ನವ ದೆಹಲಿ : ಟಾಟಾ ಮೋಟಾರ್ಸ್ ಕಂಪನಿಯು ತನ್ನ ಎಸ್ಯುವಿ ಕಾರುಗಳ ಜೆಟ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ತಯಾರಕ ಕಂಪನಿಯ ಪ್ರಕಾರ ಐಷಾರಾಮಿ ವಿಮಾನದ ಕಲ್ಪನೆಯೊಂದಿಗೆ ಜೆಟ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ. ಜೆಟ್ ಆವೃತ್ತಿಯ ಕಾರುಗಳ ಎಕ್ಸ್ಟೀರಿಯರ್ ಹಾಗೂ ಇಂಟೀರಿಯರ್ಗೆ ಕಾಸ್ಮೆಟಿಕ್ ಸುಧಾರಣೆ ಕೊಡಲಾಗಿದೆ. ಆದರೆ ಯಾವುದೇ ಕಾರುಗಳಿಗೆ ಮೆಕ್ಯಾನಿಕಲ್ ಸುಧಾರಣೆ ನೀಡಲಾಗಿಲ್ಲ.
ಜೆಟ್ ಮಾದರಿಯ ಎಲ್ಲ ಕಾರುಗಳ ಎಕ್ಸ್ಟೀರಿಯರ್ಗೆ ಸ್ಟಾರ್ಲೈಟ್ ಎಂದು ಕರೆಯಲಾಗಿದೆ. ಇದೊಂದು ಡ್ಯಯಲ್ ಟೋನ್ ಕಾಂಬಿನೇಷನ್ ಆಗಿದ್ದು, ಅರ್ಥೀ ಬ್ರಾಂಜ್ ಬಾಡಿ ಕಲರ್ ಹಾಗೂ ಪ್ಲಾಟಿನಮ್ ಸಿಲ್ವರ್ ರೂಪ್ ಕಲರ್ ನೀಡಲಾಗಿದೆ. ಆಲಾಯ್ ವೀಲ್ಗಳಿಗೆ ಜೆಟ್ ಬ್ಲ್ಯಾಕ್ ಕಲರ್ ನೀಡಲಾಗಿದೆ. ಮುಂಬದಿಯ ಹಾಗೂ ಹಿಂಬದಿಯ ಸ್ಕಿಡ್ ಪ್ಲೇಟ್ಗಳಿಗೆ ಸಿಲ್ವರ್ ಬಣ್ಣ ನೀಡಲಾಗಿದೆ.
ಇಂಟೀರಿಯರ್ ಕೂಡ ಡ್ಯುಯಲ್ ಟೋನ್ ಶೇಡ್ ನೀಡಲಾಗಿದೆ. ಟಾಟಾ ಮೋಟಾರ್ಸ್ ಆಯಿಸ್ಟರ್ ವೈಟ್ ಹಾಗೂ ಗ್ರಾನೈಟ್ ಬ್ಲ್ಯಾಕ್ ಕಲರ್ ಬಳಸಿಕೊಂಡಿದೆ. ಡ್ಯಾಶ್ ಬೋರ್ಡ್, ಸೆಂಟ್ರಲ್ ಕನ್ಸೋಲ್ ಹಾಗೂ ಡೋರ್ ಪ್ಯಾಡ್ಗಳಿಗೆ ಬ್ರಾಂಜ್ ಟಚ್ ಕೊಡಲಾಗಿದೆ. ಜೆಟ್ ಆವೃತ್ತಿಯ ಕಾರುಗಳ ಸೀಟ್ ಕೂಡ ಭಿನ್ನವಾಗಿದ್ದು, ಟ್ರೈ ಆರೋ ವಿನ್ಯಾಸದೊಂದಿಗೆ ಡೆಕೊ ಸ್ಟಿಚ್ಚಿಂಗ್ ಹೊಂದಿದೆ. ಇದು ಬ್ರಾಂಜ್ ಥ್ರೆಡ್ ಹೊಂದಿದ್ದು, ಹೆಡ್ ರೆಸ್ಟ್ಗೆ ಎಂಬ್ರಾಯಿಡರಿ ಮಾಡಲಾಗಿದೆ.
ನೆಕ್ಸಾನ್ ವೆಂಟಿಲೇಟೆಡ್ ಫ್ರಂಟ್ ಸೀಟ್ ಆಯ್ಕೆ ನೀಡಲಾಗಿದ್ದು, ಎಲೆಕ್ಟ್ರಿಕ್ ಸನ್ರೂಫ್ ಹಾಗೂ ಟಿಲ್ಟ್ ಫಂಕ್ಷನ್ ಕೊಡಲಾಗಿದೆ. ವೈರ್ಲೆಸ್ ಚಾರ್ಜರ್ ಹಾಗೂ ಏರ್ಫ್ಯೂರಿಫೈಯರ್ ಮತ್ತಷ್ಟು ಸೇರ್ಪಡೆಯಾಗಿದೆ.
ಸಫಾರಿ ಹಾಗೂ ಹ್ಯಾರಿಯರ್ನಲ್ಲಿ ಡ್ರೈವ್ ಡೋಸ್ ಆಫ್ ಅಲರ್ಟ್, ಪ್ಯಾನಿಕ್ ಬ್ರೇಕ್ ಅಲರ್ಟ್, ಆಫ್ಟರ್ ಇಂಪಾಕ್ಟ್ ಬ್ರೇಕಿಂಗ್ ಸೇರಿಸಲಾಗಿದೆ. ಇದು ಈ ಕಾರು ಈಗಾಗಲೇ ಹೊಂದಿರುವ ಕೆಲವು ಸುರಕ್ಷತಾ ಲಕ್ಷಣಗಳಿಗೆ ಸೇರ್ಪಡೆಯಾಗಿದೆ.
ಇದನ್ನೂ ಓದಿ | ಗುಜರಾತ್‌ನಲ್ಲಿ ಫೋರ್ಡ್ ಘಟಕವನ್ನು 750 ಕೋಟಿ ರೂ.ಗೆ ಖರೀದಿಸಲಿರುವ ಟಾಟಾ ಮೋಟಾರ್ಸ್