ್ಟು ಏರಿಕೆಯಾಗಲಿದೆ. ದರ ಏರಿಕೆಗೆ ಉತ್ಪಾದನಾ ವೆಚ್ಚದ ಹೆಚ್ಚಳವೇ ಕಾರಣ ಎಂದು ಕಂಪನಿಯು ಹೇಳಿದೆ. ಆದರೆ, ಎರಡು ತಿಂಗಳಲ್ಲಿ ಎರಡೆರಡು ಬಾರಿ ದರ ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ನಿರಾಸೆ ಮೂಡಿಸಿದೆ ಟಾಟಾ ಮೋಟಾರ್ಸ್​ (Tata Motors).

2022ರ ಡಿಸೆಂಬರ್​ನಲ್ಲಿ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಬೆಲೆ ಏರಿಕೆ ಮಾಡುವುದಾಗಿ Tata Motors ಹೇಳಿತ್ತು. ಇದರಿಂದಾಗಿ ಟಿಯಾಗೊದಿಂದ ಹಿಡಿದು ಹ್ಯಾರಿಯರ್​ ತನಕದ ಎಲ್ಲ ಕಾರುಗಳ ಬೆಲೆ ಏರಿಕೆಯಾಗಿದ್ದವು. ಇವಿ ಕಾರುಗಳಿಗೂ ಬೆಲೆ ಏರಿಕೆಯ ಬಿಸಿ ತಟ್ಟಿತ್ತು. ಇದೀಗ ಮತ್ತೊಂದು ಬಾರಿ ನಷ್ಟ ಸರಿದೂಗಿಸಲು ಕಂಪನಿ ಮುಂದಾಗಿದೆ.

ಅಗ್ಗದ ಬೆಲೆಯಲ್ಲಿ ಗಟ್ಟಿಮುಟ್ಟಾಗಿರುವ ಕಾರುಗಳನ್ನು ಭಾರತದ ಮಾರುಕಟ್ಟೆಗೆ ಇಳಿಸುವ ಮೂಲಕ Tata Motors ಮೋಟಾರ್ಸ್​ ಗ್ರಾಹಕರ ವಿಶ್ವಾಸ ಬೆಳೆಸಿಕೊಂಡಿತ್ತು. ಹೀಗಾಗಿ ವರ್ಷದಿಂದ ವರ್ಷಕ್ಕೆ ಕಂಪನಿಯ ಒಟ್ಟು ಮಾರಾಟದಲ್ಲಿ ಪ್ರಗತಿ ಉಂಟಾಗಿತ್ತು. ಕಳೆದ ತಿಂಗಳು ನಡೆದ ಆಟೋ ಎಕ್ಸ್​ಪೋದಲ್ಲಿ ಹಲವಾರು ಹೊಸ ಕಾರುಗಳನ್ನು ಪರಿಚಯ ಮಾಡುವ ಮೂಲಕವೂ ವಿಶ್ವಾಸ ಮೂಡಿಸಿತ್ತು.

ಸರಕಾರದ ಹೊಸ ಮಾನದಂಡಗಳನ್ನು ಪೂರೈಸುವ ವೇಳೆ ಕಂಪನಿಯ ಉತ್ಪಾದನಾ ವೆಚ್ಚವೂ ಏರಿಕೆ ಕಾಣುತ್ತಿದೆ. ಈ ನಷ್ಟವನ್ನು ತಪ್ಪಿಸುವ ಉದ್ದೇಶದಿಂದ ಬೆಲೆ ಏರಿಕೆ ಮಾಡುವುದಾಗಿ ಕಂಪನಿ ತಿಳಿಸಿದೆ.

ಇದನ್ನೂ ಓದಿ : Mahindra & Mahindra | ಪುಣೆಯಲ್ಲಿ ಹೊಸ ಇವಿ ಕಾರು ಉತ್ಪಾದನಾ ಘಟಕ ಸ್ಥಾಪಿಸಲಿದೆ ಮಹೀಂದ್ರಾ

ಜಪಾನ್​ ದೇಶವನ್ನು ಹಿಂದಿಕ್ಕುವ ಮೂಲಕ ಭಾರತ ಕೆಲವು ದಿನಗಳ ಹಿಂದೆ ವಾಹನಗಳ ಮಾರುಕಟ್ಟೆಯಲ್ಲಿ ವಿಶ್ವದ ಮೂರನೇ ಸ್ಥಾನವನ್ನು ಪಡೆದುಕೊಂಡಿತ್ತು. ಪರಿಣತರ ಪ್ರಕಾರ ಇದೇ ರೀತಿ ಬೆಲೆ ಏರಿಕೆ ಮಾಡಿದರೆ ಹೊಸ ಕಾರು ಖರೀದಿದಾರರ ನಿರ್ಧಾರದ ಮೇಲೆ ಪರಿಣಾಮ ಬೀರಲಿದೆ.

Exit mobile version