Site icon Vistara News

Supreme Court ಸೃಷ್ಟಿಸಿದ ಇತಿಹಾಸಕ್ಕೆ ಬೆಂಗಳೂರಿಗರ ಕೊಡುಗೆ! ಏನಿದು AI ಟ್ರಾನ್ಸ್‌ಕ್ರಿಪ್ಷನ್ ಟೂಲ್?

Supreme Court

Supreme Court Strikes Down Electoral Bonds Scheme: What Are The Reasons? What is the Scheme?

ನವದೆಹಲಿ: ಭಾರತದ ಟಾಪ್ ಕೋರ್ಟ್ ಆಗಿರುವ ಸುಪ್ರೀಂ ಕೋರ್ಟ್ (Supreme Court) ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಕೃತಕ ಬುದ್ಧಿಮತ್ತೆ(artificial intelligence-AI) ಆಧರಿತ ಟೂಲ್ ಬಳಸಲು ಆರಂಭಿಸಿದೆ. ಈ ಟೂಲ್ ಬಳಸಿಕೊಂಡು, ಕಲಾಪವನ್ನು ನೇರವಾಗಿ ಪ್ರತಿಲೇಖನ( transcription) ಮಾಡಬಹುದಾಗಿದೆ. ಸುಪ್ರೀಂ ಕೋರ್ಟ್ ಟೂಲ್ ಬಳಕೆಯನ್ನು ಆರಂಭಿಸಿದೆ. ಇದರಿಂದ ರಿಯಲ್ ಟೈಮ್‌ನಲ್ಲಿ ಲೈವ್ ವಿಚಾರಣೆಯ ಟ್ರಾನ್ಸ್‌ಕ್ರಿಪ್ಷನ್ ಪಡೆದುಕೊಳ್ಳಬಹುದಾಗಿದೆ. ಅಂದ ಹಾಗೆ, ಈ ಟೂಲ್ ವಿನ್ಯಾಸಕ್ಕೂ ಬೆಂಗಳೂರಿಗೆ ಸಂಬಂಧವಿದೆ!

ಹೌದು, ಸುಪ್ರೀಂ ಕೋರ್ಟ್ ಬಳಸುತ್ತಿರುವ ಟ್ರಾನ್ಸ್‌ಕ್ರಿಪ್ಷನ್ ಟೂಲ್ TRES(Technology Enabled RESolution) ಎಐ ಎಂಜಿನ್ ಅನ್ನು ಬೆಂಗಳೂರಿನ ವಿಕಾಸ್ ಮಹೇಂದ್ರ ಮತ್ತು ಅವರ ಸಹೋದರ ವಿನಯ್ ಮಹೇಂದ್ರ ಹಾಗೂ ಅವರ ಸಹೋದರ ಸಂಬಂಧಿ ಬದರಿ ವಿಶಾಲ್ ಸೃಷ್ಟಿಸಿದ್ದಾರೆ.

ಮಹಾರಾಷ್ಟ್ರ ರಾಜಕೀಯ ವಿವಾದದ ಕುರಿತು ಸಾಂವಿಧಾನಿಕ ಪೀಠದ ವಿಚಾರಣೆಗೆ ಸಂಬಂಧಿಸಿದ ನೇರ ಪ್ರಕ್ರಿಯೆಯಲ್ಲಿ ನ್ಯಾಯಾಲಯದ ವಾದಗಳನ್ನು ಈ ಎಐ ಆಧರಿತ ಟೂಲ್ TRES ಬಳಸಿಕೊಂಡು ಟ್ರಾನ್ಸ್‌ಕ್ರಿಪ್ಷನ್ ಮಾಡಲಾಯಿತು. ಇದರೊಂದಿಗೆ ಸುಪ್ರೀಂ ಕೋರ್ಟ್ ಹೊಸ ಇತಿಹಾಸವನ್ನು ಬರೆಯಿತು.

ಇದನ್ನೂ ಓದಿ: Pawan Khera: ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಸುಪ್ರೀಂ ಕೋರ್ಟ್ ಮಧ್ಯಂತರ ಬೇಲ್

ನೇರ ವಿಚಾರಣ, ಕಲಾಪ ಮತ್ತು ವಾದ-ಪ್ರತಿವಾದಗಳನ್ನು ಪ್ರತಿಲೇಖನ(ಟ್ರಾನ್ಸ್‌ಕ್ಪಿಪ್ಷನ್) ಮಾಡುವ ಕ್ರಿಯೆ ಸದ್ಯಕ್ಕೆ ಪ್ರಾಯೋಗಿಕ ಪ್ರಾಜೆಕ್ಟ ಆಗಿದೆ. ಕಾನೂನು ತಜ್ಞರು ಇದನ್ನು ಕಾನೂನು ಪ್ರತಿಲೇಖನಕ್ಕಾಗಿ ತಂತ್ರಜ್ಞಾನದ-ಮೊದಲ ಕಾರ್ಯತಂತ್ರವಾಗಿ ಬೆಂಬಲಿಸಿದ್ದಾರೆ. ಕೋರ್ಟ್‌ನಲ್ಲಿ ಮಾತನಾಡುವ ಪ್ರತಿಯೊಂದು ಪದವನ್ನು ದಾಖಲಿಸುವುದರಿಂದ ಹೊಣೆಗಾರಿಕೆ ಮತ್ತು ಮುಕ್ತತೆಯನ್ನು ಹೆಚ್ಚಿಸುತ್ತದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

Exit mobile version