Site icon Vistara News

WhatsApp AI: WhatsAppಗೂ ಬಂತು ಎಐ; ನಿಮ್ಮ ಪ್ರೊಫೈಲ್‌ ಫೋಟೊ ಇನ್ನು AI ಜನರೇಟೆಡ್!‌

WhatsApp AI

WhatsApp will soon let you create AI-based profile photos, new beta update shows

ನವದೆಹಲಿ: ಮೆಟಾ ಒಡೆತನದ ವಾಟ್ಸ್‌ಆ್ಯಪ್‌ (WhatsApp) ನಿಯಮಿತವಾಗಿ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರಿಗೆ ನೂತನ ಅನುಭವ, ಸೌಕರ್ಯಗಳನ್ನು ನೀಡುತ್ತದೆ. ಈಗ ವಾಟ್ಸ್‌ಆ್ಯಪ್‌ ಮತ್ತೊಂದು ಫೀಚರ್‌ ಬಿಡುಗಡೆ ಮಾಡಲಿದ್ದು, ಗ್ರಾಹಕರ ಡಿಪಿ ಅಥವಾ ಪ್ರೊಫೈಲ್‌ ಫೋಟೊಗಳು (Profile Photo) ಇನ್ನು ಎಐ ಜನರೇಟೆಡ್‌ (ಕೃತಕ ಬುದ್ಧಿಮತ್ತೆ) (WhatsApp AI) ಆಗಲಿವೆ. ಇತ್ತೀಚೆಗಷ್ಟೇ ಎಐ ಸ್ಟಿಕ್ಕರ್‌ಗಳನ್ನು (ಎಮೋಜಿ) ಪರಿಚಯಿಸಿದ್ದ ವಾಟ್ಸ್‌ಆ್ಯಪ್‌ ಈಗ ಮತ್ತೊಂದು ಫೀಚರ್‌ ಮುಂದಿಡುತ್ತಿದೆ.

ವಾಟ್ಸ್‌ಆ್ಯಪ್‌ ಫೀಚರ್‌ಗಳ ಕುರಿತು ವಿಶ್ವಾಸಾರ್ಹ ಮಾಹಿತಿ ನೀಡುವ ಡಬ್ಲ್ಯೂಎ ಬೀಟಾ ಇನ್ಫೋ ಈ ಕುರಿತು ಮಾಹಿತಿ ನೀಡಿದೆ. ವಾಟ್ಸ್‌ಆ್ಯಪ್‌ ಬಳಕೆದಾರರು ಆ್ಯಪ್‌ನಲ್ಲಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ತಂತ್ರಜ್ಞಾನದ ಮೂಲಕ ತಮ್ಮ ಪ್ರೊಫೈಲ್‌ ಫೋಟೊ ಸೆಟ್‌ ಮಾಡಬಹುದಾಗಿದೆ. ಐಎ ಆಧಾರಿತ, ಬಳಕೆದಾರರ ವ್ಯಕ್ತಿತ್ವ, ಆಸಕ್ತಿ ಅಥವಾ ಮನಸ್ಸಿನ ಸ್ಥಿತಿ (Mood) ಆಧಾರದ ಮೇಲೆ ಹೊಸ ಪ್ರೊಫೈಲ್‌ ಫೋಟೊ ಕ್ರಿಯೇಟ್‌ ಮಾಡಬಹುದಾಗಿದೆ ಎಂದು ಡಬ್ಲ್ಯೂಎ ಬೀಟಾ ಇನ್ಫೋ ಮಾಹಿತಿ ನೀಡಿದೆ.

employee attacked the boss and broke the iPhone for removing him from the WhatsApp group

ವಾಟ್ಸ್‌ಆ್ಯಪ್‌ ಈಗ ಬೀಟಾ ವರ್ಷನ್‌ನಲ್ಲಿ (ನಿಯಮಿತ ಬಳಕೆದಾರರಿಗೆ ಅಪ್‌ಡೇಟೆಡ್‌ ವರ್ಷನ್‌ ಆ್ಯಪ್‌ ಬಳಸಲು ಕೊಟ್ಟು, ಅವರ ಅಭಿಪ್ರಾಯ ಸಂಗ್ರಹಿಸುವುದು) ಅಪ್‌ಡೇಟ್‌ ಆಗಿರುವ ಅಪ್ಲಿಕೇಶನ್‌ ಬಿಡುಗಡೆ ಮಾಡಿದೆ. ಆ್ಯಂಡ್ರಾಯ್ಡ್‌ ಬಳಕೆದಾರರಿಗೆ ಹೊಸ ಫೀಚರ್‌ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಅನಗತ್ಯವಾದ, ಅನ್‌ರೀಡ್‌ (Unread) ಮೇಸೇಜ್‌ಗಳನ್ನು ಅಳಿಸಿ ಹಾಕುವುದು ಸೇರಿ ಹಲವು ಫೀಚರ್‌ಗಳನ್ನೂ ಶೀಘ್ರದಲ್ಲೇ ಪರಿಚಯಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಒರಿಜಿನಲ್‌ ಫೋಟೊ ಬೇಕಾಗಿಲ್ಲ

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ವಾಟ್ಸ್‌ಆ್ಯಪ್‌ ಪ್ರೊಫೈಲ್‌ ಫೋಟೊ ಕ್ರಿಯೇಟ್‌ ಮಾಡಲು ಒರಿಜಿನಲ್‌ ಫೋಟೊಗಳನ್ನು ಬಳಸಬೇಕಿಲ್ಲ. ಆಯಾ ವ್ಯಕ್ತಿಯ ಮನಸ್ಥಿತಿ, ಖುಷಿ, ದುಃಖವನ್ನು ಅಭಿವ್ಯಕ್ತಪಡಿಸುವ ರೀತಿಯಲ್ಲಿ ಕೃತಕ ಬುದ್ಧಿಮತ್ತೆ ಮೂಲಕ ಪ್ರೊಫೈಲ್‌ ಫೋಟೊ ತಯಾರಿಸಬಹುದಾಗಿದೆ. ಹಾಗೆಯೇ, ಬಳಕೆದಾರರ ಖಾಸಗಿತನವನ್ನು ಕಾಪಾಡಲು ವಾಟ್ಸ್‌ಆ್ಯಪ್‌ ಆದ್ಯತೆ ನೀಡಿದೆ. ಯಾರದ್ದೋ ವ್ಯಕ್ತಿಯ ಒರಿಜಿನಲ್‌ ಫೋಟೊ ಬಳಸಿ, ಎಐ ಮೂಲಕ ಇಮೇಜ್‌ ಕ್ರಿಯೇಟ್‌ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವುದನ್ನು ನಿಗ್ರಹಿಸುವ ತಂತ್ರಜ್ಞಾನ ಹೊಂದಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Fake News: ವಾಟ್ಸ್‌ಆ್ಯಪ್‌ನಲ್ಲಿ ಸಿಕ್ಕಿದ್ದೆಲ್ಲ ಫಾರ್ವರ್ಡ್‌ ಮಾಡಿದರೆ 3 ವರ್ಷ ಜೈಲು; ಹೊಸ ಕಾನೂನು ಬಗ್ಗೆ ಇರಲಿ ಎಚ್ಚರಿಕೆ

Exit mobile version