Site icon Vistara News

Twitter: ಆ್ಯಕ್ಟಿವ್ ಆಗಿರದ ಖಾತೆಗಳನ್ನು ತೆಗೆದುಹಾಕುತ್ತಿದೆ ಟ್ವಿಟರ್

Deleted tweets appears on twitter, bug problem?

ನವದೆಹಲಿ: ನಿಷ್ಕ್ರಿಯ ಜಿಮೇಲ್ ಖಾತೆಗಳನ್ನು ಡಿಲಿಟ್ ಮಾಡುವುದಾಗಿ ಕೆಲವು ದಿನಗಳ ಹಿಂದೆಯಷ್ಟೇ ಗೂಗಲ್ ಹೇಳಿತ್ತು. ಅದರ ಬೆನ್ನಲ್ಲೇ ಈಗ, ಟ್ವಿಟರ್ (Twitter) ಕೂಡ ಆ್ಯಕ್ಟಿವ್ ಆಗಿರದ ಖಾತೆಗಳನ್ನು ತೆಗೆದು ಹಾಕುವ ಬಗ್ಗೆ ನಿರ್ಧಾರ ಮಾಡಿದೆ. ವರ್ಷಗಳಿಂದ ನಿಷ್ಕ್ರಿಯವಾಗಿರುವ ಖಾತೆಗಳನ್ನು ಟ್ವಿಟರ್‌ನಿಂದ ಕಿತ್ತು ಹಾಕಲಾಗುತ್ತಿದೆ. ಟ್ವಿಟರ್‌ನ ಈ ನಿರ್ಧಾರದಿಂದ ಹಲವರು ದುಃಖ ವ್ಯಕ್ತಪಡಿಸಿದ್ದಾರೆ. ತಮ್ಮ ಪ್ರೀತಿ ಪಾತ್ರರ ನಿಧನದಿಂದ ಖಾಲಿ ಉಳಿದರುವ ಖಾತೆಗಳನ್ನು ನಿಷ್ಕ್ರಿಯ ಎಂದು ಟ್ವಿಟರ್‌ ಡಿಲಿಟ್ ಮಾಡುತ್ತಿರುವುದು ದುಃಖ ತಂದಿದೆ. ಅಲ್ಲದೇ ಟ್ವಿಟರ್‌ನ ಈ ನೀತಿಯ ವಿರುದ್ಧ ಆಕ್ರೋಶ ಕೂಡ ವ್ಯಕ್ತಪಡಿಸಿದ್ದಾರೆ.

ಹಲವರು ತಮ್ಮ ಪ್ರೀತಿ ಪಾತ್ರರ ಟ್ವಿಟರ್‌ ಖಾತೆಗಳಿಗೆ ಭೇಟಿ ನೀಡಿ ಅಲ್ಲಿರುವ ಮಾಹಿತಿಗಳನ್ನು, ಅವರು ಮಾತುಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಹಾಗೆ ನೋಡಿದರೆ, ನಿಷ್ಕ್ರಿಯ ಖಾತೆಗಳನ್ನು ಡಿಲಿಟ್ ಮಾಡುವ ಪ್ರಕ್ರಿಯೆಯನ್ನು ಟ್ವಿಟರ್ 2019ರಲ್ಲಿ ಆರಂಭಿಸಿತ್ತು. ಎಲಾನ್ ಮಸ್ಕ್ ಅವರು ಟ್ವಿಟರ್‌ ವೇದಿಕೆಯನ್ನು ತಮ್ಮ ತೆಕ್ಕೆಗೆದುಕೊಂಡ ಮೇಲೆ ಈ ಪ್ರಕ್ರಿಯೆಗೆ ಇನ್ನಷ್ಟು ವೇಗ ನೀಡಿದ್ದಾರೆ.

ಗೂಗಲ್‌ನಿಂದಲೂ ನಿಷ್ಕ್ರಿಯ ಖಾತೆ ಡಿಲಿಟ್

ನಿಷ್ಕ್ರಿಯ ಜಿ ಮೇಲ್ ಖಾತೆಗಳಿಗೆ (Gmail Account) ಸಂಬಂಧಿಸಿದಂತೆ ಗೂಗಲ್ (Google) ಖಡಕ್ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಎರಡು ವರ್ಷ ಅಥವಾ ಅದಕ್ಕಿಂತಲೂ ಹೆಚ್ಚು ವರ್ಷಗಳಿಂದ ನಿಷ್ಕ್ರಿಯವಾಗಿರುವ ಖಾತೆಗಳನ್ನು ತನ್ನ ವೇದಿಕೆಯಿಂದ ಡಿಲಿಟ್ ಮಾಡಲಿದೆ. ಈ ಕುರಿತು ಗೂಗಲ್ ತನ್ನ ಬ್ಲಾಗ್‌ ಪೋಸ್ಟ್‌ನಲ್ಲಿ ನಿರ್ಧಾರ ಪ್ರಕಟಿಸಿದ್ದು, ಭದ್ರತಾ ಕ್ರಮಗಳನ್ನು ಬಲಪಡಿಸಲು ಮತ್ತು ಅದರ ವ್ಯಾಪಕ ಬಳಕೆದಾರರಿಗೆ ಅಪಾಯಗಳನ್ನು ಕಡಿಮೆ ಮಾಡಲು ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿದೆ ಎಂದು ಹೇಳಿದೆ. ಮೂರು ವರ್ಷದ ಹಿಂದೆ ಹೇಳಿಕೆ ನೀಡಿದ್ದ ಗೂಗಲ್, ನಿಷ್ಕ್ರಿಯ ಖಾತೆಯಲ್ಲಿರುವ ವಿಷಯವನ್ನು ಅಳಿಸಿ ಹಾಕುವುದಾಗಿ ಹೇಳಿತ್ತು. ಆದರೆ, ಡಿಲಿಟ್ ಮಾಡುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಈಗ ನಿಷ್ಕ್ರಿಯವಾಗಿರು ಎಲ್ಲ ಖಾತೆಗಳನ್ನು ತೆಗೆದುಹಾಕುವುದಾಗಿ ಸ್ಪಷ್ಪಡಿಸಿದೆ.

ಇದನ್ನೂ ಓದಿ: Twitter CEO: ಟ್ವಿಟರ್‌ ಸಿಇಒ ಸ್ಥಾನಕ್ಕೆ ಮಹಿಳೆ; ಲಿಂಡಾ ಯಾಕರಿನೊ ಮುಂಚೂಣಿಯಲ್ಲಿ

ನಮ್ಮ ಆಂತರಿಕ ವಿಶ್ಲೇಷಣೆಯು ಕೈಬಿಡಲಾದ ಖಾತೆಗಳು 2-ಹಂತದ ಪರಿಶೀಲನೆಯನ್ನು ಹೊಂದಿಸಲು ಸಕ್ರಿಯ ಖಾತೆಗಳಿಗಿಂತ ಕನಿಷ್ಠ ಹತ್ತು ಪಟ್ಟು ಕಡಿಮೆ ಸಾಧ್ಯತೆಯನ್ನು ತೋರಿಸುತ್ತದೆ. ಅಂದರೆ, ಈ ಖಾತೆಗಳು ಸಾಮಾನ್ಯವಾಗಿ ದುರ್ಬಲವಾಗಿರುತ್ತವೆ. ಒಮ್ಮೆ ಖಾತೆಯನ್ನು ರಾಜಿ ಮಾಡಿಕೊಂಡರೆ, ಅಪಾಯಕಾರಿ ಕಾರ್ಯಗಳಿಗೆ ಬಳಕೆಯಾಗಬಹುದು, ಸ್ಪ್ಯಾಮ್‌ನಂತಹ ಅನಗತ್ಯ ಅಥವಾ ದುರುದ್ದೇಶಪೂರಿತ ವಿಷಯಕ್ಕಾಗಿ ಬಳಕೆಯಾಗಬುಹದು. ಹಾಗಾಗಿ, ಅಂಥ ಖಾತೆಗಳನ್ನು ಡಿಲಿಟ್ ಮಾಡಲಾಗುತ್ತಿದೆ ಎಂದು ಗೂಗಲ್ ತನ್ನ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ.

Exit mobile version