Site icon Vistara News

UPI LITE ಸೇವೆ ಆರಂಭಿಸಿದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್, ಇದರಿಂದ ಏನು ಲಾಭ?

UPI LITE service started by Paytm Payments bank limited

ನವದೆಹಲಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್(PPBL), ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ಸಕ್ರಿಯವಾಗಿರುವ ಯುಪಿಐ ಎಲ್ಐಟಿಇ(UPI LITE) ಸೇವೆಯನ್ನು ಆರಂಭಿಸಿದೆ. ಸಣ್ಣ ಪ್ರಮಾಣದ ಯುಪಿಐ ವ್ಯವಹಾರಗಳನ್ನು ರಿಯಲ್‌ ಟೈಮ್‌ನಲ್ಲಿ ವೇಗವಾಗಿ ಪೂರೈಸಲು ಇದರಿಂದ ಸಾಧ್ಯವಾಗಲಿದೆ. ಈ ಸೇವೆಯ ಮೂಲಕ ಪೇಟಿಎಂ ಬ್ಯಾಂಕ್ ಭಾರತದಲ್ಲಿ ಡಿಜಿಟಲ್ ಪೇಮೆಂಟ್ಸ್ ಪ್ರಚುರಪಡಿಸುವ ಉದ್ದೇಶವನ್ನು ಹೊಂದಿದೆ.

ಯುಪಿಐ ಎಲ್ಐಟಿಇ ಸೇವೆಯನ್ನು ಆರಂಭಿಸುತ್ತಿರುವ ಮೊದಲ ಮನಿ ಟ್ರಾನ್ಸ್‌ಫರಿಂಗ್ ಆ್ಯಪ್ ಆಗಿದೆ. ಒಮ್ಮೆ ಈ ಫೀಚರ್‌ ಸಕ್ರಿಯಗೊಂಡ ಬಳಿಕ ಬಳಕೆದಾರರಿಗೆ 200 ರೂ.ವರೆಗೆ ತಕ್ಷಣ ವ್ಯವಹರಿಸಲು ಅನುವು ಮಾಡಿಕೊಡುತ್ತದೆ ಮತ್ತು ಇದು ವೇಗವಾಗಿ ಯಾವುದೇ ತಡೆ ಇಲ್ಲದ ಅನುಭವವನ್ನು ನೀಡುತ್ತದೆ. ಯುಪಿಐ ಎಲ್‌ಐಟಿಇಗೆ ದಿನಕ್ಕೆ 2000 ರೂ. ಸೇರಿಸಬಹುದು. ಅಂದರೆ, ಬಳಕೆಯ ಪ್ರಮಾಣದ ದಿನಕ್ಕೆ 4 ಸಾವಿರ ರೂ.ವರೆಗೂ ತಲುಪಬಹುದು ಎಂದು ಪೇಟಿಎಂ ಹೇಳಿಕೊಂಡಿದೆ.

ಪೇಟಿಎಂನ ಮುಖ್ಯಸ್ಥ ವಿಜಯ್ ಶೇಖರ್ ಶರ್ಮಾ ಅವರ ಟ್ವೀಟ್

ಇದನ್ನೂ ಓದಿ: Paytm stocks : ಪೇಟಿಎಂನಲ್ಲಿರುವ ತನ್ನೆಲ್ಲ ಷೇರುಗಳನ್ನು ಮಾರಿದ ಚೀನಾದ ಅಲಿಬಾಬಾ ಗ್ರೂಪ್‌, ಷೇರು ದರ 9% ಕುಸಿತ

ಏನಿದು ಯುಪಿಐ ಎಲ್ಐಟಿಇ?

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ(NPCI) ಯುಪಿಐ ಎಲ್‌ಐಟಿಇ ನಿರ್ಮಾತೃ. ಈ ಸೇವೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ 2022ರ ಸೆಪ್ಟೆಂಬರ್‌ನಲ್ಲಿ ಪರಿಚಯಸಿತ್ತು. ಸಣ್ಣ ಸಣ್ಣ ವ್ಯವಹಾರಗಳನ್ನು ಸರಳೀಕರಣಗೊಳಿಸಿದ್ದು ಮಾತ್ರವಲ್ಲದೇ, ಪಾಸ್‌ಬುಕ್ ಬಳಕೆಯನ್ನು ತಗ್ಗಿಸಲಿದೆ. ಈ ಟ್ರಾನ್ಸಕ್ಷನ್‌ ಪೇಟಿಎಂ, ಹಿಸ್ಟರಿ ವಿಭಾಗದಲ್ಲಿ ಬ್ಯಾಲೆನ್ಸ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ.

Exit mobile version