ಬೆಂಗಳೂರು: ಫ್ರೆಂಚ್ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಥಾಮ್ಸನ್ (Thomson) ಭಾರತದ ಹಬ್ಬದ ಋತುವಿನ ಹಿನ್ನೆಲೆಯಲ್ಲಿ ವರ್ಷದ ಅತ್ಯಂತ ದೊಡ್ಡ ಬಿಡುಗಡೆ ಪ್ರಕಟಿಸಿದೆ. ಗೂಗಲ್ ಟಿ.ವಿ.ಯೊಂದಿಗೆ ಕ್ಯೂಎಲ್‍ಇಡಿ ಸೀರೀಸ್ 50”, 55” ಮತ್ತು 65” ಸೆಪ್ಟೆಂಬರ್ 8ರಂದು ಬಿಡುಗಡೆ ಮಾಡಿದ್ದ, ಈ 4ಕೆ ಸರಣಿಯು 50”ಕ್ಕೆ 33,999 ರೂ., 55”ಕ್ಕೆ 40,999 ರೂ. ಮತ್ತು 65”ಕ್ಕೆ 59,999 ರೂ. ಬೆಲೆ ಇರಲಿದೆ. ಇವು ಫ್ಲಿಪ್‍ಕಾರ್ಟ್‍ನಲ್ಲಿ `ಬಿಗ್ ಬಿಲಿಯನ್ ಡೇಸ್ ಸ್ಪೆಷಲ್’ ಕೊಡುಗೆಯಾಗಿ ದೊರೆಯಲಿದೆ.
ತನ್ನ ಮೇಕ್ ಇನ್ ಇಂಡಿಯಾ ಗುರಿಗೆ ಅನುಗುಣವಾಗಿ ಥಾಮ್ಸನ್‍ಗೆ ಭಾರತದಲ್ಲಿ ವಿಶೇಷ ಬ್ರಾಂಡ್ ಲೈಸೆನ್ಸೀ ಎಸ್‍ಪಿಪಿಎಲ್ ದೇಶದಲ್ಲಿ ಗೂಗಲ್ ಅನುಮತಿ ಪಡೆದ ಕ್ಯೂಎಲ್‍ಇಡಿ ಟಿ.ವಿ.ಗಳನ್ನು ಉತ್ಪಾದಿಸುವ ಭಾರತದ ಮೊದಲ ಕಂಪನಿಯಾಗಿದೆ. ಈ ಟಿವಿಗಳು ಟಿವಿ ವೀಕ್ಷಣೆಯ ಅನುಭವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತವೆ ಮತ್ತು ಭಾರತೀಯ ಗ್ರಾಹಕರಿಗೆ ಸಂಪೂರ್ಣ ಸಂತೋಷ ನೀಡುತ್ತವೆ.
ಥಾಮ್ಸನ್ ಕ್ಯೂಎಲ್‌ಇಡಿ ಸಿರೀಸ್ ವಿಶೇಷತೆಗಳೇನು?
ಹಲವು ವಯಸ್ಕ ಮತ್ತು ಮಕ್ಕಳ ಯೂಸರ್ ಪ್ರೊಫೈಲ್‍ಗಳಿಗೆ ಬೆಂಬಲ ನೀಡುತ್ತದೆ. ಸ್ಮಾರ್ಟ್ ಟಿ.ವಿ. ಆ್ಯಪ್‍ಗಳ ಅಪಾರ ಆಯ್ಕೆ ಇದೆ. ವೈಯಕ್ತಿಕಗೊಳಿಸಿದ ಕಂಟೆಂಟ್ ಆದ್ಯತೆ ನೀಡಲಾಗುತ್ತಿದೆ. ಸ್ಮಾರ್ಟ್ ಹೋಮ್ ಡಿವೈಸ್‍ಗಳಿಗೆ ಮ್ಯಾನ್ಯುಯಲ್ ಮತ್ತು ವಾಯ್ಸ್ ಕಂಟ್ರೋಲ್‍ಗಳಿವೆ. ಪ್ರತಿ ಬಳಕೆದಾರರಿಗೆ ವೈಯಕ್ತಿಕಗೊಳಿಸಿದ ಹೋಮ್ ಸ್ಕ್ರೀನ್ ಇದೆ. ಫೋನ್‍ನಲ್ಲಿ ಪ್ರೊಫೈಲ್‍ಗಳಿಗೆ ಚಲನಚಿತ್ರಗಳು ಮತ್ತು ಟಿ.ವಿ. ಸೀರೀಸ್ ಸೇವ್ ಮಾಡಿಕೊಳ್ಳಬಹುದು. ಗೂಗಲ್ ಟಿ.ವಿ. ಆ್ಯಪ್ ಅನ್ನು ಟಿ.ವಿ. ನಿಯಂತ್ರಿಸಲು ಬಳಸಬಹುದು. ಬೆಳಕು ಮತ್ತು ಕ್ಯಾಮರಾಗಳಿಗೆ ಸ್ಮಾರ್ಟ್ ಹೋಮ್ ಕಂಟ್ರೋಲ್‍ಗಳಿವೆ.
ಈ ಹೊಸ ಕ್ಯೂಎಲ್‍ಇಡಿ ಟಿ.ವಿ.ಗಳು ಸಂಪೂರ್ಣವಾಗಿ ಫ್ರೇಮ್‍ರಹಿತವಾಗಿವೆ ಮತ್ತು ಡಾಲ್ಬಿ ವಿಷನ್ ಅನ್ನು ಎಚ್‍ಡಿಆರ್ 10+ ನೊಂದಿಗೆ ಹೊಂದಿವೆ, ಡಾಲ್ಬಿ ಅಟ್ಮೊಸ್, ಡಾಲ್ಬಿ ಡಿಜಿಟಲ್ ಪ್ಲಸ್, ಡಿಟಿಎಸ್ ಟ್ರೂ ಸರೌಂಡ್, ಬೆಜೆಲ್-ಲೆಸ್ ವಿನ್ಯಾಸ, 40ಡಬ್ಲ್ಯೂ ಡಾಲ್ಬಿ ಆಡಿಯೊ ಸ್ಟೀರಿಯೊ ಬಾಕ್ಸ್ ಸ್ಪೀಕರ್, 2ಜಿಬಿ ರ್ಯಾಮ್, 16ಜಿಬಿ ರೊಮ್, ಡ್ಯುಯಲ್ ಬ್ಯಾಂಡ್(2.4+5) ಗಿಗಾಹಟ್ರ್ಸ್ ವೈ-ಫೈ, ಗೂಗಲ್ ಟಿ.ವಿ. ಮತ್ತಿತರೆ ಒಳಗೊಂಡಿವೆ.
ನೆಟ್‍ಫ್ಲಿಕ್ಸ್, ಪ್ರೈಮ್ ವಿಡಿಯೊ, ಹಾಟ್‍ಸ್ಟಾರ್, ಜೀ5, ಆಪಲ್ ಟಿ.ವಿ., ವೂಟ್, ಸೋನಿ ಲಿವ್, ಗೂಗಲ್ ಪ್ಲೇ ಸ್ಟೋರ್ ಒಳಗೊಂಡು 10000ಕ್ಕೂ ಹೆಚ್ಚು ಆ್ಯಪ್‍ಗಳು ಮತ್ತು ಗೇಮ್ಸ್, 500,000ಕ್ಕೂ ಹೆಚ್ಚು ಟಿ.ವಿ.ಶೋಗಳನ್ನು ಒಳಗೊಂಡಿದ್ದು ಈ ಟಿ.ವಿ.ಗಳು ಸಂಪೂರ್ಣ ಬೆಜೆಲ್‍ರಹಿತ ಮತ್ತು ಏರ್ ಸ್ಲಿಮ್ ಡಿಸೈನ್‍ನೊಂದಿಗೆ ಬ್ಲಾಕ್‍ನೊಂದಿಗೆ ಬರುತ್ತವೆ. ಹೊಚ್ಚಹೊಸ ಥಾಮ್ಸನ್ ಕ್ಯೂಎಲ್‍ಇಡಿ ಟಿ.ವಿ.ಗಳು ಕಪ್ಪು ಬಣ್ಣದಲ್ಲಿ ಲಭ್ಯವಿದ್ದು ಅಲಾಯ್ ಸೌಂಡ್ ಅತ್ಯಂತ ಸ್ಟೈಲಿಷ್ ನೋಟ ನೀಡುತ್ತದೆ.
2018ರಿಂದಲೂ ಬ್ರಾಂಡ್ ಸತತವಾಗಿ ಭಾರತದ ಆನ್‍ಲೈನ್ ಕೊಳ್ಳುಗರಿಗೆ ತನ್ನ ಅತ್ಯಂತ ವಿಶೇಷ ಶ್ರೇಣಿಯ ಸ್ಮಾರ್ಟ್ ಟಿ.ವಿ.ಗಳು, ವಾಷಿಂಗ್ ಮೆಷಿನ್‍ಗಳು, ಏರ್-ಕೂಲರ್‍ಗಳು ಮತ್ತು ಇತ್ತೀಚೆಗೆ ಬಿಡುಗಡೆಯಾದ ಏರ್ ಕಂಡೀಷನರ್‍ಗಳನ್ನು ಪೂರೈಸುತ್ತಿದೆ. ಕೇವಲ 4 ವರ್ಷಗಳಲ್ಲಿ ಈ ಬ್ರಾಂಡ್ ಯಶಸ್ವಿಯಾಗಿ ಭಾರತದಲ್ಲಿ ಅತ್ಯಂತ ಹೆಚ್ಚು ಮಾರಾಟವಾಗುವ ಗ್ರಾಹಕ ಉತ್ಪನ್ನಗಳ ಬ್ರಾಂಡ್ `ಥಾಮ್ಸನ್‍ಹೋಮ್ಸ್’ ಸೃಷ್ಟಿಸಲು ಶಕ್ತವಾಗಿದೆ ಮತ್ತು ಇನ್ನಷ್ಟು ತರಲು ಉದ್ಯುಕ್ತವಾಗಿದೆ.
ಇದನ್ನೂ ಓದಿ | Pai International | ನೂತನ ಹೆನ್ರಿ 4ಕೆ ಎಲ್‌ಇಡಿ ಸ್ಮಾರ್ಟ್ ಟಿವಿ ಪರಿಚಯ; ಕಡಿಮೆ ದರ, ಉತ್ಕೃಷ್ಟ ಗುಣಮಟ್ಟ