ಹೊಸದಿಲ್ಲಿ: ಹಲವಾರು ಹಳೆಯ ಆಂಡ್ರಾಯ್ಡ್ (Android) ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸ್ಯಾಪ್ ಸದ್ಯದಲ್ಲಿಯೇ ಕಾರ್ಯನಿರ್ವಹಣೆ ನಿಲ್ಲಿಸಲಿದೆ.
ಇತ್ತೀಚಿನ ಪ್ರಕಟಣೆಯಲ್ಲಿ WhatsApp ಅಕ್ಟೋಬರ್ 24ರ ನಂತರ ಆಂಡ್ರಾಯ್ಡ್ ಆವೃತ್ತಿ 4.1 (Android OS version 4.1) ಮತ್ತು ಅದಕ್ಕಿಂತ ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯಾಚರಣೆ ನಿಲ್ಲಿಸುವುದಾಗಿ ತಿಳಿಸಿದೆ.
ಬಳಕೆದಾರರ ಅನುಭವ, ಖಾಸಗಿತನ ಮತ್ತು ಸುರಕ್ಷತೆಯನ್ನು ಸುಧಾರಿಸಲು WhatsApp ನಿಯಮಿತವಾಗಿ ತನ್ನ ಆಫ್ ಅನ್ನು ಹೊಸ ಫೀಚರ್‌ಗಳು ಮತ್ತು ಸೆಕ್ಯುರಿಟಿ ವ್ಯವಸ್ಥೆಗಳೊಂದಿಗೆ ನವೀಕರಿಸುತ್ತದೆ. Android, iOS ಮತ್ತು ವೆಬ್ ಸೇರಿದಂತೆ ಎಲ್ಲಾ WhatsApp ಆವೃತ್ತಿಗಳು ಹೊಸ ಆಪರೇಟಿಂಗ್ ಸಿಸ್ಟಮ್‌ಗಳಿಗೆ ಹೊಂದಿಕೊಳ್ಳಲು ಪ್ರತಿ ತಿಂಗಳು ಹೊಸ ಅಪ್‌ಡೇಟ್‌ಗಳನ್ನು ಸ್ವೀಕರಿಸುತ್ತವೆ. ಇದರೊಂದಿಗೆ, ಹಳೆಯ ಕೆಲವು ಆಪರೇಟಿಂಗ್ ಸಿಸ್ಟಮ್‌ಗಳಿಗೆ ಸಪೋರ್ಟ್ ತೆಗೆದುಹಾಕುತ್ತದೆ.
“ಏನನ್ನು ಬೆಂಬಲಿಸುವುದನ್ನು ನಿಲ್ಲಿಸಬೇಕು ಎಂಬುದನ್ನು ಆಯ್ಕೆ ಮಾಡಲು,
ʼʼಪ್ರತಿ ವರ್ಷ ನಾವು ಇತರ ಟೆಕ್ ಕಂಪನಿಗಳಂತೆ, ಯಾವ ಸಾಧನಗಳು ಮತ್ತು ಸಾಫ್ಟ್‌ವೇರ್ ಹಳೆಯದು ಮತ್ತು ಅವುಗಳನ್ನು ಎಷ್ಟು ಜನ ಇನ್ನೂ ಬಳಸುತ್ತಿದ್ದಾರೆ ಎಂಬುದನ್ನು ನೋಡುತ್ತೇವೆ. ಈ ಸಾಧನಗಳು ಇತ್ತೀಚಿನ ಸೆಕ್ಯುರಿಟಿ ವ್ಯವಸ್ಥೆಗಳನ್ನು ಹೊಂದಿಲ್ಲ. ಅಥವಾ ಅವುಗಳಲ್ಲಿ ಇರಬಹುದು ವಾಟ್ಸ್ಯಾಪ್ ನಡೆಸಲು ಅಗತ್ಯವಿರುವ ಕ್ರಿಯಾಶೀಲತೆಯ ಕೊರತೆಯಿದೆ” ಎಂದು WhatsApp ತಿಳಿಸಿದೆ.
Android OS ಆವೃತ್ತಿ 4.1 ಮತ್ತು ಅದಕ್ಕಿಂತ ಹಳೆಯದಾದ ಕೆಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಕೆಲಗೆ ನೀಡಲಾಗಿದೆ. ಇವುಗಳಲ್ಲಿ ಅಕ್ಟೋಬರ್ 24ರ ನಂತರ ವಾಟ್ಸ್ಯಾಪ್ ಸಿಗುವುದಿಲ್ಲ.
ನೆಕ್ಸಸ್ 7 (ಆಂಡ್ರಾಯ್ಡ್ 4.2ಗೆ ಅಪ್‌ಗ್ರೇಡ್ ಮಾಡಬಹುದು)
ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 2
ಎಚ್‌ಟಿಸಿ ಒನ್
ಸೋನಿ ಎಕ್ಸ್‌ಪೀರಿಯಾ ಝಡ್
ಎಲ್ಜಿ ಆಪ್ಟಿಮಸ್ ಜಿ ಪ್ರೊ
ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್2
ಸ್ಯಾಮ್ಸಂಗ್ ಗ್ಯಾಲಾಕ್ಸಿ ನೆಕ್ಸಸ್
ಎಚ್‌ಟಿಸಿ ಸೆನ್ಸೇಶನ್
ಮೊಟರೋಲಾ ಡ್ರಾಯ್ಡ್ ರೇಝರ್
ಸೋನಿ ಎಕ್ಸ್‌ಪೀರಿಯಾ ಎಸ್2
ಮೋಟರೋಲಾ ಜೂಮ್
ಸ್ಯಾಮ್ಸಂಗ್ ಗ್ಯಾಲಾಕ್ಸಿ ಟ್ಯಾಬ್ 10.1
ಏಸಸ್ ಈ ಪ್ಯಾಡ್ ಟ್ರಾನ್ಸ್ಫಾರ್ಮರ್
ಏಸರ್ ಐಕೋನಿಯಾ ಟ್ಯಾಬ್ ಎ5003
ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್
ಎಚ್‌ಟಿಸಿ ಡಿಸೈರ್ ಎಚ್‌ಡಿ
ಎಲ್‌ಜಿ ಒಪ್ಟಿಮಸ್ 2ಎಕ್ಸ್
ಸೋನಿ ಎರಿಕ್ಸನ್ ಎಕ್ಸ್‌ಪೀರಿಯಾ ಆರ್ಕ್3
ಈ ಪಟ್ಟಿಯಲ್ಲಿರುವ ಹೆಚ್ಚಿನ ಫೋನ್‌ಗಳು ಇಂದು ಹೆಚ್ಚಿನ ಜನರು ಬಳಸದ ಹಳೆಯ ಮಾದರಿಗಳಾಗಿವೆ. ಆದಾಗ್ಯೂ ನೀವು ಇನ್ನೂ ಈ ಫೋನ್‌ಗಳಲ್ಲಿ ಒಂದನ್ನು ಹೊಂದಿದ್ದರೆ, ನೀವು ಹೊಸ ಸಾಧನಕ್ಕೆ ಅಪ್‌ಗ್ರೇಡ್ ಮಾಡಬೇಕಾದೀತು. ಏಕೆಂದರೆ ವಾಟ್ಸ್ಯಾಪ್ ಮಾತ್ರವಲ್ಲದೆ ಇತರ ಹಲವು ಆ್ಯಪ್‌ಗಳು ಕೂಡ ಈ ಹಳತಾದ ಆಪರೇಟಿಂಗ್ ಸಿಸ್ಟಂಗಳಿಗೆ ತಮ್ಮ ಬೆಂಬಲವನ್ನು ನಿಲ್ಲಿಸುತ್ತಿವೆ. ಜತೆಗೆ ಸೆಕ್ಯುರಿಟಿ ಅಪ್‌ಡೇಟ್ ಕೂಡ ಇಲ್ಲದ್ದರಿಂದ ನಿಮ್ಮ ಫೋನ್ ಸೈಬರ್ ಬೆದರಿಕೆಗಳಿಗೆ ಗುರಿಯಾಗಬಹುದು.
ನಿಮ್ಮ ಸ್ಮಾರ್ಟ್‌ಫೋನ್ Android OS ಆವೃತ್ತಿ 4.1 ಅಥವಾ ಅದಕ್ಕಿಂತ ಹಳೆಯದಾ ಎಂದು ನಿಮಗೆ ಖಚಿತವಿಲ್ಲದಿದ್ದರೆ, ನಿಮ್ಮ ಸಾಧನದಲ್ಲಿನ ಸೆಟ್ಟಿಂಗ್‌ಗಳ ಮೆನುವನ್ನು ಪರಿಶೀಲಿಸಬಹುದು. ಸೆಟ್ಟಿಂಗ್‌ಗಳು > ಅಬೌಟ್ ಫೋನ್ > ಸಾಫ್ಟ್‌ವೇರ್ ಮಾಹಿತಿಗೆ ಹೋಗಿ. ಅದರಲ್ಲಿ ನಿಮ್ಮ Android ಆವೃತ್ತಿ ನಮೂದಿಸಿರುತ್ತದೆ.
WhatsApp ಕಾರ್ಯಾಚರಣೆ ನಿಲ್ಲಿಸಿದರೆ?
ವಾಟ್ಸ್ಯಾಪ್ ಬಳಕೆದಾರರಿಗೆ ಮುಂಚಿತವಾಗಿ ತಿಳಿಸುತ್ತದೆ ಮತ್ತು ಅಪ್‌ಗ್ರೇಡ್ ಮಾಡಲು ಹಲವು ಬಾರಿ ನೆನಪಿಸುತ್ತದೆ. ಗ್ಯಾಜೆಟ್ ಅನ್ನು ನವೀಕರಿಸದಿದ್ದರೆ WhatsApp ಮುಂದೆ ಆ ಸಾಧನದಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಬಳಕೆದಾರರು ಸಂದೇಶ ಕಳುಹಿಸಲು ಅಥವಾ ಸ್ವೀಕರಿಸಲು, ಕರೆ ಮಾಡಲು ಅಥವಾ ಸ್ವೀಕರಿಸಲು ಸಾಧ್ಯವಿಲ್ಲ.
WhatsApp ಯಾವುದರಲ್ಲೆಲ್ಲಾ ಲಭ್ಯ?
ಅಕ್ಟೋಬರ್ 24ರ ನಂತರ WhatsApp ಅನ್ನು ಬೆಂಬಲಿಸುವ ಸಾಫ್ಟ್‌ವೇರ್ ಇರುವ ಗ್ಯಾಜೆಟ್‌ಗಳ ಪಟ್ಟಿ ಇಲ್ಲಿದೆ.
- Android OS ಆವೃತ್ತಿ 5.0 ಮತ್ತು ಹೊಸದು
- ಐಒಎಸ್ 12 ಮತ್ತು ಹೊಸದರಲ್ಲಿ ಚಾಲನೆಯಲ್ಲಿರುವ ಐಫೋನ್
- JioPhone ಮತ್ತು JioPhone 2 ಸೇರಿದಂತೆ KaiOS 2.5.0 ಮತ್ತು ಹೊಸದು