ವಾಟ್ಸಾಪ್ (WhatsApp) ಮೇಸೆಜಿಂಗ್ ಆಪ್ ಅತ್ಯಂತ ಹೆಚ್ಚು ಜನಪ್ರಿಯವಾಗಿದೆ. ಆದರೆ ಇದರ ಬಳಕೆಯಲ್ಲಿ ಕೆಲವು ಮಿತಿಗಳಿತ್ತು. ಉದಾಹರಣೆಗೆ ಅತಿ ದೊಡ್ಡ ಫೈಲ್‌ಗಳನ್ನು ಕಳುಹಿಸಲು ಆಗುತ್ತಿರಲಿಲ್ಲ. ವಾಟ್ಸಾಪ್‌ನ ಹೊಸ ಅಪ್ಡೇಟ್ ( ಬಿಡುಗಡೆ ಮಾಡುತ್ತಿದೆ. ಈ ಹಿಂದೆ ಇದ್ದ ದೋಷಗಳನ್ನು ಸರಿ ಮಾಡುವ ಜತೆಗೆ ಹೊಸ ಫೀಚರ್‌ಗಳನ್ನು ನೀಡಲಾಗುತ್ತಿದೆ. ಈ ಬಗ್ಗೆ ವಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾತ್‌ಕಾರ್ಟ್ ಟ್ವೀಟ್ ಮೂಲಕ ಇದನ್ನು ಖಾತ್ರಿಗೊಳಿಸಿದ್ದಾರೆ.
ಏನಿರಲಿದೆ ಅಪ್ಡೇಟ್‌ನಲ್ಲಿ?
- ಈಗಾಗಲೇ ಟೆಲಿಗ್ರಾಂ ಹಾಗೂ ಇನ್ಸ್‌ಟಾಗ್ರಾಮ್ ಆಪ್‌ಗಳಲ್ಲಿ ಮೆಸೇಜ್‌ಗಳಿಗೆ ಎಮೊಜಿ ರಿಯಾಕ್ಷನ್ ನೀಡಬಹುದು. ಆದರೆ ವಾಟ್ಸಾಪ್‌ನಲ್ಲಿ ಇದು ಲಭ್ಯವಿರಲಿಲ್ಲ. ಹೊಸ ಅಪ್ಡೇಟ್‌ನಲ್ಲಿ ಈ ಪೀಚರ್ ನೀಡಲಾಗುತ್ತಿದೆ. ಎಮೊಜಿ ರಿಯಾಕ್ಷನ್ ಎಂದರೆ- ಯಾರಾದರೂ ಕಳುಹಿಸಿದ ಮೆಸೇಜ್‌ಗೆ ನೀವು ಕೆಲವೊಮ್ಮೆ ಎಮೋಜಿಯ ಮೂಲಕ ಪ್ರತಿಕ್ರಿಯಿಸುತ್ತೀರಿ. ಉದಾಹರಣೆಗೆ, ನಗುವ ಎಮೋಜಿ, ಕೈ ಮುಗಿಯುವುದು ಹೀಗೆ ಹಲವಾರು. ಆದರೆ ಅದು ಪ್ರತ್ಯೇಕ ಮೆಸೇಜ್ ಆಗಿ ಕಳುಹಿಸಬೇಕಿತ್ತು. ಈಗ ಹೊಸ ಅಪ್ಡೇಟ್‌ನಂತೆ ನಿಮಗೆ ಬಂದ ಮೆಸೇಜ್ ಮೇಲೆ ಕ್ಲಿಕ್ ಮಾಡಿದರೆ ಒಂದಿಷ್ಟು ಎಮೋಜಿಗಳನ್ನು ಸೂಚಿಸುತ್ತದೆ. ಅಲ್ಲಿಯೇ ನೀವು ಎಮೋಜಿಯನ್ನು ಆಯ್ಕೆ ಮಾಡಬಹುದು. ಪ್ರತ್ಯೇಕ ಮೆಸೇಜ್ ಕಳುಹಿಸುವ ಅವಶ್ಯಕತೆ ಇರುವುದಿಲ್ಲ.
- ಈಗಿರುವ ವಾಟ್ಸಾಪ್‌ನಲ್ಲಿ ಫೈಲ್‌ಗಳನ್ನು ಕಳುಹಿಸಲು 64MB ಮಿತಿಯಿತ್ತು. ಅದಕ್ಕಿಂತ ದೊಡ್ಡ ಫೈಲ್‌ಗಳನ್ನು ಕಳುಹಿಸಲು ವಾಟ್ಸಾಪ್ ಒಪ್ಪುತ್ತಿರಲಿಲ್ಲ. ಆದರೆ ಇದನ್ನು 2GB ವರಗೆ ಹೆಚ್ಚುಗೊಳಿಸಲಾಗುತ್ತಿದೆ.
- ವಾಟ್ಸಾಪ್ ಗುಂಪಿನ ಅಡ್ಮಿನ್‌ಗಳಿಗೆ ಸಿಹಿ ಸುದ್ದಿ. ಒಂದು ಗುಂಪಿನಲ್ಲಿ ಯಾರಾದರೂ ವಿವಾದಾತ್ಮಕ ಅಥವಾ ತೊಂದರೆ ಉಂಟುಮಾಡುವಂತಹ ಸಂದೇಶ ಕಳುಹಿಸಿದರೆ ಅದನ್ನು ಡಿಲೀಟ್ ಮಾಡುವ ಹಕ್ಕು ಅಡ್ಮಿನ್‌ಗೆ ಇರುತ್ತದೆ.
- ಮತ್ತೊಂದು ವಿಶೇಷ ಫೀಚರ್ ಎಂದರೆ ವಾಟ್ಸಾಪ್ ಕಾಲ್. ವಾಟ್ಸಾಪ್‌ನಲ್ಲಿ ಈಗ ಕೇಲವ 8 ಜನ ಮಾತ್ರ ಒಂದೇ ಕರೆಯಲ್ಲಿ ಸೇರಬಹುದು. ಆದರೆ ಅಪ್ಡೇಟ್ ಬಂದಮೇಲೆ ಒಟ್ಟಿಗೆ 32 ಜನ ಕರೆ ಮಾಡಬಹುದು.
- Community ಎಂಬ ಫೀಚರ್‌ನಲ್ಲಿ ಪ್ರತ್ಯೇಕ ಗುಂಪುಗಳನ್ನು ಒಟ್ಟಿಗೆ ಸೇರಿಸಿ ಒಂದೇ ಜಾಗಕ್ಕೆ ಕರೆತರಬಹುದು.
ಹೆಚ್ಚಿನ ಓದಿಗಾಗಿ: Twitterನಲ್ಲಿ ಮುಂದುವರಿದ ಪಾಲುದಾರರ ಜಗಳ: ಎಲಾನ್ ಮಸ್ಕ್ Offer Reject ಮಾಡಿದ ಸೌದಿ ರಾಜಕುಮಾರ