Site icon Vistara News

Toyota Urban Cruiser Hyryder ಹೈಬ್ರಿಡ್​ ಕಾರಿನ ಬೆಲೆ 50 ಸಾವಿರ ರೂಪಾಯಿ ಏರಿಕೆ ಮಾಡಿದ ಟೊಯೋಟಾ

hyryder

#image_title

ಬೆಂಗಳೂರು: ಟೊಯೋಟಾ ಕಿರ್ಲೋಸ್ಕರ್​ ಮೋಟಾಸ್​ ಕಂಪನಿಯು ತನ್ನ ಅರ್ಬನ್​ ಕ್ರೂಸರ್​ ಹೈರಡರ್​ ಹೈಬ್ರಿಡ್​ (Toyota Urban Cruiser Hyryder) ಕಾರಿನ ಬೆಲೆಯನ್ನು ಏಕಾಏಕಿ 50 ಸಾವಿರ ರೂಪಾಯಿ ಏರಿಕೆ ಮಾಡಿದೆ. ಈ ಎಸ್​ಯುವಿ ಕಾರು 2022ರ ಸೆಪ್ಟೆಂಬರ್​ನಲ್ಲಿ ಮಾರುಕಟ್ಟೆಗೆ ಇಳಿದಿತ್ತು. ಆ ವೇಳೆ ನಿಗದಿ ಮಾಡಲಾಗಿದ್ದ ಬೆಲೆಯ ಆಫರ್​ ಕೊನೆಗೊಂಡಿದ್ದು ಇದೀಗ ಪರಿಷ್ಕೃತ ದರವನ್ನು ಪ್ರಕಟಗೊಳಿಸಿದೆ. ಈ ವೇಳೆ 50 ಸಾವಿರ ರೂಪಾಯಿ ಏರಿಕೆ ಮಾಡಲಾಗಿದೆ. ಪ್ರಸ್ತುತ ಹೈರೈಡರ್​ ಹೈಬ್ರಿಡ್​ ಕಾರಿನ 15.61 ಲಕ್ಷ ರೂಪಾಯಿಯಿಂದ 19.49 ಲಕ್ಷ ರೂಪಾಯಿ ತನಕವಿದೆ.

ಅರ್ಬನ್​ ಕ್ರೂಸರ್​ ಹೈರೈಡರ್​ ಕಾರಿಗೆ ಈ ಹಿಂದೆ 15.11 ಲಕ್ಷ ರೂಪಾಯಿಂದ ಆರಂಭಗೊಂಡು 18.99 ಲಕ್ಷ ರೂಪಾಯಿ ನಿಗದಿ ಮಾಡಲಾಗಿತ್ತು. ಈ ಕಾರಿನ ಸ್ಟ್ರಾಂಗ್ ಹೈಬ್ರಿಡ್​ ಎಸ್​, ಜಿ ಮತ್ತು ವಿ ಎಂಬ ಮೂರು ವೇರಿಯೆಂಟ್​ಗಳಲ್ಲಿ ಲಭ್ಯವಿತ್ತು. ಇದರಲ್ಲಿ 1.5 ಲೀಟರ್​ ಸಾಮರ್ಥ್ಯದ ಅಟ್​ಕಿನ್​ಸನ್ ಸೈಕಲ್ ಎಂಜಿನ್​ ಇದ್ದು, ಪೆಟ್ರೋಲ್​ ಎಂಜಿನ್ 91 ಬಿಎಚ್​ಪಿ ಪವರ್​ ಹಾಗೂ 112 ಟಾರ್ಕ್​ ಬಿಡುಗಡೆ ಮಾಡಿದರೆ, ಎಲೆಕ್ಟ್ರಿಕ್​ ಮೋಟಾರ್​ 79 ಬಿಎಚ್​​ಪಿ ಪವರ್​ ಹಾಗೂ 141 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಒಟ್ಟಾರೆ 112 ಬಿಎಚ್​​ಪಿ ಪವರ್​ ಸೃಜಿಸುತ್ತದೆ.

ಸ್ಟ್ರಾಂಗ್ ಹೈಬ್ರಿಡ್​ ಕಾರಿನಲ್ಲಿ 0.76 ಕಿಲೋ ವ್ಯಾಟ್​ನ ಲೀಥಿಯಮ್​ ಬ್ಯಾಟರಿಯಿದ್ದು, ಇದರ ನೆರವಿನಿಂದ ಒಂದು ಲೀಟರ್​ ಪೆಟ್ರೋಲ್​ಗೆ 29.97 ಕಿಲೋ ಮೀಟರ್ ಮೈಲೇಜ್​ ಪಡೆಯಲು ಸಾಧ್ಯವಾಗುತ್ತಿತ್ತು. ಮೈಲ್ಡ್​ ಹೈಬ್ರಿಡ್​ ಎಸ್​ಯುವಿ 20.58ರಿಂದ 21.12 ಕಿಲೋ ಮೀಟರ್ ಮೈಲೇಜ್​ ಪಡೆಯಲು ಸಾಧ್ಯವಾಗುತ್ತಿತ್ತು. ಇದೇ ವೇಳೆ ಹೈರೈಡರ್​ನಲ್ಲಿ ಸಿಎನ್​ಜಿ ಅಯ್ಕೆಯನ್ನೂ ತರಲಾಗಿದ್ದು ಇದು 26.6 ಕಿಲೋ ಮೀಟರ್​ ಮೈಲೇಜ್​ ನೀಡುತ್ತದೆ.

ಇದನ್ನೂ ಓದಿ : Xiaomi Car | ಎಲೆಕ್ಟ್ರಿಕ್​ ಕಾರು ಮಾರುಕಟ್ಟೆಗೆ ಇಳಿಸಲಿದೆ ಜನಪ್ರಿಯ ಸ್ಮಾರ್ಟ್​ಫೋನ್ ಬ್ರಾಂಡ್​ ರೆಡ್​ಮಿ!

ಟೊಯೊಟಾ ಹೈರೈಡರ್​ ಕಾರು ಟೊಯೋಟಾದ ಹೆಚ್ಚು ಬೇಡಿಕೆಯ ಎಸ್​ಯುವಿಯಾಗಿದ್ದು, ತಿಂಗಳಿಗೆ 4000 ಕಾರುಗಳನ್ನು ಮಾರಾಟ ಮಾಡಲಾಗುತ್ತಿದೆ. ಅದೇ ರೀತಿ ಕಾರಿನ ಕಾಯ್ದಿರಿಸುವಿಕೆ ಅವಧಿ 36 ತಿಂಗಳ ತನಕ ಮುಂದುವರಿದಿದ್ದು, ಇದು ಬೇಡಿಕೆಯ ಹೆಚ್ಚಳಕ್ಕೆ ಉದಾಹರಣೆಯಾಗಿದೆ.

Exit mobile version