Site icon Vistara News

Tata Motors : ಟಾಟಾ ಕಾರುಗಳ ಎಂಜಿನ್​ ವಾರಂಟಿ ಹೆಚ್ಚಳ; ಬಿಎಸ್​VI ಹೊಸ ಮಾನದಂಡಗಳ ಅಳವಡಿಕೆ

tata cars

#image_title

ಮುಂಬಯಿ: ಭಾರತ ಮೂಲದ ಆಟೋಮೊಬೈಲ್​ ಕಂಪನಿ ಟಾಟಾ ಮೋಟಾರ್ಸ್ (Tata Motors)​ ತನ್ನ ಪ್ರಯಾಣಿಕ ವಾಹನಗಳ ಎಂಜಿನ್​ಗೆ ನೀಡುವ ವಾರಂಟಿಯನ್ನು ಗಣನೀಯವಾಗಿ ಹೆಚ್ಚಿಸಿದೆ. ಇದುವರೆಗೆ 75 ಸಾವಿರ ಕಿಲೋಮೀಟರ್​ ಅಥವಾ 2 ವರ್ಷ ವಾರಂಟಿ ನೀಡುತ್ತಿದ್ದ ಕಂಪನಿ ಇನ್ನು ಮುಂದೆ 1 ಲಕ್ಷ ಕಿಲೋಮೀಟರ್ ಅಥವಾ 3 ವರ್ಷದ ವಾರಂಟಿಯನ್ನು ಗ್ರಾಹಕರಿಗೆ ನೀಡಲಿದೆ. ಇದೇ ವೇಳೆ ಬಿಎಸ್​VI ಎರಡನೇ ಹಂತದ ಮಾನದಂಡಗಳನ್ನು ಎಂಜಿನ್​ಗೆ ಸೇರಿಸಿದೆ. ಅಂದರೆ, ಇನ್ನು ಮುಂದೆ ಟಾಟಾ ಕಾರುಗಳಲ್ಲಿ ಆರ್​ಡಿಇ (real driving emissions) ಮತ್ತು ಇ20 (20 percent ethanol and petrol blend) ವಿಶೇಷತೆಗಳನ್ನು ಹೊಂದಿರುವ ಎಂಜಿನ್ ಇರಲಿವೆ.

ಟಾಟಾ ಪಂಚ್​ ಮತ್ತು ಆಲ್ಟ್ರೋಜ್​

ಟಾಟಾ ಮೋಟಾರ್ಸ್​ನ ಭರವಸೆಯ ಕಾರುಗಳಾದ ಟಾಟಾ ಪಂಚ್​ (Tata Punch) ಹಾಗೂ ಟಾಟಾ ಆಲ್ಟ್ರೋಜ್​ (Tata Aaltroz) ಕಾರಿನಲ್ಲಿ ಸುಧಾರಿತ ಎಂಜಿನ್​ ಅಳವಡಿಸಲಾಗಿದೆ. ಕೇಂದ್ರ ಸರಕಾರ ಬಿಎಸ್​6 ಎರಡನೇ ಹಂತದ ಮಾನದಂಡಗಳನ್ನು ಅಳವಡಿಸಿಕೊಳ್ಳುವುದಕ್ಕೆ ಏಪ್ರಿಲ್​ 31 ಕೊನೇ ದಿನಾಂಕವೆಂದು ನಿಗದಿ ಮಾಡಿತ್ತು. ಅದಕ್ಕೆ ಮೊದಲೇ ಟಾಟಾ ಹೊಸ ಎಂಜಿನ್​ಗಳನ್ನು ಜಾರಿಗೆ ತಂದಿದೆ. ಈ ಎಂಜಿನ್​ಗಳು ಕಡಿಮೆ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡ್​ ಅನ್ನು ಪರಿಸರಕ್ಕೆ ಹೊರಸೂಸಲಿದೆ. ಅಲ್ಲದೆ, ಶೇ 20ರಷ್ಟು ಎಥೆನಾಲ್​ ಮಿಶ್ರಣ ಮಾಡಿದ ಪೆಟ್ರೋಲ್​ ಬಳಸಲೂ ಸಾಧ್ಯವಿದೆ. ಇದರ ಜತೆಗೆ ಕಾರಿನ ಮೈಲೇಜ್​ ಕೂಡ ಹೆಚ್ಚಿಸಲಾಗಿದ್ದು, ಪ್ರಯಾಣದ ಅನುಭವವನ್ನೂ ಹೆಚ್ಚಿಸಲಾಗಿದೆ.

ಟಾಟ ಟಿಯಾಗೊ ಮತ್ತು ಟಿಗೋರ್​

ಟಾಟಾ ಟಿಯಾಗೊ ಮತ್ತ ಟಿಗೋರ್ ಕಾರಿನಲ್ಲಿ ಒತ್ತಡ ನಿರ್ವಹಣಾ ವ್ಯವಸ್ಥೆಯೊಂದನ್ನು ಅಳವಡಿಸಿದೆ. ಇದರ ಮೂಲಕ ಈ ಎರಡೂ ಕಾರುಗಳು ಎನ್​ವಿಎಚ್​ ಕಡಿಮೆಯಾಗಿದ್ದು, ಕ್ಯಾಬಿನ್​ ಅನುಭವ ವೃದ್ಧಿಸಿದೆ.

ಡೀಸೆಲ್​ ಎಂಜಿನ್​ಗಳು

ನೆಕ್ಸಾನ್​ (Tata Nexon) ಮತ್ತು ಆಲ್ಟ್ರೂಜ್​ ಕಾರಿನ ಡೀಸೆಲ್​ ಎಂಜಿನ್​ನಲ್ಲಿ ಸುಧಾರಣೆ ಮಾಡಿದ್ದೇವೆ ಎಂದು ಟಾಟಾ ಮೋಟಾರ್ಸ್​ ಕಂಪನಿ ಹೇಳಿದೆ. ಆದರೆ ಸ್ಪಷ್ಟ ಮಾಹಿತಿ ನೀಡಿಲ್ಲ.

ಇದನ್ನೂ ಓದಿ : TATA Motors | ನವೆಂಬರ್‌ 7ರಿಂದ ಟಾಟಾ ಮೋಟಾರ್ಸ್‌ ಕಾರುಗಳ ದರ ಏರಿಕೆ

ಟಾಟಾ ಮೋಟಾರ್ಸ್​​ನ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ರಾಜನ್​ ಅಂಬಾ ಹೊಸ ಬದಲಾವಣೆ ಕುರಿತು ಮಾಹಿತಿ ನೀಡಿದ್ದು, ಪರಿಸರಕ್ಕೆ ಪೂರಕವಾಗಿರುವ ಕೇಂದ್ರ ಸರಕಾರದ ಎಲ್ಲ ಯೋಜನೆಗಳಿಗೆ ಟಾಟಾ ಮೋಟಾರ್ಸ್ ಹೆಚ್ಚಿನ ಆದ್ಯತೆ ನೀಡುತ್ತದೆ. ಪರಿಸರಕ್ಕೆ ಪೂರಕ ತಾಂತ್ರಿಕತೆಯ ಆವಿಷ್ಕಾರ ಹಾಗೂ ಕಾರಿನ ಮಾಲೀಕರಿಗೆ ಉತ್ತಮ ಸವಾರಿ ಅನುಭವ ನೀಡುವಲ್ಲಿ ಟಾಟಾ ಮೋಟಾರ್ಸ್ ನಿರಂತರ ಅಧ್ಯಯನ ಮಾಡುತ್ತಿದೆ. ಅದರಂತೆ ಇದೀಗ ಎಂಜಿನ್​ಗಳಲ್ಲಿ ಸುಧಾರಣೆ ಮಾಡಲಾಗಿದೆ. ಇದರಿಂದ ಕಾರುಗಳ ಮಾರಾಟದಲ್ಲಿ ಹೆಚ್ಚಳವಾಗುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.

Exit mobile version