Site icon Vistara News

Social Media ಬಳಕೆಗೆ ಇಲ್ಲಿವೆ ಸೈಬರ್‌ ಸುರಕ್ಷತೆ ಸಲಹೆಗಳು

cyber crime

ಬೆಂಗಳೂರು: ಸಾಮಾಜಿಕ ಜಾಲತಾಣಗಳ (Social Media) ಬಳಕೆ ಇಂದಿನ ಅಗತ್ಯ ಹಾಗೂ ಅನಿವಾರ್ಯತೆ. ಕಚೇರಿ ಕೆಲಸಕ್ಕಾಗಲಿ, ಸ್ನೇಹಿತರು ಅಥವಾ ಬಂಧುಗಳ ಜತೆಗಿನ ಮಾತುಕತೆಗಾಗಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲೇಬೇಕಾಗಿದೆ. ಆದರೆ, ಸೋಶಿಯಲ್‌ ಮೀಡಿಯಾ ಬಳಕೆಯನ್ನು ಎಚ್ಚರ ತಪ್ಪಿ ಮಾಡಿದರೆ ಅದು ಅಪಾಯಕಾರಿ ಎನಿಸಬಹುದು.

ನಿಮ್ಮ ವೈಯಕ್ತಿಕ ಮಾಹಿತಿಗಳು ದುರುಪಯೋಗವಾಗುವ ಜತೆಗೆ ನಿಮ್ಮ ಕಂಪ್ಯೂಟರ್‌ ಹಾಗೂ ಬ್ಯಾಂಕ್‌ ಖಾತೆಗಳಿಗೆ ಸೈಬರ್‌ ಕಳ್ಳರು ಕನ್ನ ಹಾಕಬಹುದು. ಹೀಗಾಗಿ ಸೋಶಿಯಲ್‌ ಮೀಡಿಯಾ ಬಳಕೆ ವೇಳೆ ಕೆಲವೊಂದು ಎಚ್ಚರಿಕೆಗಳನ್ನು ವಹಿಸಿಕೊಳ್ಳಬೇಕಾಗುತ್ತದೆ.

ಸೈಬರ್‌ ಸುರಕ್ಷತೆಗೆ ಇಲ್ಲಿವೆ ಕೆಲವೊಂದು ಸಲಹೆಗಳು

1) ನೀವು ಮಾಡುವ ಯಾವುದೇ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಶಾಶ್ವತವಾಗಿ ಇರುತ್ತದೆ. ಅದು ಸಾವಿರಾರು ಮಂದಿಯ ಕಣ್ಣಿಗೆ ಬೀಳುತ್ತದೆ. ಹೀಗಾಗಿ ಯಾವುದೇ ಪೋಸ್ಟ್‌ಗಳನ್ನು ಮಾಡುವಾಗ ಎರಡೆರಡು ಬಾರಿ ಯೋಚಿಸಿ. ಪ್ರಮಾದಗಳು ಘಟಿಸದಂತೆ ಮುನ್ನೆಚ್ಚರಿಕೆ ವಹಿಸಿ.

2) ಸಾಮಾಜಿಕ ಜಾಲತಾಣಗಳಲ್ಲ ವ್ಯವಹಾರ ಮಾಡುವಾಗ ವೈಯಕ್ತಿಕ ಮಾಹಿತಿಗಳನ್ನು ಕೊಡಬೇಕಾಗುತ್ತದೆ. ಕೆಲವೊಂದು ಮಾಹಿತಿಗಳು ಅನಿವಾರ್ಯವಾದರೂ ಇನ್ನು ಕೆಲವು ಮಾಹಿತಿಗಳನ್ನು ನೀಡುವ ಅಗತ್ಯ ಇರುವುದಿಲ್ಲ. ಹೆಚ್ಚು ಮಾಹಿತಿಗಳನ್ನು ಪ್ರಕಟಿಸಿದರೆ ಹ್ಯಾಕರ್‌ಗಳಿಗೆ ಸುಲಭವಾಗಿ ನಿಮ್ಮ ಖಾತೆಗಳಿಗೆ ಕನ್ನ ಹಾಕಲು ಸಾಧ್ಯವಾಗುತ್ತದೆ.

3) ಕಂಪ್ಯೂಟರ್‌, ಸ್ಮಾರ್ಟ್‌ಫೋನ್‌ ಹಾಗೂ ಟ್ಯಾಬ್‌ಗಳಲ್ಲಿ ಸುರಕ್ಷಿತವಾದ Anti virus ಅಳವಡಿಸಿಕೊಳ್ಳಿ. ಅದೇ ರೀತಿ ಆಪರೇಷನ್‌ ಸಿಸ್ಟಮ್‌ (OS) ಅಪ್‌ಡೇಟ್‌ ವರ್ಷನ್‌ ಇರುವಂತೆ ನೋಡಿಕೊಳ್ಳಿ.

4) ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹಿತರನ್ನು ಮಾಡಿಕೊಳ್ಳುವಾಗ ಜಾಗರೂಕರಾಗಿರಬೇಕು. ನಿಮಗೆ ಪರಿಚಯ ಇದ್ದರೆ ಮಾತ್ರ ಅವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಿ.ಅಪರಿಚಿತ ವ್ಯಕ್ತಿಯನ್ನು Friend ಮಾಡಿಕೊಂಡು ಅನಾಹುತಕ್ಕೆ ದಾರಿ ಮಾಡಿಕೊಡಬಾರದು. ಅಪರಿಚಿತರಲ್ಲಿ ಹಲವರು ಸೈಬರ್‌ ಕಳ್ಳರೂ ಇರಬಹುದು. ಸುಂದರ ಹುಡುಗಿಯರ ಚಿತ್ರವನ್ನು ಹಾಕಿಕೊಂಡು ಯಾಮಾರಿಸುವ ಪ್ರಕರಣಗಳು ಆಧುನಿಕ ಜಗತ್ತಿನಲ್ಲಿ ನಡೆಯುತ್ತಲೇ ಇವೆ.

5) ನಿಮ್ಮ ಸೋಶಿಯಲ್‌ ಮೀಡಿಯಾ ನೆಟ್‌ವರ್ಕ್‌ನಲ್ಲಿ ಯಾರಾದರೂ ಕಿರಿಕಿರಿ ಉಂಟು ಮಾಡುತ್ತಿದ್ದರೆ ಅವರನ್ನು ಮುಲಾಜಿಲ್ಲದೆ Unfriend ಮಾಡಿ. ಅವರ ವಿರುದ್ಧ ರಿಪೋರ್ಟ್‌ ಮಾಡಿ.
6) ಸದೃಢ password ಬಳಸಿ. ಅಂಕಿಗಳು ಹಾಗೂ ಸಂಖ್ಯೆಗಳು ಸರಿಯಾಗಿ ಇರುವಂತೆ ನೋಡಿಕೊಳ್ಳಿ. ಬೇರೆಬೇರೆ ಅಕೌಂಟ್‌ಗಳಿಗೆ ಬೇರೆಬೇರೆ ಪಾಸ್‌ವರ್ಡ್‌ ಇರಬೇಕು.

ಇದನ್ನೂ ಓದಿ | Cyber Crime | ಸೈಬರ್‌ ಖದೀಮರಿಗೆ ಗಂಟಲ ಮುಳ್ಳಾಗುತ್ತಿದೆ ಗೋಲ್ಡನ್‌ ಅವರ್

Exit mobile version