Site icon Vistara News

WhatsApp Chat Lock: ವಾಟ್ಸ್ಯಾಪ್‌ನಲ್ಲಿನ್ನು ಖಾಸಗಿ ಚಾಟ್‌ಗಳನ್ನು ಲಾಕ್‌ ಮಾಡಬಹುದು! ಅದು ಹೇಗೆ?

whatsapp chat lock

ಬೆಂಗಳೂರು: ವಾಟ್ಸ್ಯಾಪ್‌ ಹೊಸ ಫೀಚರ್‌ (WhatsApp new feature) ಪರಿಚಯಿಸಿದೆ. ಇನ್ನು ಮುಂದೆ ವಾಟ್ಸ್ಯಾಪ್‌ ಬಳಕೆದಾರರು ತಮ್ಮ ಕೆಲವು ನಿರ್ದಿಷ್ಟ ಚಾಟ್‌ಗಳನ್ನು ಇನ್ಯಾರೋ ನೋಡಿಬಿಡಬಹುದು ಎಂಬ ಆತಂಕಪಡಬೇಕಿಲ್ಲ .ಆಯಾ ಚಾಟ್‌ಗಳನ್ನೇ ಲಾಕ್‌ ಮಾಡುವ ಫೀಚರ್‌ (WhatsApp Chat Lock) ಬಳಕೆದಾರರಿಗೆ ಲಭ್ಯವಾಗುತ್ತಿದೆ.

ಮಾಲಿಕ ಕಂಪನಿ ಮೆಟಾ, WhatsAppಗೆ ಈ ಹೊಸ ಫೀಚರ್‌ ಅನ್ನು ಸೇರಿಸಿದೆ. ಬಳಕೆದಾರ ಇನ್ನು ಮುಂದೆ ಪಾಸ್‌ವರ್ಡ್ ಅಥವಾ ಬಯೋಮೆಟ್ರಿಕ್ ದೃಢೀಕರಣ ಬಳಸಿಕೊಂಡು ನಿರ್ದಿಷ್ಟ ಚಾಟ್‌ಗಳನ್ನು ಲಾಕ್ ಮಾಡಬಹುದು. ಈ ಚಾಟ್‌ಗಳನ್ನು ಪ್ರತ್ಯೇಕ ಫೋಲ್ಡರ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಇದು ನೋಟಿಫಿಕೇಶನ್‌ನಲ್ಲಿ ಕೂಡ ಕಳಿಸಿದ ಮೂಲ ಮತ್ತು ಸಂದೇಶವನ್ನು ಮರೆಮಾಡುತ್ತದೆ. ಅಥೆಂಟಿಕೇಶನ್‌ ಬಳಿಕ ಮಾತ್ರ ಇದನ್ನು ಪ್ರವೇಶಿಸಬಹುದು.

ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಸಾಧನಗಳಲ್ಲಿ ಬಯೋಮೆಟ್ರಿಕ್ಸ್ ಅಥವಾ ಪಿನ್ ಬಳಸಿಕೊಂಡು ಸಂಪೂರ್ಣ WhatsApp ಅನ್ನು ಲಾಕ್ ಮಾಡುವ ಆಯ್ಕೆ ಈಗಾಗಲೇ ಇದೆ. ಆದರೆ ಈ ಹೊಸ ಫೀಚರ್‌ ಮೂಲಕ, ವಾಟ್ಸ್ಯಾಪ್‌ ತೆರೆದೇ ಇದ್ದಾಗಲೂ ನಿರ್ದಿಷ್ಟ ಖಾಸಗಿ ಚಾಟ್‌ಗಳನ್ನು ಕಾಪಾಡಬಹುದು. ಹೀಗಾಗಿ ಯಾರಾದರೂ ನಿಮ್ಮ ಫೋನ್‌ಗೆ ಅಕ್ರಮ ಪ್ರವೇಶ ಪಡೆದರೂ, ಲಾಕ್ ಮಾಡಿದ ಸಂದೇಶಗಳು ಗೌಪ್ಯವಾಗಿರುತ್ತವೆ.

WhatsApp ಈಗಾಗಲೇ ಹಲವಾರು ಭದ್ರತಾ ಫೀಚರ್‌ಗಳನ್ನು ಹೊಂದಿದೆ. ಉದಾಹರಣೆಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್, ಎನ್‌ಕ್ರಿಪ್ಟ್ ಮಾಡಿದ ಚಾಟ್ ಬ್ಯಾಕಪ್, ಕಣ್ಮರೆಯಾಗುವ ಸಂದೇಶಗಳು, ಸ್ಕ್ರೀನ್‌ಶಾಟ್ ನಿರ್ಬಂಧ ಮತ್ತು ಕೊನೆಯದಾಗಿ ನೀವು ವಾಟ್ಸ್ಯಾಪ್‌ನಲ್ಲಿದ್ದ ಸಮಯವನ್ನು ಬೇರೆಯವರು ನೋಡಲು ಸಾಧ್ಯವಾಗದಂಥ ಫೀಚರ್‌ ಇತ್ಯಾದಿ.

ಚಾಟ್‌ ಲಾಕ್‌ ಅಳವಡಿಸಿಕೊಳ್ಳುವುದು ಹೇಗೆ?

Exit mobile version