ಬೆಂಗಳೂರು: ಜನಪ್ರಿಯ ಮೆಸೇಜಿಂಗ್ ಫ್ಲ್ಯಾಟ್ಫಾರ್ಮ್ ಸೆಪ್ಟೆಂಬರ್ನಲ್ಲಿ ಅಕ್ರಮವಾಗಿದ್ದ 71.1 ಲಕ್ಷ ಅಕೌಂಟ್ಗಳನ್ನು ಬ್ಯಾನ್ (WhatsApp Account Ban) ಮಾಡಿದೆ. ಸಂಸ್ಥೆಯು ಇಂಡಿಯಾ ಮಾಸಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಮೆಟಾ ಒಡೆತನದ ವಾಟ್ಸಾಪ್ ಐಟಿ ನಿಯಮಗಳಿಗೆ ಪೂರಕವಾಗಿ ಅಕ್ರಮ ಎಂದು ಅನಿಸಿದ ಖಾತೆಗಳನ್ನು ನಿಷ್ಕ್ರಿಯಗೊಳಿಸಿದೆ. ಅದರದಲ್ಲಿ 25.7 ಲಕ್ಷ ಖಾತೆಗಳನ್ನು ಬಳಕೆದಾರರಿಂದ ಸ್ಪ್ಯಾಮ್ ವರದಿ ಬರುವ ಮೊದಲೇ ನಿಷೇಧಿಸಲಾಗಿದೆ. ಹೀಗಾಗಿ ನಿಮ್ಮ ವಾಟ್ಸ್ಆ್ಯಪ್ ಖಾತೆಗಳೂ ಐಟಿ ನಿಯಮಗಳಿಗೆ ಪೂರಕವಾಗಿದೆಯೇ ಎಂಬುದನ್ನು ಚೆಕ್ ಮಾಡಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ಖಾತೆಯೂ ಬ್ಯಾನ್ ಆಗುವುದರಲ್ಲಿ ಸಂಶಯವೇ ಇಲ್ಲ.
ಭಾರತೀಯ ಖಾತೆಯನ್ನು ‘+91’ ದೇಶದ ಕೋಡ್ ಮೂಲಕ ಗುರುತಿಸಲಾಗುತ್ತದೆ. ಇದಕ್ಕೆ ವಿರುದ್ಧವಾಗಿರುವ ಮತ್ತು ಇನ್ನಷ್ಟು ನಿಯಮಗಳನ್ನು ಪಾಲಿಸದ ಖಾತೆಗಳನ್ನು ಬಂದ್ ಮಾಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಸೆಪ್ಟೆಂಬರ್ 1, 2023 ಮತ್ತು ಸೆಪ್ಟೆಂಬರ್ 30, 2023 ರ ನಡುವೆ 71,11,000 ವಾಟ್ಸಾಪ್ ಖಾತೆಗಳನ್ನು ನಿಷೇಧಿಸಲಾಗಿದೆ. ಬಳಕೆದಾರರಿಂದ ಯಾವುದೇ ವರದಿಗಳು ಬರುವ ಮೊದಲು ಈ 25,71,000 ಖಾತೆಗಳನ್ನು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ” ಎಂದು ಅದು ಹೇಳಿದೆ.
ಬಳಕೆದಾರ-ಸುರಕ್ಷತಾ ವರದಿ’, ಬಳಕೆದಾರರ ದೂರುಗಳ ವಿವರಗಳು ಮತ್ತು ವಾಟ್ಸಾಪ್ ತೆಗೆದುಕೊಂಡ ಕ್ರಮಗಳ ಮೂಲಕ ಈ ವೇದಿಕೆಯ ದುರುಪಯೋಗವನ್ನು ತಡೆಯಲಾಗಿದೆ. ಇದು ಸ್ವಯಂಪ್ರೇರಿತ ಕ್ರಮ ಎಂದು ಮೆಟಾ ಹೇಳಿದೆ. ವರದಿಯ ಪ್ರಕಾರ, ಸೆಪ್ಟೆಂಬರ್ 1-30 ರ ನಡುವೆ ವಾಟ್ಸ್ಆ್ಯಪ್ನ ಕುಂದುಕೊರತೆ ಮೇಲ್ಮನವಿ ಸಮಿತಿಯಿಂದ ಆರು ಆದೇಶಗಳನ್ನು ಸ್ವೀಕರಿಸಿದೆ. ಎಲ್ಲಾ ಆರು ಆದೇಶಗಳನ್ನು ಅನುಸರಿಸಲಾಗಿದೆ. ಆಗಸ್ಟ್ನಲ್ಲಿ ವಾಟ್ಸಾಪ್ 74 ಲಕ್ಷ ಖಾತೆಗಳನ್ನು ನಿಷೇಧಿಸಿತ್ತು, ಮತ್ತು ಅದರಲ್ಲಿ 35 ಲಕ್ಷ ಖಾತೆಗಳನ್ನು ದೂರು ಇಲ್ಲದೆಯೇ ಬಂದ್ ಮಾಡಲಾಗಿತ್ತು.
ಇದನ್ನೂ ಓದಿ : Adani Power : ಭರ್ಜರಿ ಲಾಭದಲ್ಲಿದೆ ಅದಾನಿ ಪವರ್; ಆದಾಯ 9 ಪಟ್ಟು ಹೆಚ್ಚಳ
ಸೆಪ್ಟೆಂಬರ್ನಲ್ಲಿ ಅಕೌಂಟ್ ಸಪೂರ್ಟ್ (1,031), ನಿಷೇಧ ಮೇಲ್ಮನವಿ (7,396),ಇತರ ಸಪೋರ್ಟ್ (1,518), ಪ್ರಾಡಕ್ಟ್ ಸಪೋರ್ಟ್(370) ಮತ್ತು ಸುರಕ್ಷತೆ (127) ಸೇರಿದಂತೆ 10,442 ಬಳಕೆದಾರರ ವರದಿಗಳನ್ನು ಸ್ವೀಕರಿಸಲಾಗಿದೆ ಎಂದು ವಾಟ್ಸಾಪ್ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ. ಈ ಅವಧಿಯಲ್ಲಿ, ಸ್ವೀಕರಿಸಿದ ವರದಿಗಳ ಆಧಾರದ ಮೇಲೆ 85 ಖಾತೆಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ.
ಇನ್ಸ್ಟಾಗ್ರಾಮ್ ಸರ್ವರ್ ಬಂದ್
ಗುರುವಾರ ಸಂಜೆಯ ವೇಳೆ ವಿಶ್ವದಾದ್ಯಂತ ಇನ್ಸ್ಟಾಗ್ರಾಮ್ ಬಳಕೆದಾರರು ಮೊಬೈಲ್ ಅಪ್ಲಿಕೇಶನ್ನಲ್ಲಿ ಸರ್ವರ್ ಸಮಸ್ಯೆಗಳನ್ನು (Instagram Down) ಎದುರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಟ್ರ್ಯಾಕಿಂಗ್ ವೆಬ್ಸೈಟ್ ಡೌನ್ಡಿಟೆಕ್ಟರ್ ಕೂಡ ಈ ಮಾಹಿತಿಯನ್ನು ಸ್ಪಷ್ಟಪಡಿಸಿದೆ. ಸಂಜೆ 7 ಗಂಟೆಯಿಂದ ಪ್ರಾರಂಭಗೊಂಡ ಸಮಸ್ಯೆ ಮುಂದುವರಿದಿದೆ ಎಂದು ಬರೆಯಲಾಗಿದೆ. ಈ ಬಗ್ಗೆ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬುದಾಗಿ ಹೇಳಿದೆ. ವಿಶ್ವದಾದ್ಯಂತ ಸಾವಿರಾರು ಬಳಕೆದಾರರು ಮತ್ತು ಭಾರತದಲ್ಲಿ 150 ಕ್ಕೂ ಹೆಚ್ಚು ಬಳಕೆದಾರರು ಸಮಸ್ಯೆ ಎದುರಿಸಿರುವ ಬಗ್ಗೆ ಡೌನ್ಡಿಟೆಕ್ಟರ್ ವೆಬ್ಸೈಟ್ನಲ್ಲಿ ವರದಿ ಮಾಡಿದ್ದಾರೆ.
ಡೌನ್ಡಿಟೆಕ್ಟರ್ ಪ್ರಕಾರ, ಬಳಕೆದಾರರಲ್ಲಿ ಶೇಕಡಾ 56ರಷ್ಟು ಜನರು ಸರ್ವರ್ ಸಂಪರ್ಕ ಸಮಸ್ಯೆಗಳನ್ನು ಎದುರಿಸಿದ್ದಾರೆ. 38 ಪ್ರತಿಶತದಷ್ಟು ಜನರು ಅಪ್ಲಿಕೇಶನ್ನಲ್ಲಿ ಸಮಸ್ಯೆಗಳನ್ನು ಎದುರಿಸಿದ್ದಾರೆ. 7 ಪ್ರತಿಶತದಷ್ಟು ಜನರು ಇನ್ಸ್ಟಾಗ್ರಾಮ್ಗೆ ಲಾಗಿನ್ ಆಗುವಾಗ ಸಮಸ್ಯೆಗಳನ್ನು ಎದುರಿಸಿದ್ದಾರೆ.
ಸಮಸ್ಯೆ ಕಾಣಿಸಿಕೊಂಡ ತಕ್ಷಣ ಎಕ್ಸ್ ನಲ್ಲಿ ಪ್ರತಿಕ್ರಿಯೆಗಳು ಬರಲಾರಂಭಿಸಿದವು. ಎಕ್ಸ್ ಬಳಕೆದಾರರು ಹೀಗೆ ಬರೆದುಕೊಂಡಿದ್ದಾರೆ. “ನಾನು ಯಾರೊಂದಿಗಾದರೂ ಚಾಟ್ ಮಾಡುವಾಗ ಪ್ರತಿ ಬಾರಿಯೂ ಇನ್ಸ್ಟಾಗ್ರಾಮ್ ಏಕೆ ಸ್ಥಗಿತಗೊಳ್ಳುತ್ತದೆ. ಇನ್ನೂ ಕೆಲವರು “ಇನ್ಸ್ಟಾಗ್ರಾಮ್ ಡೌನ್ ಆಗಿರುವಾಗ ಎಲ್ಲರೂ ಟ್ವಿಟರ್ಗೆ ಬರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಕೆಲವು ಬಳಕೆದಾರರು ಇನ್ಸ್ಟಾಗ್ರಾಮ್ ಡೌನ್ ಆಗಿದೆಯೇ ಅಥವಾ ಅವುಗಳನ್ನು ಹ್ಯಾಕ್ ಮಾಡಲಾಗಿದೆಯೇ ಎಂದು ಪ್ರಶ್ನಿಸಿದರು. ” ಇನ್ಸ್ಟಾಗ್ರಾಮ್ ಮತ್ತೆ ಡೌನ್ ಆಗಿದೆ. ನಾನು ಹ್ಯಾಕ್ ಮಾಡಲಾಗಿದೆ ಎಂದು ನಾನು ತಕ್ಷಣ ಭಾವಿಸುತ್ತೇನೆ …” ಎಂದು ಎಕ್ಸ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.