Site icon Vistara News

Skill India Digital: ಸ್ಕಿಲ್ ಇಂಡಿಯಾ ಡಿಜಿಟಲ್‌ಗೆ ಚಾಲನೆ ನೀಡಿದ ಸಚಿವ ಧರ್ಮೇಂದ್ರ ಪ್ರಧಾನ್

Union Minister Dharmendra Paradhan launched Skill India Digital

ಬೆಂಗಳೂರು, ಕರ್ನಾಟಕ: ಪ್ರತಿ ಭಾರತೀಯನಿಗೂ ಗುಣಮಟ್ಟದ ಕೌಶಲ್ಯಾಭಿವೃದ್ಧಿ, ಅವಶ್ಯಕ ಅವಕಾಶಗಳು ಮತ್ತು ಉದ್ಯಮಶೀಲತೆಯ ಸ್ಫೂರ್ತಿ ನೀಡುವ ನಿಟ್ಟಿನಲ್ಲಿ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆಯ ಸಚಿವರಾದ ಧರ್ಮೇಂದ್ರ ಪ್ರಧಾನ್ (Union Minister Dharmendra Pradhan) ಇಂದು ಭಾರತದಲ್ಲಿ ಕೌಶಲ್ಯಗಳು, ಶಿಕ್ಷಣ, ಉದ್ಯೋಗ ಮತ್ತು ಉದ್ಯಮಶೀಲತೆಯ ಕ್ಷೇತ್ರವನ್ನು ಸಮನ್ವಯಗೊಳಿಸುವ ಮತ್ತು ಪರಿವರ್ತಿಸುವ ಸಮಗ್ರ ಡಿಜಿಟಲ್ ಪ್ಲಾಟ್ ಫಾರಂ ಸ್ಕಿಲ್ ಇಂಡಿಯಾ ಡಿಜಿಟಲ್(Skill India Digital – SID )ಗೆ ಚಾಲೆ ನೀಡಿದರು. ಈ ಪ್ಲಾಟ್ ಫಾರಂ ಉತ್ತಮ ಅವಕಾಶಗಳು ಮತ್ತು ಉಜ್ವಲ ಭವಿಷ್ಯವನ್ನು ನಿರೀಕ್ಷಿಸುವ ಕೋಟ್ಯಂತರ ಭಾರತೀಯರ ಆಕಾಂಕ್ಷೆಗಳು ಮತ್ತು ಕನಸುಗಳನ್ನು ಪೂರೈಸಲಿದ್ದು ಇದು ಉದ್ಯಮಕ್ಕೆ ಸಂಬಂಧಿಸಿದ ಕೌಶಲ್ಯದ ಕೋರ್ಸ್ ಗಳು(Courses), ಉದ್ಯೋಗಾವಕಾಶಗಳು (employment) ಮತ್ತು ಉದ್ಯಮಶೀಲತೆಯ ಬೆಂಬಲವನ್ನು ವಿಸ್ತರಿಸಲಿದೆ. ಈ ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್, ಐಟಿಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ (Union Minister Rajeev Chandrashekhar) ಕೂಡಾ ಉಪಸ್ಥಿತರಿದ್ದರು.

ಎಸ್.ಐ.ಡಿ. ಭಾರತದಲ್ಲಿ ಕೌಶಲ್ಯ, ಶಿಕ್ಷಣ, ಉದ್ಯೋಗ ಮತ್ತು ಉದ್ಯಮಶೀಲತೆಯ ಇಕೊಸಿಸ್ಟಂಗೆ ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್(ಡಿಪಿಐ) ಆಗಿದೆ. ಕೌಶಲ್ಯಾಭಿವೃದ್ಧಿಯನ್ನು ಹೆಚ್ಚು ಆವಿಷ್ಕಾರಕ, ಲಭ್ಯ ಮತ್ತು ವೈಯಕ್ತಿಕಗೊಳಿಸುವ ಗುರಿಯಿಂದ ಇದು ಡಿಜಿಟಲ್ ತಂತ್ರಜ್ಞಾನ ಮತ್ತು ಇಂಡಸ್ಟ್ರಿ 4.0 ಕೌಶಲ್ಯಗಳಿಗೆ ಆದ್ಯತೆ ನೀಡಿದ್ದು ಈ ಅತ್ಯಾಧುನಿಕ ಪ್ಲಾಟ್ ಫಾರಂ ಕುಶಲಿ ಪ್ರತಿಭೆಗಳ ನೇಮಕ ಹೆಚ್ಚಿಸುವ, ಜೀವನಪೂರ್ತಿ ಕಲಿಕೆ ಮತ್ತು ವೃತ್ತಿ ಬೆಳವಣಿಗೆಯನ್ನು ಒದಗಿಸುವಲ್ಲಿ ಮಹತ್ತರ ಪ್ಲಾಟ್ ಫಾರಂ ಆಗಿದೆ. ಈ ಪ್ಲಾಟ್ ಫಾರಂ ಜಿ20 ಫ್ರೇಮ್ ವರ್ಕ್ ನಲ್ಲಿ ಡಿಪಿಐ ಮತ್ತು ಡಿಜಿಟಲ್ ಅರ್ಥವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ಡಿಜಿಟಲ್ ಕೌಶಲ್ಯಗಳು ಮತ್ತು ಡಿಜಿಟಲ್ ಸಾಕ್ಷರತೆಯನ್ನು ಉತ್ತೇಜಿಸುವ ಗುರಿಗೆ ಪರಿಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಇದು ಎಲ್ಲ ಸರ್ಕಾರದ ಕೌಶಲ್ಯ ಮತ್ತು ಉದ್ಯಮಶೀಲತೆಯ ಉಪಕ್ರಮಗಳಿಗೆ ಸಮಗ್ರ ಮಾಹಿತಿಯ ಹೆಬ್ಬಾಗಿಲಾಗಿದ್ದು ವೃತ್ತಿಯಲ್ಲಿ ಮುಂದುವರಿಕೆ ಮತ್ತು ಜೀವನಪೂರ್ತಿ ಕಲಿಕೆಯನ್ನು ಅನ್ವೇಷಿಸುವ ನಾಗರಿಕರಿಗೆ ಆದ್ಯತೆಯ ಕೇಂದ್ರವಾಗಲಿದೆ.

ಈ ಪ್ರಾರಂಭ ಕುರಿತು ಧರ್ಮೇಂದ್ರ ಪ್ರಧಾನ್, ಸ್ಕಿಲ್ ಇಂಡಿಯಾ ಡಿಜಿಟಲ್ ಅತ್ಯಾಧುನಿಕ ಪ್ಲಾಟ್ ಫಾರಂ ಆಗಿದ್ದು ಎಲ್ಲ ಕೌಶಲ್ಯದ ಉಪಕ್ರಮಗಳನ್ನು ಒಟ್ಟಿಗೆ ತರುತ್ತದೆ. ಜಾಗತಿಕ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಕ್ಕೆ ಭಾರತದ ಪ್ರತಿಪಾದನೆ ಮತ್ತು ಕೌಶಲ್ಯದ ಅಂತರಗಳನ್ನು ತುಂಬುವುದು ಭಾರತದ ಯಶಸ್ವಿ ಜಿ20ರ ಅಧ್ಯಕ್ಷತೆಯ ಕೇಂದ್ರಬಿಂದುವಾಗಿದೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಸೃಷ್ಟಿಸುವಲ್ಲಿ ಮತ್ತೊಂದು ಮಹತ್ತರ ಹೆಜ್ಜೆಯಾಗಿ ಎಂ.ಎಸ್.ಡಿ.ಇ. ಭಾರತದ ವಿಸ್ತಾರ ಜನ ಸಮೂಹದ ಕೌಶಲ್ಯದ ಅಗತ್ಯಗಳನ್ನು ಪೂರೈಸಲು ಮುಕ್ತವಾದ ಪ್ಲಾಟ್ ಫಾರಂ ಸೃಷ್ಟಿಸಿದೆ. ಸ್ಕಿಲ್ ಇಂಡಿಯಾ ಡಿಜಿಟಲ್ ನಮ್ಮ ಜನಸಂಖ್ಯೆಯ ಡಿವಿಡೆಂಟ್ ಅನ್ನು ಬಳಸಿಕೊಳ್ಳುವಲ್ಲಿ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ ಮತ್ತು ಭಾರತವನ್ನು ಜಾಗತಿಕ ಕೌಶಲ್ಯಗಳ ಕೇಂದ್ರವಾಗಿ ರೂಪಿಸಲಿದೆ ಎಂದರು. ಕಲಿಕೆ ಮತ್ತು ಕೌಶಲ್ಯಾಭಿವೃದ್ಧಿಯಲ್ಲಿ ಒಂದು ಕ್ರಾಂತಿಯಾಗಿರುವ ಸ್ಕಿಲ್ ಇಂಡಿಯಾ ಡಿಜಿಟಲ್ ಎಲ್ಲರಿಗೂ, ಎಲ್ಲಿಯೇ ಆಗಲಿ, ಯಾವುದೇ ಸಮಯದಲ್ಲಾಗಲಿ ಕೌಶಲ್ಯ ನೀಡಿಕೆ ಸಾಧ್ಯವಾಗಿಸುತ್ತದೆ ಎಂದರು.

ಜಿ20 ಶೃಂಗಸಭೆಯ ಯಶಸ್ಸಿನ ಕೆಲವೇ ದಿನಗಳ ನಂತರ ಶ್ರೀ ರಾಜೀವ್ ಚಂದ್ರಶೇಖರ್, ಈ ಶೃಂಗಸಭೆಯಲ್ಲಿ ನಡೆದ ಅತ್ಯಂತ ಗಮನಾರ್ಹ ಒಪ್ಪಂದಗಳು ಡಿಪಿಐಗಳ ಮೇಲೆ ಎಂದರು. ಸ್ಕಿಲ್ ಇಂಡಿಯಾ ಡಿಜಿಟಲ್ ಯುವಜನರಿಗೆ ಖಂಡಿತವಾಗಿಯೂ ಅತ್ಯಂತ ಪ್ರಮುಖ ಡಿಪಿಐಗಳಲ್ಲಿ ಒಂದಾಗಿದೆ ಮತ್ತು ಪ್ರಧಾನಮಂತ್ರಿಗಳ ಹೊಸ ಭಾರತದ ವಿಷನ್ ನ ಸ್ಕಿಲ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾದ ಅತ್ಯಂತ ಪ್ರಮುಖ ಅಂಶಗಳ ಸಂಯೋಜನೆ ಹೊಂದಿದೆ. ಈ ಶಕ್ತಿಯುತ ಯೋಜನೆಗಳ ಏಕೈಕ ಗುರಿ ಯುವಜನರನ್ನು ಭವಿಷ್ಯ ಸನ್ನದ್ಧ ಕೌಶಲ್ಯಗಳೊಂದಿಗೆ ಸನ್ನದ್ಧರಾಗಿಸುವುದು. ಇದು ಹಲವಾರು ಅವಕಾಶಗಳನ್ನು ಸೃಷ್ಟಿಸಲು ನೆರವಾಗುತ್ತದೆ. ಕೋವಿಡ್ ನಂತರದ ವಿಶ್ವದಲ್ಲಿ ಡಿಜಿಟಲ್ ಕೌಶಲ್ಯಗಳ ಕುರಿತು ಅಪಾರ ಅರಿವಿದೆ. ಸ್ಕಿಲ್ ಇಂಡಿಯಾ ಡಿಜಿಟಲ್ ಉದ್ಯಮಶೀಲತೆ ಮತ್ತು ಭವಿಷ್ಯ ಸನ್ನದ್ಧ ಕಾರ್ಯಪಡೆಯನ್ನು ಸಾಧ್ಯವಾಗಿಸುತ್ತದೆ ಎಂದರು.

ಈ ಕೆಳಗಿನ ಅಂಶಗಳು ಎಸ್.ಐ.ಡಿ ಪ್ಲಾಟ್ ಫಾರಂ ಅನ್ನು ಉನ್ನತಗೊಳಿಸುತ್ತವೆ ಮತ್ತು ಅಸಂಖ್ಯ ಅನುಕೂಲಗಳನ್ನು ಒದಗಿಸುತ್ತವೆ:

  1. ಆಧಾರ್/ಎಐ ಸನ್ನದ್ಧ ಮುಖ ಗುರುತಿಸುವಿಕೆ
  2. ಡಿಜಿಟಲ್ ವೆರಿಫೈಯಬಲ್ ಕ್ರೆಡೆನ್ಷಿಯಲ್ಸ್(ಡಿವಿಸಿ)
  3. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(ಎಐ) ಮತ್ತು ಮೆಷಿನ್ ಲರ್ನಿಂಗ್(ಎಂಎಲ್) ಶಿಫಾರಸುಗಳು
  4. ಆಧಾರ್ ಆಧರಿತ ಇಕೆವೈಸಿ
  5. ಡಿಜಿಟಲ್ ಕಲಿಕೆ
  6. ನಾಗರಿಕ-ಕೇಂದ್ರಿತ ವಿಧಾನ
  7. ಮೊಬೈಲ್-ಪ್ರಥಮ ವಿಧಾನ
  8. ವ್ಯಾಪ್ತಿ ಮತ್ತು ವೇಗ
  9. ಭದ್ರತಾ ಕ್ರಮಗಳು
  10. ಇಂಟರ್ ಆಪರಬಿಲಿಟಿ
  11. ವಾಟ್ಸಾಪ್ ಚಾಟ್ ಬೊಟ್
  12. ಈಸ್ ಆಫ್ ಡೂಯಿಂಗ್ ಬಿಸಿನೆಸ್

ಸ್ಕಿಲ್ ಇಂಡಿಯಾ ಡಿಜಿಟಲ್ ಬಳಕೆದಾರರ ಸ್ನೇಹಿ-ರಾಜೀವ್ ಚಂದ್ರಶೇಖರ್

ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್, ಐಟಿಯ ರಾಜ್ಯ ಸಚಿವ ರಾಜೀವ್ ಚಂದ್ರಶೆಖರ್ ಅವರು ದೇಶದಲ್ಲಿ ಪರಿವರ್ತನೆ ಮತ್ತು ಸಬಲೀಕರಣ ರೂಪಿಸಲು ನಿರ್ಮಾಣವಾದ ಸ್ಕಿಲ್ ಇಂಡಿಯಾ ಡಿಜಿಟಲ್ ಪ್ಲಾಟ್ ಫಾರಂ ನಿರ್ಮಿಸುವಲ್ಲಿ ಸಕ್ರಿಯವಾಗಿ ಭಾಗವಹಿಸಿದ ತಂತ್ರಜ್ಞಾನ ತಂಡದೊಂದಿಗೆ ಸಂವಹನ ನಡೆಸಿದರು. ಈ ಪ್ಲಾಟ್ ಫಾರಂನ ಪ್ರತಿ ವಿಭಾಗವೂ ನಾಗರಿಕರ ವಿಸ್ತಾರ ಅಗತ್ಯಗಳನ್ನು ಪೂರೈಸುತ್ತದೆ. ಸ್ಕಿಲ್ ಇಂಡಿಯಾ ಡಿಜಿಟಲ್ ಬಳಕೆದಾರ-ಸ್ನೇಹಿಯಾಗುವ ಬದ್ಧತೆಯೊಂದಿಗೆ ತನ್ನ ಪ್ರಯಾಣ ಪ್ರಾರಂಭಿಸಿತು. ಇದು ಹಲವಾರು ಡಿವೈಸ್ ಗಳಲ್ಲಿ ಅಳವಡಿಸಿಕೊಳ್ಳಬಲ್ಲ ಸುಲಭ ಬಳಕೆಯ ಇಂಟರ್ಫೇಸ್ ಅನ್ನು ಒದಗಿಸುವ ಮೂಲಕ ಪ್ರಸ್ತುತ ಇರುವ ಅಡೆತಡೆಗಳನ್ನು ನಿವಾರಿಸುವ ಗುರಿ ಹೊಂದಿದೆ. ಇದು ವಿಸ್ತಾರ ಹಿನ್ನೆಲೆಯ ಜನರಿಗೆ ಈ ಪ್ಲಾಟ್ ಫಾರಂ ಅನ್ನು ಅವರಲ್ಲಿ ಯಾವುದೇ ತಂತ್ರಜ್ಞಾನವಿರಲಿ ಪ್ರಯತ್ನರಹಿತವಾಗಿ ಬಳಸಲು ಅವಕಾಶ ಕಲ್ಪಿಸುತ್ತದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: NEP Scrap: ಮಕ್ಕಳ ಭವಿಷ್ಯದ ಕುರಿತು ಚೆಲ್ಲಾಟ ಬೇಡ! ಕಾಂಗ್ರೆಸ್ ನಾಯಕರ ವಿರುದ್ದ ಧರ್ಮೇಂದ್ರ ಪ್ರಧಾನ್ ವಾಗ್ದಾಳಿ

ಹಲವಾರು ಭಾಷೆಗಳ ಈ ದೇಶದಲ್ಲಿ ಸ್ಕಿಲ್ ಇಂಡಿಯಾ ಡಿಜಿಟಲ್ ಹಲವು ಭಾಷೆಗಳನ್ನು ಬೆಂಬಲಿಸುವ ಮೂಲಕ ಅಂತರಗಳನ್ನು ತುಂಬುತ್ತದೆ, ಒಳಗೊಳ್ಳುವಿಕೆ ಉತ್ತೇಜಿಸುತ್ತದೆ ಮತ್ತು ಎಲ್ಲ ಬಳಕೆದಾರರಿಗೆ ವಿಸ್ತಾರ ಕಲಿಕೆಯ ವಾತಾವರಣ ನೀಡುತ್ತದೆ. ಸುರಕ್ಷಿತ ಬಳಕೆಯು ಆಧಾರ್-ಆಧರಿತ ಇಕೆವೈಸಿಯಲ್ಲಿ ಬಂದಿರುವುದು ಮಹತ್ತರ ಕಾರ್ಯವಾಗಿದೆ. ಈ ಸದೃಢ ವೆರಿಫಿಕೇಷನ್ ಪ್ರಕ್ರಿಯೆಯು ಸ್ಕಿಲ್ ಇಂಡಿಯಾ ಡಿಜಿಟಲ್ ಗೆ ತಳಹದಿಯಾಗಿದ್ದು ಅದರ ಕೊಡುಗೆಗಳಿಂದ ಅಧಿಕೃತ ಭಾಗವಹಿಸುವವರು ಮಾತ್ರ ಪ್ರಯೋಜನ ಪಡೆದುಕೊಳ್ಳುವುದನ್ನು ದೃಢೀಕರಿಸುತ್ತದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಡಿಜಿಟಲ್ ಸ್ಕಿಲ್ಲಿಂಗ್ ಸುಧಾರಣೆ, ಉದ್ಯಮದ ಭಾಗವಹಿಸುವಿಕೆ ಉತ್ತೇಜನ ಮತ್ತು ಕಲಿಯುವವರ ತೊಡಗಿಕೊಳ್ಳುವಿಕೆ ಹೆಚ್ಚಿಸುವ, ಎಐಸಿಟಿಇ, ಎನ್.ಐ.ಇ.ಎಲ್.ಐ.ಟಿ., ಇನ್ಫೋಸಿಸ್, ಮೈಕ್ರೊಸಾಫ್ಟ್, ಎಡಬ್ಲ್ಯೂಎಸ್(ಅಮೆಜಾನ್), ರೆಡ್ ಹ್ಯಾಟ್, ವಾಧ್ವಾನಿ ಫೌಂಡೇಷನ್, ಯೂನಿಸೆಫ್, ಫ್ಯೂಚರ್ ಸ್ಕಿಲ್ಸ್ ಪ್ರೈಮ್, ಸ್ಯಾಪ್, ಟೆಕ್ ಮಹಿಂದ್ರಾ ಫೌಂಡೇಷನ್ ಮುಂತಾದವರ ನಡುವೆ ಹಲವಾರು ಪರಡ್ಪರ ಒಡಂಬಡಿಕೆಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version