ನವ ದೆಹಲಿ : ಭಾರತ ಮೂಲದ ಜನಪ್ರಿಯ ಬೈಕ್ ತಯಾರಕ ಕಂಪನಿ ಟಿವಿಎಸ್ ಮೋಟಾರ್‌ಸೈಕಲ್ ತನ್ನ ಸುಧಾರಿತ ಅವೃತ್ತಿಯ ಟಿವಿಎಸ್ ಅಪಾಚೆ ಆರ್‌ಟಿಆರ್ 180, ಆರ್‌ಟಿಆರ್ 1೬0 ಬೈಕ್‌ಗಳನ್ನು (TVS Apache RTR) ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ೧೮೦ ಸಿಸಿ ಸಾಮರ್ಥ್ಯದ ಬೈಕ್‌ನ ಬೆಲೆ ೧.೩೦ ಲಕ್ಷ ರೂಪಾಯಿಗಳಾದರೆ, ೧೬೦ ಬೈಕ್‌ನ ಬೆಲೆ ೧.೧೭ ಲಕ್ಷ ರೂಪಾಯಿ (ಎಕ್ಸ್ ಶೋರೂಮ್ ಬೆಲೆ). ಎರಡೂ ಬೈಕ್‌ಗಳ ಪವರ್ ಹೆಚ್ಚಿಸಲಾಗಿದ್ದು, ತೂಕ ಕಡಿಮೆ ಮಾಡಲಾಗಿದೆ.
ಅಪಾಚೆ ಆರ್‌ಟಿಆರ್ ೧೬೦ ಸಿಸಿಯ ಬೈಕ್ ೧೫೯.೭ ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದು, ೮೭೫೦ ಆರ್‌ಪಿಎಮ್‌ನಲ್ಲಿ ೧೬.೪ ಪಿಎಸ್ ಪವರ್ ಸೃಷ್ಟಿಸಿದರೆ, ೧೩.೮೫ ಎನ್‌ಎಮ್ ಟಾರ್ಕ್ಯೂ ಬಿಡುಗಡೆ ಮಾಡುತ್ತದೆ. ಹಳೆ ಆವೃತ್ತಿಯ ಅಪಾಚೆ ಆರ್‌ಟಿಆರ್ ೧೬೦ ಬೈಕ್ ೧೫.೫೩ ಪಿಎಸ್ ಪವರ್ ಹಾಗೂ ೧೩.೯ ಎನ್‌ಎಮ್ ಟಾರ್ಕ್ಯೂ ಬಿಡುಗಡೆ ಮಾಡುತ್ತಿತ್ತು. ಅದೇ ರೀತಿ ಹಳೆ ಮಾದರಿಗಿಂತ ಎರಡು ಕೆ. ಜಿ ತೂಕ ಇಳಿಸಲಾಗಿದ್ದು, ಡ್ರಮ್ ಬ್ರೇಕ್ ಆಯ್ಕೆ ಹೊಂದಿರುವ ಬೈಕ್ ೧೩೭ ಕೆ. ಜಿ ಭಾರ ಹೊಂದಿದ್ದರೆ, ಡಿಕ್ಸ್ ಬ್ರೇಕ್ ಆಯ್ಕೆಯಿರುವ ಬೈಕ್ ೧೩೮ ಕೆ. ಜಿ ಭಾರ ಹೊಂದಿದೆ.
ಟಿವಿಎಸ್ ಅಪಾಚೆ RTR 180 ಬೈಕ್ ೧೭೭.೪ ಸಿಸಿ ಎಂಜಿನ್ ಹೊಂದಿದೆ. ಇದು, ೯೦೦೦ ಆರ್‌ಪಿಎಮ್‌ನಲ್ಲಿ ೧೭.೦೨ ಪಿಎಸ್ ಪವರ್ ಹಾಗೂ ೭೦೦೦ ಆರ್‌ಪಿಎಮ್‌ನಲ್ಲಿ ೧೫.೫ ಎನ್‌ಎಮ್ ಟಾರ್ಕ್ಯೂ ಬಿಡುಗಡೆ ಮಾಡುತ್ತದೆ. ಹಳೆ ಆವೃತ್ತಿಯ ಅಪಾಚೆ ೧೮೦ ಸಿಸಿ ಬೈಕ್ ೧೬. ೭೯ ಪಿಎಸ್ ಪವರ್ ಬಿಡುಗಡೆ ಮಾಡುತ್ತಿತ್ತು. ಆದರೆ ಟಾರ್ಕ್ಯೂ ಅಷ್ಟೇ ಇತ್ತು. ಈ ಬೈಕ್‌ನಲ್ಲೂ ಒಂದು ಕೆ.ಜಿ ಕಡಿಮೆ ಮಾಡುವಲ್ಲಿ ಟಿವಿಎಸ್ ಯಶಸ್ವಿಯಾಗಿದ್ದು, ಈಗ ೧೪೦ ಕೆ. ಜಿ ಭಾರ ಹೊಂದಿದೆ.
ಆಕರ್ಷಣೆಗಳೇನು?
ಎರಡೂ ಮೋಟಾರ್‌ಸೈಕಲ್‌ಗಳಲ್ಲಿ ಹೊಸ ನೋಟದ ಎಲ್‌ಇಡಿ ಹೆಡ್‌ಲೈಟ್‌ಗಳು ಹಾಗೂ ಟೈಲ್‌ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ. ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ಗೆ ಬ್ಲೂಟೂತ್ ಸಂಪರ್ಕ ಸಾಧಿಸಲು ಸಾಧ್ಯವಿದೆ. ಸ್ಪೋರ್ಟ್ಸ್, ಅರ್ಬನ್ ಹಾಗೂ ರೈನ್ ಎಂಬ ಮೂರು ರೈಡಿಂಗ್ ಮೋಡ್‌ಗಳಿವೆ. ಇದು ಎಬಿಎಸ್ ಸೆಟ್ಟಿಂಗ್ ಹಾಗೂ ಪವರ್ ಬಿಡುಗಡೆಯನ್ನು ವ್ಯತ್ಯಾಸ ಮಾಡುತ್ತದೆ.
ಗ್ರಾಫಿಕ್ ಬಾಡಿ ಕಲರ್ ಅನ್ನು ಅಪ್‌ಡೇಡ್ ಮಾಡಲಾಗಿದೆ. ೧೨೦ ಮಿಲಿಮೀಟರ್‌ನ ಹಿಂಬದಿ ಟಯರ್, ಗೇರ್ ಪೋಸಿಷನ್ ಇಂಡಿಕೇಟರ್, ಟಿವಿಎಸ್ ಕನೆಕ್ಟ್ App ಅನ್ನು ಅಪ್‌ಡೇಟ್ ಮಾಡಲಾಗಿದೆ.
ಇದನ್ನೂ ಓದಿ | Honda Activa | ಹೋಂಡಾ ಆಕ್ಟಿವಾ ಪ್ರೀಮಿಯಮ್ ಎಡಿಷನ್ ಭಾರತದಲ್ಲಿ ಬಿಡುಗಡೆ,