Site icon Vistara News

Tata Tiago EV | ಶೀಘ್ರ ಮಾರುಕಟ್ಟೆಗೆ ಇಳಿಯಲಿದೆ ಕಡಿಮೆ ಬೆಲೆಯ ಇವಿ ಕಾರು

tata tiago ev

ನವ ದೆಹಲಿ : ಅಗ್ಗದ ದರಕ್ಕೆ ಬಲಿಷ್ಠ ಕಾರುಗಳನ್ನು ಮಾರುಕಟ್ಟೆಗೆ ಇಳಿಸುವ ಮೂಲಕ ಜನಪ್ರಿಯತೆ ಪಡೆದ ಟಾಟಾ ಮೋಟಾರ್ಸ್‌ ಶೀಘ್ರದಲ್ಲೇ Tata Tiago EV ಕಾರನ್ನು ಮಾರುಕಟ್ಟೆಗೆ ಇಳಿಸಲಿದೆ. ಇದು ಕಡಿಮೆ ಬೆಲೆಗೆ ರಸ್ತೆಗಿಳಿಯಲಿರುವ ಬ್ಯಾಟರಿ ಚಾಲಿತ ಕಾರು ಎನಿಸಿಕೊಳ್ಳಲಿದೆ. ಈ ಕಾರನ್ನು ೨೦೧೮ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದರೂ, ಇದುವರೆಗೆ ಮಾರುಕಟ್ಟೆಗೆ ಇಳಿಸಿರಲಿಲ್ಲ. ಏತನ್ಮಧ್ಯೆ, ನೆಕ್ಸಾನ್ ಇವಿ, ನೆಕ್ಸಾನ್‌ ಇವಿ ಪ್ರೈಮ್‌, ನೆಕ್ಸಾನ್‌ ಇವಿ ಮ್ಯಾಕ್ಸ್‌ ಹಾಗೂ ಟಿಗೋರ್‌ ಇವಿ ಕಾರನ್ನು ರಸ್ತೆಗೆ ಇಳಿಸಿದೆ.

ಟಾಟಾ ಮೋಟಾರ್ಸ್‌ ನೀಡಿರುವ ಮಾಹಿತಿ ಪ್ರಕಾರ ಟಿಯಾಗೊ ಇವಿ ಭಾರತದ ಕಾರು ಮಾರುಕಟ್ಟೆಯಲ್ಲಿನ ಅತ್ಯಂತ ಕಡಿಮೆ ಬೆಲೆಯ ಕಾರು ಎನಿಸಿಕೊಳ್ಳಲಿದೆ. ಅದರೆ, ಮಾರುಕಟ್ಟೆಗೆ ಇಳಿಯುವ ದಿನಾಂಕ ಪ್ರಕಟಿಸಿಲ್ಲ.

ಇವಿ ಕಾರುಗಳನ್ನು ತಯಾರಿಸಲು ಟಾಟಾ ಮೋಟಾರ್ಸ್‌ ಕಂಪನಿಯು ಮೂರು ಹಂತದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವಿಭಿನ್ನ ಸೆಗ್ಮೆಂಟ್‌ಗಳಲ್ಲಿ ೧೦ ಬ್ಯಾಟರಿ ಚಾಲಿತ ಕಾರುಗಳನ್ನು ಸುಂದರ ವಿನ್ಯಾಸ ಹಾಗೂ ಕಡಿಮೆ ಬೆಲೆಗೆ ಇಳಿಸಲು ಟಾಟಾ ಯೋಜನೆ ರೂಪಿಸಿಕೊಂಡಿದೆ. ನೆಕ್ಸಾನ್‌ ಇವಿ ಎಸ್‌ಯುವಿಯಾದರೆ, ಟಿಗೋರ್‌ ಇವಿ ಸೆಡಾನ್‌ ಹಾಗೂ ಟಿಯಾಗೊ ಹ್ಯಾಚ್‌ಬ್ಯಾಕ್‌ ಕಾರಾಗಿದೆ.

ಜಿಪ್ಟ್ರಾನ್‌ ತಂತ್ರಜ್ಞಾನ

ಟಿಯಾಗೊ ಇವಿಯಲ್ಲಿ ಟಾಟಾದ ಇತರ ಕಾರುಗಳಲ್ಲಿ ಬಳಸುವ ಜಿಪ್ಟ್ರಾನ್‌ ಬ್ಯಾಟರಿ ತಂತ್ರಜ್ಞಾನ ಬಳಕೆಯಾಗಲಿದೆ. ಇದು ಎಕ್ಸ್‌ಪ್ರೆಸ್-ಟಿ ತಂತ್ರಜ್ಞಾನಕ್ಕಿಂತ ಸುಧಾರಿತ ತಂತ್ರಜ್ಞಾನವಾಗಿದೆ.

ವಿನ್ಯಾಸದ ವಿಚಾರಕ್ಕೆ ಬಂದಾದ ಈಗ ರಸ್ತೆಯಲ್ಲಿರುವ ಟಿಯಾಗೊ ರಚನೆಯನ್ನು ಹೊಂದಿರಲಿದೆ. ಟೀಲ್‌ ಬ್ಲೂ ಹಾಗೂ ಡೆಟೋನಾ ಗ್ರೇ ಬಣ್ಣದಲ್ಲಿ ಕಾರು ಲಭ್ಯವಾಗಲಿದೆ. ಇವೆರಡು ಬಣ್ಣಗಳನ್ನು ಮಾತ್ರ ಇವಿ ಕಾರುಗಳಲ್ಲಿ ಬಳಸಲಾಗುತ್ತದೆ. ಇಂಟೀರಿಯರ್‌ನಲ್ಲಿ ಬ್ಲೂ ಆಕ್ಸೆಂಟ್ ಬಳಸಲಾಗುತ್ತದೆ.

ಗೇರ್‌ ಲಿವರ್‌ಗೆ ಪರ್ಯಾಯವಾಗಿ ರೋಟರಿ ನಾಬ್‌ಗಳನ್ನು ಬಳಸಲಾಗುತ್ತದೆ. ಆದರೆ, ಬ್ಯಾಟರಿಗಳನ್ನು ಎಲ್ಲಿ ಇಡಲಾಗುತ್ತದೆ ಎಂಬದರ ಬಗ್ಗೆ ಮಾಹಿತಿ ಇಲ್ಲ.

ಇದನ್ನೂ ಓದಿ | Urban Cruiser Hyryder | ಟೊಯೊಟಾ ಅರ್ಬನ್‌ ಕ್ರೂಸರ್‌ ಹೈರೈಡರ್‌ ಬೆಲೆ ಅನಾವರಣ

Exit mobile version