ನವ ದೆಹಲಿ: ಭಾರತದ ಮಾರುಕಟ್ಟೆಯಲ್ಲಿರುವ ಅತ್ಯಂತ ಯಶಸ್ವಿ ಬ್ಯಾಟರಿ ಚಾಲಿತ ಕಾರು Tata Nexon EV ಮಾಲೀಕರಿಗೆ ಇನ್ನಷ್ಟು ಸ್ಮಾರ್ಟ್ ಫೀಚರ್‌ಗಳನ್ನು ಕಂಪನಿಯು ಬಿಡುಗಡೆ ಮಾಡಿದೆ. EV Prime ಸಾಫ್ಟ್‌ವೇರ್ ಅಪ್‌ಡೇಟ್ ಮಾಡುವುದರೊಂದಿಗೆ ಹಾಲಿ ಗ್ರಾಹಕರು ಈ ಅನುಕೂಲಕ ಪಡೆಯಬಹುದಾಗಿದೆ.
ಮಲ್ಟಿ ಮೋಡ್ ರೀಗೇನ್, ಕ್ರೂಸ್ ಕಂಟ್ರೋಲ್, ಸ್ಮಾರ್ಟ್ ವಾಚ್ ಇಂಟಗ್ರೇಟೆಡ್ ಕನೆಕ್ಟಿವಿಟ್ ಫೀಚರ್ಸ್, iTPMS ಫೀಚರ್‌ಗಳನ್ನು ನೀಡಲಾಗಿದೆ. ಈಗಾಗಲೇ ಕಾರು ಖರೀದಿ ಮಾಡಿರುವ ೨೨ ಸಾವಿರ ಗ್ರಾಹಕರು ಅಧಿಕೃತ ಡೀಲರ್‌ಗಳ ಮೂಲಕ ಈ ಸಾಫ್ಟ್‌ವೇರ್‌ಗಳನ್ನು ಅಪ್‌ಡೇಟ್ ಮಾಡಬಹುದಾಗಿದೆ. ಈ ಅಪ್‌ಡೇಟ್ ಉಚಿತವಾಗಿದ್ದು, ಜುಲೈ ೨೫ರಿಂದ ದೊರೆಯಲಿದೆ. ಮುಂದುವರಿದ ಎಲ್ಲ ಅಪ್‌ಡೇಟ್‌ಗಳಿಗೆ ದರವನ್ನು ನಿಗದಿಪಡಿಸುವುದಾಗಿ ಇದೇ ವೇಳೆ ಕಂಪನಿ ಹೇಳಿದೆ.
ನೆಕ್ಸಾನ್ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಡಿಮೆ ಬೆಲೆಯೆ ಎಲೆಕ್ಟ್ರಿಕ್ ಎಸ್‌ಯುವಿ ಕಾರು. ಇದು ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ ೩೧ ೨ ಕಿಲೋ ಮೀಟರ್ ದೂರದವರೆಗೆ ಸಾಗುತ್ತದೆ. ೩೦. ೨ ಕಿಲೋವ್ಯಾಟ್ ಸಾಮರ್ಥ್ಯದ ಲೀಥಿಯಮ್ ಬ್ಯಾಟರಿ ಕಾರಿನಲ್ಲಿದ್ದು, ೧೨೯ ಪಿಎಸ್ ಪವರ್ ಸೃಷ್ಟಿಸಬಲ್ಲ ಮೋಟಾರ್ ಹೊಂದಿದೆ. ಇದರಲ್ಲಿ ೩೫ ಮೊಬೈಲ್ app ಕನೆಕ್ಟೆಡ್ ಫೀಚರ್‌ಗಳಿದ್ದು, ರಿಮೋಟ್ ಕಮಾಂಡ್, ವೆಹಿಕಲ್ ಟ್ರ್ಯಾಕಿಂಗ್, ಡ್ರೈವಿಂಗ್ ಬಿಹೇವಿಯರ್ ಅನಾಲಿಟಿಕ್ಸ್, ನಾವಿಗೇಷನ್, ರಿಮೋಟ್ ಡಯಾಗ್ನಾಸ್ಟಿಕ್ ಮಾಡಬಹುದಾಗಿದೆ.
ಇದನ್ನೂ ಓದಿ | EV ಉತ್ಪಾದನೆಗೆ ಟಾಟಾ ಹೂಡಿಕೆ ಹೆಚ್ಚಳ