ಬೆಂಗಳೂರು : ಫೇಸ್ ಬುಕ್‌ನಲ್ಲಿ ಏನಾದರೂ ಪೋಸ್ಟ್ ಮಾಡಿ ಯಡವಟ್ಟಾದರೆ ಅದರನ್ನು ತಿದ್ದಿ (ಎಡಿಟ್ ಮಾಡಿ) ಸರಿಪಡಿಸಿಕೊಳ್ಳುವ ಅವಕಾಶವಿದೆ. ಆದರೆ, ಮೈಕ್ರೊ ಬ್ಲಾಗಿಂಗ್ ತಾಣವಾಗಿರುವ ಟ್ವೀಟ್‌ನಲ್ಲಿ ಅದು ಸಾಧ್ಯವಿಲ್ಲ. ಏನಾದರೂ ಸಮಸ್ಯೆಯಾದರೆ ಇಡೀ ಪೋಸ್ಟ್ ಡಿಲೀಟ್ ಮಾಡಬೇಕಾಗಿತ್ತು. ಇದೀಗ ಟ್ವಿಟರ್ ಸಂಸ್ಥೆಯು ಎಡಿಟ್‌ಗೂ (Twitter Edit) ಅವಕಾಶ ನೀಡಲು ಮುಂದಾಗಿದೆ. ಈ ಬಗ್ಗೆ ಟ್ವಿಟರ್ ಸಂಸ್ಥೆಯು ಟ್ವೀಟ್ ಮಾಡಿದ್ದು ಎಡಿಟ್ ಬಟನ್ ಸೇರಿಸಲಾಗಿದೆ ಎಂದು ಹೇಳಿದೆ.
ಸದ್ಯಕ್ಕೆ ಈ ಅನುಕೂಲವನ್ನು ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಖಾತೆದಾರರಿಗೆ ನೀಡಲು ಟ್ವೀಟ್ ಮುಂದಾಗಿದೆ. ಅದರೂ ಎಲ್ಲರಿಗೆ ಇಲ್ಲ. ಕೇವಲ ಬ್ಲೂ ಟಿಕ್ ಖಾತೆದಾರರಿಗೆ ಮಾತ್ರ ಅವಕಾಶ ನೀಡಿದೆ. ಅದನ್ನು ಪರೀಕ್ಷಾರ್ಥ ಅವಕಾಶ ಎಂದು ಟ್ವೀಟ್ ಘೋಷಿಸಿದೆ.
ಟ್ವಿಟರ್ ಸಂಸ್ಥೆಯು ಬ್ಲೂ ಟಿಕ್ ಅವಕಾಶವನ್ನು ಎಲ್ಲರಿಗೂ ಕೊಡುವುದಿಲ್ಲ. ಆಯ್ದ ಕೆಲವರಿಗೆ ಮಾತ್ರ ನೀಡುತ್ತದೆ. ಪ್ರಮುಖವಾಗಿ ಸೆಲೆಬ್ರಿಟಿಗಳಿಗೆ, ಉದ್ಯಮಿಗಳಿಗೆ, ರಾಷ್ಟ್ರನಾಯಕರಿಗೆ ಈ ಫೀಚರ್‌ಗಳನ್ನು ನೀಡುತ್ತಾರೆ. ಆಂತರಿಕವಾಗಿ ಪರಿಶೀಲನೆ ನಡೆಸಿ ಅಧಿಕೃತಗೊಳಿಸುತ್ತದೆ. ಹೀಗಾಗಿ ಸದ್ಯ ಬಂದಿರುವ ಎಡಿಟ್ ಆಯ್ಕೆಯೂ ಸೀಮಿತ ಖಾತೆದಾರರಿಗೆ ಮಾತ್ರ ದೊರೆಯಲಿದೆ.
ತಿದ್ದಿರುವ ಟ್ವೀಟ್ ಹೊಸ ಮಾದರಿಯ ಐಕಾನ್‌ನಲ್ಲಿ ತೋರಿಸಲಿದೆ. ಹೀಗಾಗಿ ನೋಡುವವರಿಗೆ ಇದು ಮೂಲ ಟ್ವೀಟ್ ಅಲ್ಲ ಎಂಬುದಾಗಿಯೂ ಗೊತ್ತಾಗುತ್ತದೆ ಎಂಬುದಾಗಿ ಟ್ವೀಟ್ ಸಂಸ್ಥೆ ಹೇಳಿದೆ.