Site icon Vistara News

WhatsApp Split View: ಆ್ಯಂಡ್ರಾಯ್ಡ್‌ ಟ್ಯಾಬ್ಲೆಟ್‌ ಬಳಕೆದಾರರಿಗೆ ಶೀಘ್ರದಲ್ಲೇ ಸಿಗಲಿದೆ ಸ್ಪ್ಲಿಟ್‌ ವ್ಯೂ ಸೌಲಭ್ಯ

half of the whatsapp users receving spam calls from international numbers

ನವದೆಹಲಿ: ಇನ್‌ಸ್ಟಂಟ್‌ ಮೆಸೇಜಿಂಗ್‌ ಸೌಲಭ್ಯ ಒದಗಿಸುವ ವಾಟ್ಸ್‌ಆ್ಯಪ್ ನಿಯಮಿತವಾಗಿ ಹೊಸ ಹೊಸ ಫೀಚರ್‌ಗಳನ್ನು ಬಳಕೆದಾರರಿಗೆ ನೀಡುತ್ತಿದೆ. ಈಗ ಆ್ಯಂಡ್ರಾಯ್ಡ್‌ ಟ್ಯಾಬ್ಲೆಟ್‌ ಬಳಕೆದಾರರಿಗೆ ಹೊಸ ಫೀಚರ್‌ ನೀಡಲು ಮುಂದಾಗಿದೆ. ಟ್ಯಾಬ್‌ ಬಳಕೆದಾರರಿಗೆ ಶೀಘ್ರದಲ್ಲೇ ಸ್ಪ್ಲಿಟ್‌ ವ್ಯೂ (WhatsApp Split View) ಇಂಟರ್‌ಫೇಸ್‌ (ಟ್ಯಾಬ್‌ನ ಸ್ಕ್ರೀನ್‌ ಎರಡು ವಿಭಾಗಗಳಾಗಿ ವಿಂಗಡಣೆಯಾಗುವುದು) ಸೌಲಭ್ಯ ಸಿಗಲಿದೆ.

ಆರಂಭಿಕ ಹಂತದಲ್ಲಿ ಕೇವಲ ಆ್ಯಂಡ್ರಾಯ್ಡ್‌ ಟ್ಯಾಬ್ಲೆಟ್‌ ಬಳಕೆದಾರರಿಗೆ ಮಾತ್ರ ಸ್ಪ್ಲಿಟ್‌ ವ್ಯೂ ಸೌಲಭ್ಯ ಸಿಗಲಿದೆ. ಟ್ಯಾಬ್‌ ದೊಡ್ಡ ಸ್ಕ್ರೀನ್‌ ಹೊಂದಿರುವುದರಿಂದ ಬಳಕೆದಾರರು ಸ್ಪ್ಲಿಟ್‌ ವ್ಯೂ ಮೂಲಕ ಏಕಕಾಲಕ್ಕೆ ಇಬ್ಬರ ಜತೆ ಚಾಟ್‌ ಮಾಡುವುದು, ವಿಡಿಯೊ ಕಾಲ್‌ ಮಾಡುವುದು ಸೇರಿ ಹಲವು ಸೌಲಭ್ಯ ಪಡೆಯಲಿದ್ದಾರೆ. ಇದುವರೆಗೆ ಒಬ್ಬರೊಂದಿಗೆ ಚಾಟ್‌ ಮಾಡುವಾಗ ಇನ್ನೊಬ್ಬರಿಗೆ ಮೆಸೇಜ್‌ ಮಾಡಲು ‘ಬ್ಯಾಕ್‌’ ಬರಬೇಕಿತ್ತು. ಆದರೆ, ಸ್ಪ್ಲಿಟ್‌ ವ್ಯೂ ಮೂಲಕ ಏಕಕಾಲಕ್ಕೆ ಇಬ್ಬರ ಜತೆ ಏಕಕಾಲಕ್ಕೆ ಚಾಟ್‌ ಮಾಡಬಹುದಾಗಿದೆ.

ಚಾಟ್‌ಜಿಪಿಟಿ ರೀತಿ ಕೃತಕ ಬುದ್ಧಿಮತ್ತೆ (Artificial Intelligence) ಸೌಲಭ್ಯ ಇರುವ ಚಾಟ್‌ಬಾಟ್‌ಅನ್ನೂ ಶೀಘ್ರದಲ್ಲಿಯೇ ಜಾರಿಗೆ ತರುವ ಕುರಿತು ಮೆಟಾ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಇತ್ತೀಚೆಗಷ್ಟೇ ಸುಳಿವು ನೀಡಿದ್ದರು. ಇದರ ಬೆನ್ನಲ್ಲೇ ವಾಟ್ಸ್‌ಆ್ಯಪ್ ಮತ್ತೊಂದು ಫೀಚರ್‌ ಘೋಷಿಸಿದೆ. ಕಾಲ್‌ ಹಾಗೂ ಸ್ಟೇಟಸ್‌ ಟ್ಯಾಬ್‌ಗಳಲ್ಲೂ ಸ್ಪ್ಲಿಟ್‌ ವ್ಯೂ ಇರಲಿದೆ.

ಇದನ್ನೂ ಓದಿ: Murder Mystery | ಬಾಲಕಿಯ ರೇಪ್‌, ಕೊಲೆ ಕೇಸ್ ಭೇದಿಸಲು ಒಂದು ವಾಟ್ಸ್‌ಆ್ಯಪ್ ಮೆಸೇಜ್‌ ನೆರವಾಗಿದ್ದು ಹೇಗೆ?

Exit mobile version