Site icon Vistara News

Threads Launch: ಟ್ವಿಟರ್‌ನ ಎದುರಾಳಿ ಥ್ರೆಡ್ಸ್‌ ಅನಾವರಣ, 11 ವರ್ಷದ ಬಳಿಕ ಮೊದಲ ಬಾರಿಗೆ ಟ್ವೀಟ್‌ ಮಾಡಿದ ಜುಕರ್‌ಬರ್ಗ್‌

mark zuckerberg elon musk

ನ್ಯೂಯಾರ್ಕ್‌: ಟ್ವಿಟರ್‌ ಸಾಮಾಜಿಕ ಜಾಲತಾಣಕ್ಕೆ ಪ್ರತಿಸ್ಪರ್ಧಿಯಾಗಿ ʼಥ್ರೆಡ್ಸ್‌ʼ (threads) ಎಂಬ ವೇದಿಕೆಯನ್ನು ಮೆಟಾ ಮಾಲಿಕ ಮಾರ್ಕ್‌ ಜುಕರ್‌ಬರ್ಗ್‌ (Mark Zuckerberg) ಅನಾವರಣ (Threads Launch)‌ ಮಾಡಿದ್ದಾರೆ. ಇದಾಗಿ ಕೆಲವೇ ಗಂಟೆಗಳಲ್ಲಿ ಅವರು ಎಲಾನ್‌ ಮಸ್ಕ್‌ಗೆ (Elon musk) ಸವಾಲು ಎಸೆಯುವಂಥ ಟ್ವೀಟ್‌ ಒಂದನ್ನು ಪೋಸ್ಟ್ ಮಾಡಿದ್ದು, ಇದು ಕಳೆದ 11 ವರ್ಷಗಳಲ್ಲಿ ಜುಕರ್‌ಬರ್ಗ್‌ ಮಾಡುತ್ತಿರುವ ಮೊದಲ ಟ್ವೀಟ್‌ ಆಗಿದೆ.

ಟ್ವಿಟರ್‌ ಪ್ರತಿಸ್ಪರ್ಧಿ ತಾನು ಎಂದು ಬಿಂಬಿಸುವಂಥ ಚಿತ್ರವೊಂದನ್ನು ಜುಕರ್‌ ಪೋಸ್ಟ್‌ ಮಾಡಿದ್ದಾರೆ. ಇದರಲ್ಲಿ ಸ್ಪೈಡರ್‌ಮ್ಯಾನ್‌ ಮುಖಾಮುಖಿಯ ಕಾರ್ಟೂನ್‌ ಇದೆ. ಜುಕರ್‌ ಹಾಗೂ ಮಸ್ಕ್‌ ಕಡೆಯವರು ಇದನ್ನು ನಾನಾ ಥರವಾಗಿ ಅರ್ಥೈಸುತ್ತಿದ್ದಾರೆ. ಕಾರ್ಟೂನ್‌ಗೆ ಜುಕರ್‌ ಯಾವುದೇ ಕ್ಯಾಪ್ಷನ್‌ ನೀಡಿಲ್ಲ.

ಥ್ರೆಡ್‌ ಅನ್ನು Instagramನ ತಂಡ ನಿರ್ಮಿಸಿದೆ. ಇದು ಪಠ್ಯ ಆಧಾರಿತ ಅಪ್ಲಿಕೇಶನ್. ಬಳಕೆದಾರರು 500 ಅಕ್ಷರಗಳಿರುವಷ್ಟು ಉದ್ದದ ಪೋಸ್ಟ್‌ಗಳನ್ನು ಹಂಚಿಕೊಳ್ಳಬಹುದು. ಬುಧವಾರ ಇದು ಅಧಿಕೃತವಾಗಿ ಅನಾವರಣಗೊಳಿಸಲ್ಪಟ್ಟಿದೆ. ಟ್ವಿಟರ್‌ಗೆ ಇದ ಅತ್ಯಂತ ಪ್ರಬಲವಾದ ಪ್ರತಿಸ್ಪರ್ಧಿ ಆಗಲಿದೆ ಎಂದು ಊಹಿಸಲಾಗಿದೆ. ಅಪ್ಲಿಕೇಶನ್ ಅನ್ನು Instagram ಖಾತೆಯ ಮೂಲಕ ಲಾಗ್ ಇನ್ ಮಾಡಬಹುದು. ಥ್ರೆಡ್‌ಗಳಲ್ಲಿನ ಪೋಸ್ಟ್‌ಗಳಿಗೆ ಚಿತ್ರಗಳು ಮತ್ತು ಚಿಕ್ಕದಾದ ವೀಡಿಯೊಗಳನ್ನು ಕೂಡ ಲಗತ್ತಿಸಬಹುದು.

ಇದನ್ನೂ ಓದಿ: Battle of billionaires : ಎಲಾನ್‌ ಮಸ್ಕ್‌ ಸಾರಥ್ಯದ ನೆಟ್‌ ಕಂಪನಿ ಸ್ಟಾರ್‌ಲಿಂಕ್‌ ಭಾರತ ಪ್ರವೇಶಕ್ಕೆ ಅಂಬಾನಿ ವಿರೋಧ ಏಕೆ?

Exit mobile version