ಬೆಂಗಳೂರು: ನೋಕಿಯಾ ಒಂದು ಕಾಲದಲ್ಲಿ ಭಾರತದ ಮೊಬೈಲ್‌ಮಾರುಕಟ್ಟೆಯ ಕಿಂಗ್. ಪ್ರತಿಯೊಬ್ಬರ ಮುಷ್ಟಿಯೊಳಗೂ ನೋಕಿಯಾದ ನಾನಾ ಮಾದರಿಯ ಬೇಸಿಕ್‌ಫೊನ್‌ಗಳು ಬಂಧಿಯಾಗಿದ್ದವು. ಆದರೆ, ಕಾಲಕ್ರಮೇಣ ನೋಕಿಯಾ ತೆರೆ ಮರೆಗೆ ಸರಿಯಿತು. ಸ್ಮಾರ್ಟ್‌ಫೋನ್ ಜಮಾನದಲ್ಲಿ ನೋಕಿಯಾವನ್ನು ಜನ ಸಂಪೂರ್ಣವಾಗಿ ಮರೆತುಬಿಟ್ಟರು. ಇದೀಗ ಹೊಸ ಯೋಜನೆಯೊಂದಿಗೆ ಭಾರತೀಯ ಮಾರಕಟ್ಟೆಗೆ ಪ್ರವೇಶ ಆಡಲು ಬಯಸುತ್ತಿರುವ ಫಿನ್‌ಲ್ಯಾಂಡ್ ಮೂಲದ ನೋಕಿಯಾ, ದೀರ್ಘ ಕಾಲದ ಬ್ಯಾಟರಿ ಬಾಳಿಕೆಯ ಬೇಸಿಕ್‌ಫೋನ್ ನೋಕಿಯಾ 8210 ಅನ್ನು ಬಿಡುಗಡೆ ಮಾಡಿದೆ. ಎಷ್ಟೆಂದರೆ ಈ ಫೋನ್‌ಗಳನ್ನು ಒಂದು ಬಾರಿ ಚಾರ್ಜ್‌ಮಾಡಿದರೆ 27 ದಿನಗಳ ಕಾಲ ಸ್ಟಾಂಡ್ ಬೈ ಮೋಡ್‌ನಲ್ಲಿ ಇಟ್ಟುಕೊಳ್ಳಬಹುದು ಎಂದು ಕಂಪನಿ ಹೇಳಿದೆ.
ನೋಕಿಯಾ 8210 ಬೇಸಿಕ್ ಫೋನ್ ಆಗಿದ್ದರೂ, 4G ಸಂಪರ್ಕವನ್ನು ಹೊಂದಿದೆ. ಕಾಲ್, ಮ್ಯೂಸಿಕ್, ಮೆಸೇಜ್ ಹಾಗೂ ಜನಪ್ರಿಯ ಸ್ನೇಕ್‌ಗೇಮ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಹೊಂದಿದೆ, ಎಲ್ಲದಕ್ಕಿಂತ ಮಿಗಿಲಾಗಿ ದೀರ್ಘ ಕಾಲದ ಬ್ಯಾಟರಿ ಬಾಳಿಕೆಯ ಇದರ ಮೂಲ ಉದ್ದೇಶ. ಇಷ್ಟೆಲ್ಲ ಸೌಲಭ್ಯಗಳನ್ನು ಹೊಂದಿರುವ ಈ ಫೋನ್ ಬೆಲೆ ೩೯೯೯ ರೂಪಾಯಿ.
ನೋಕಿಯಾ 8210 ನೋಕಿಯಾದ ಅಧಿಕೃತ ವೆಬ್‌ಸೈಟ್ ಹಾಗೂ ಅಮೆಜಾನ್‌ಪ್ರೈಮ್‌ನಲ್ಲಿ ಮಾತ್ರ ಲಭಿಸಿದೆ. ಡಾರ್ಕ್‌ಬ್ಲೂ ಹಾಗೂ ಕೆಂಪು ಬಣ್ಣದಲ್ಲಿ ಮೊಬೈಲ್ ಲಭ್ಯವಿದೆ. ಅಂತೆಯೇ ಇದನ್ನು ಒಂದು ವರ್ಷದೊಳಗೆ ಬೇರೆ ಫೋನ್ ಜತೆ ಬದಲಾಯಿಸುವ (ಎಕ್ಸ್‌ಚೇಂಜ್) ಅವಕಾಶವನ್ನೂ ನೀಡಲಾಗಿದೆ.
ವಿಶೇಷತೆಗಳೇನು?
ನೋಕಿಯಾ 8210 4G ಫೋನ್ 8 ಇಂಚಿನ QVGA ರೆಸೊಲ್ಯೂಷನ್ ಡಿಸ್‌ಪ್ಲೇ ಹೊಂದಿದೆ. ಅದರಲ್ಲಿ T107 ಚಿಪ್‌ಸೆಟ್ ಇದ್ದು, 48 ಜಿಬಿ RAM ಹಾಗೂ 128 ಎಂಜಿ ಆಂತರಿಕೆ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. 32 ಜಿಬಿ ತನಕ ಮೈಕ್ರೊ ಎಸ್‌ಡಿ ಕಾರ್ಡ್ ಬಳಸಬಹುದಾಗಿದೆ. 0.3 ಜಿಬಿ ಕ್ಯಾಮೆರಾವೂ ಇದರಲ್ಲಿದೆ. ಅಂತೆಯೇ 4G ನೆಟ್ವರ್ಕ್‌ನಲ್ಲಿ ಆರು ಗಂಟೆಗಳ ಟಾಕ್‌ಟೈಮ್‌ಹಾಗೂ 27 ದಿನಗಳ ಸ್ಟಾಂಡ್‌ಬೈ ಟೈಮ್‌ಹೊಂದಿದೆ.
ಫೋನ್‌ಗೆ ಹಲವು ಕನೆಕ್ಟಿವಿಟಿ ಆಯ್ಕೆಗಳಿವೆ. ಬ್ಲೂಟೂಥ್.0 4G ಮತ್ತು ಡ್ಯಯಲ್‌ನ್ಯಾನೊ ಸಿಮ್‌ಆಯ್ಕೆಗಳಿವೆ. ಅದರ ಜತೆಗೆ 3.5 ಆಡಿಯೊ ಜಾಕ್‌ನೀಡಲಾಗಿದೆ. ಎಂಪಿ3 ಪ್ಲೇಯರ್, ವೈರ್ಡ್‌ಹಾಗೂ ವೈರ್‌ಲೆಸ್‌ಎಫ್‌ಎಂ ರೇಡಿಯೊ ಇದೆ. ಸ್ನೇಕ್, ಟೆಟ್ರಿಸ್, ಬ್ಲಾಕ್‌ಜಾಕ್, ಆರೋ, ಮಾಸ್ಟರ್ ಸೇರಿಂದಂತೆ ಹಲವು ಗೇಮ್‌ಗಳನ್ನೂ ಹೊಂದಿದೆ.
ಇದನ್ನೂ ಓದಿ | ವಿಸ್ತಾರ 5G Info | 5G ನೆಟ್‌ವರ್ಕ್ ಹೇಗೆ ಕಾರ್ಯನಿರ್ವಹಿಸಲಿದೆ? ಸವಾಲುಗಳೇನು?