ನವದೆಹಲಿ: ಡೇಲಿ ಡೇಟಾ ಹಾಗೂ ಮತ್ತಿತರ ಪ್ರಯೋಜನಗಳನ್ನು ಒದಗಿಸುವ 181 ರೂ. ಮೌಲ್ಯದ ರಿಚಾರ್ಜ್ ಪ್ಲ್ಯಾನ್‌ವನ್ನು ವೋಡಾಫೋನ್ ಐಡಿಯಾ (Vodafone Idea – Vi) ಲಾಂಚ್ ಮಾಡಿದೆ. ವೋಡಾಫೋನ್-ಐಡಿಯಾ ಸದ್ಯ 5ಜಿ ಸೇವೆಯನ್ನು ನೀಡುವುದಕ್ಕಾಗಿ ಪ್ರಯತ್ನಿಸುತ್ತಿದೆ. ಆದರೆ, ಇನ್ನೂ ಸಾಧ್ಯವಾಗುತ್ತಿಲ್ಲ. 5ಜಿ ಸೇವೆ ವಿಳಂಬದಿಂದಾಗಿ ವಿಪರೀತ ಒತ್ತಡವನ್ನು ಎದುರಿಸುತ್ತಿರುವ ಕಂಪನಿಯು, ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ನಾನಾ ಪ್ರಯತ್ನ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಹೊಸ ಪ್ಲ್ಯಾನ್‌ಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ.
ಪ್ರತಿ ಸ್ಪರ್ಧಿ ಕಂಪನಿಗಳಾದ ಜಿಯೋ ಮತ್ತು ಏರ್‌ಟೆಲ್ ಈಗಾಗಲೇ ದೇಶಾದ್ಯಂತ ವಿವಿಧ ನಗರಗಳಲ್ಲಿ 5ಜಿ ಸೇವೆಯನ್ನು ಆರಂಭಿಸಿವೆ. ಆದರೆ, ವೋಡಾಫೋನ್- ಐಡಿಯಾ ವಿಐ ಕಂಪನಿಗೆ ಇನ್ನೂ ಸಾಧ್ಯವಾಗಿಲ್ಲ. ಪರಿಣಾಮ ಚಂದಾದಾರರ ಸಂಖ್ಯೆಯಲ್ಲಿ ಗಣನೀಯ ಕಡಿಮೆಯಾಗುತ್ತಿದೆ. ಈ ಪರಿಸ್ಥಿತಿಯು ಹೀಗೆಯೇ ಮುಂದುವರಿದರೆ ಸಬ್‌ಸ್ಕ್ರೈಬರ್ಸ್ ಸಂಖ್ಯೆ 20 ಕೋಟಿಗೂ ಕಡಿಮೆಯಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಹಾಗಾಗಿ, ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವುದಕ್ಕಾಗಿ ವಿಐ ಹೊಸ ಪ್ಲ್ಯಾನ್ ಲಾಂಚ್ ಮಾಡಿದೆ.
ವಿಐ ತನ್ನ ಮೊಬೈಲ್ ರೀಚಾರ್ಜ್ ಪಟ್ಟಿಗೆ ಹೊಸ ಪ್ರಿಪೇಯ್ಡ್ ಯೋಜನೆಯನ್ನು ಯಾವುದೇ ಸದ್ದು ಗದ್ದಲ್ಲವಿಲ್ಲದೇ ಪರಿಚಯಿಸಿದೆ. ಈ ಹೊಸ ಪ್ಲ್ಯಾನ್ 181 ರೂ.ಗೆ ಲಭ್ಯವಿದೆ. ಇದು 4G ಡೇಟಾ ವೋಚರ್ ಆಗಿದ್ದು, ಹೆಚ್ಚಿನ ಇಂಟರ್ನೆಟ್ ಡೇಟಾವನ್ನು ಪಡೆಯಲು ಅಸ್ತಿತ್ವದಲ್ಲಿರುವ ಸಕ್ರಿಯ ಪ್ಲ್ಯಾನ್ ಜತೆಗೇ ಖರೀದಿಸಬಹುದಾಗಿದೆ. ಕೆಲಸ ಅಥವಾ ಮನರಂಜನೆಗಾಗಿ ಮೊಬೈಲ್ ಡೇಟಾವನ್ನು ಹೆಚ್ಚು ಅವಲಂಬಿಸಿರುವ ಬಳಕೆದಾರರಿಗಾಗಿ ವಿಐ ಈ ಪ್ಲ್ಯಾನ್ ಲಾಂಚ್ ಮಾಡಿದೆ.
ವೋಡಾಫೋನ್ 181 ರೂ. ಪ್ಲ್ಯಾನ್ ಪೂರ್ಣ ವಿವರ ಇಲ್ಲಿದೆ…
ಬಹಳಷ್ಟು ಡೇಟಾ ವೋಚರ್‌ಗಳನ್ನು ಡೇಟಾ ಜತೆಗೆ ಆಫರ್ ಮಾಡಲಾಗುತ್ತದೆ. ಅದೇ ರೀತಿ, ವಿಐ ಹೊಸದಾಗಿ ಲಾಂಚ್ ಮಾಡಿರುವ 181 ರೂ. ಮೌಲ್ಯದ ಡೇಟಾ ವೋಚರ್ ಪ್ಲ್ಯಾನ್ ಕೂಡ ಬಳಕೆದಾರರಿಗೆ ನಿತ್ಯ 1 ಜಿಬಿ ಡೇಟಾ ಒದಗಿಸುತ್ತದೆ ಮತ್ತು 30 ದಿನಗಳ ವ್ಯಾಲಿಡಿಟಿ ಇರುತ್ತದೆ. ಒಂದು ವೇಳೆ 1 ಜಿಬಿ ಡೇಟಾ ಖಾಲಿಯಾದರೆ, ಮುಂದಿನ ದಿನಕ್ಕೆ ಮತ್ತೆ ರಿಸೆಟ್ ಮಾಡಿಕೊಳ್ಳಬಹುದು.
ಸಕ್ರಿಯ ಪ್ಲ್ಯಾನ್‌ನೊಂದಿಗೆ ತಮ್ಮ ಡೇಟಾವನ್ನು ಖಾಲಿ ಮಾಡಿಕೊಳ್ಳುವವರಿಗಾಗಿ ಈ ಪ್ಲ್ಯಾನ್ ಲಾಂಚ್ ಮಾಡಲಾಗಿದೆ. ಆದ್ದರಿಂದ 181 ರೂ. ರಿಚಾರ್ಜ್ ಮಾಡಿಕೊಳ್ಳುವ ಮೂಲಕ ಗ್ರಾಹಕರು ಇನ್ನೂ ಹೆಚ್ಚಿನ 4ಜಿ ಡೇಟಾ ಲಾಭಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಇದಕ್ಕೂ ಮೊದಲು ವೋಡಾಫೋನ್ ಕೈಗೆಟುಕುವ ದರದಲ್ಲಿ ಎರಡು ಪ್ರಿಪೇಯ್ಡ್ ಪ್ಲ್ಯಾನ್‌ಗಳನ್ನು ಲಾಂಚ್ ಮಾಡಿತ್ತು. ಇವುಗಳಲ್ಲೂ ಡೇಟಾ ದೊರೆಯುತ್ತಿತ್ತು. ಜತೆಗೆ ಕಾಲಿಂಗ್ ಮತ್ತು ಎಸ್ಸೆಮ್ಮೆಸ್ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿತ್ತು. 289 ರೂ. ಮತ್ತು 429 ರೂ. ಬೆಲೆಯ ಈ ಮೊಬೈಲ್ ರೀಚಾರ್ಜ್ ಯೋಜನೆಗಳು 78 ದಿನಗಳ ವ್ಯಾಲಿಡಿಟಿಯನ್ನು ಹೊಂದಿವೆ.
ವಿಐ 289 ರೂ. ಪ್ರಿಪೇಯ್ಡ್ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ ಅನ್‌ಲಿಮಿಟೆಡ್ ಕಾಲಿಂಗ್, 4ಜಿಬಿ ಡೇಟಾ, 600 ಎಸ್ಸೆಮ್ಮೆಸ್ ಪ್ರಯೋಜನಗಳ ಜತೆಗೆ 48 ದಿನಗಳ ವ್ಯಾಲಿಡಿಟಿಯನ್ನು ಪಡೆಯಲಿದ್ದಾರೆ. ವಿಐ ಸಿಮ್ ಅನ್ನು ಎರಡನೇ ಸಿಮ್ ಆಗಿ ಬಳಸುತ್ತಿರುವ ಗ್ರಾಹಕರಿಗೆ ಈ ಪ್ಲ್ಯಾನ್ ಹೆಚ್ಚು ಉಪಯೋಗವಾಗಿದೆ.
ಇದನ್ನೂ ಓದಿ: Reliance Jio | ಜಿಯೋ, ಏರ್ಟೆಲ್‌ಗೆ ಹೆಚ್ಚಿದ ಗ್ರಾಹಕರು, ವೋಡಾಫೋನ್ ತೊರೆದರು ಬಹುತೇಕರು!
ಅದೇ ರೀತಿ, 429 ರೂ. ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ ಅನ್‌ಲಿಮಿಟೆಡ್ ಕಾಲಿಂಗ್, ನಿತ್ಯ 1000 ಎಸ್ಸೆಮ್ಮೆಸ್ ಹಾಗೂ 78 ದಿನಗ ವ್ಯಾಲಿಡಿಟಿ ದೊರೆಯಲಿದೆ. ಈ ಪ್ಲ್ಯಾನ್ ಕೂಡ ದೀರ್ಘಾವಧಿಯ ಯೋಜನೆಯು ಇಂಟರ್ನೆಟ್‌ಗಾಗಿ ವೈಫೈ ಅಥವಾ ಸೆಕೆಂಡರಿ ಸಿಮ್‌ನಂತೆ ವಿಐ ಸಿಮ್ ಬಳಸುತ್ತಿರುವ ಬಳಕೆದಾರರಿಗೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ.