Site icon Vistara News

Chinese Smartphones | ಭಾರತದಲ್ಲಿ ಚೀನಾ ಸ್ಮಾರ್ಟ್‌ಫೋನ್‌ಗಳ ಬ್ಯಾನ್? ಕೇಂದ್ರ ಹೇಳುವುದೇನು?

China Phone

ನವದೆಹಲಿ: ಚೀನಾದ ಉತ್ಪನ್ನಗಳಿಗೆ ಭಾರತವು ಬಹುದೊಡ್ಡ ಮಾರುಕಟ್ಟೆಯಾಗಿದೆ. ಅದರಲ್ಲೂ, ಸ್ಮಾರ್ಟ್‌ಫೋನ್‌ಗಳಿಗೆ (Chinese Smartphones) ಬೃಹತ್‌ ಮಾರುಕಟ್ಟೆಯಾಗಿದೆ. ಹೀಗಿರುವಾಗ, ದೇಶದಲ್ಲಿ ಚೀನಾದ ೧೨ ಸಾವಿರ ರೂ.ಗಿಂತ ಕಡಿಮೆ ಬೆಲೆ ಇರುವ ಮೊಬೈಲ್‌ಗಳನ್ನು ನಿಷೇಧ ಮಾಡಲಾಗುತ್ತದೆ ಎಂಬ ವದಂತಿ ಹರಡಿದೆ. ಆದರೆ, ಇದನ್ನು ಕೇಂದ್ರ ಸರಕಾರವು ನಿರಾಕರಿಸಿದೆ.

“ಭಾರತದಲ್ಲಿ ದೇಶೀಯವಾಗಿ ಸ್ಮಾರ್ಟ್‌ಫೋನ್‌ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತದೆ ಎಂಬ ಮಾತ್ರಕ್ಕೆ ಚೀನಾದ ಮೊಬೈಲ್‌ಗಳನ್ನು ನಿಷೇಧಿಸಲಾಗುತ್ತದೆ ಎಂದು ಅರ್ಥವಲ್ಲ. ನೆರೆರಾಷ್ಟ್ರದ ಸ್ಮಾರ್ಟ್‌ಫೋನ್‌ಗಳನ್ನು ನಿಷೇಧಿಸುವ ಯಾವುದೇ ಪ್ರಸ್ತಾಪ ಕೇಂದ್ರ ಸರಕಾರದ ಮುಂದಿಲ್ಲ” ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ.

ಕೇಂದ್ರ ಸರಕಾರವು ಈಗಾಗಲೇ ಚೀನಾದ ಹಲವು ಬ್ರ್ಯಾಂಡ್‌ಗಳ ಮೇಲೆ ನಿಗಾ ಇರಿಸಿದೆ. ವಿವೊ, ಒಪ್ಪೊ ಸೇರಿ ಹಲವು ಬ್ರ್ಯಾಂಡ್‌ಗಳ ಕಂಪನಿಗಳ ಮೇಲೆ ಇತ್ತೀಚೆಗೆ ಇ.ಡಿ ದಾಳಿ ನಡೆಸಿತ್ತು. ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪದಲ್ಲಿ ದಾಳಿ ನಡೆಸಲಾಗಿತ್ತು. ಇದರ ಬೆನ್ನಲ್ಲೇ ಚೀನಾದ ಸ್ಮಾರ್ಟ್‌ಫೋನ್‌ಗಳನ್ನು ನಿಷೇಧಿಸಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು.

ಇದನ್ನೂ ಓದಿ | iPhone 14 | ಭಾರತದಲ್ಲಿ ಐಫೋನ್ 14 ಉತ್ಪಾದನೆ, ಚೀನಾಗೆ ಭಾರೀ ಹಿನ್ನಡೆ!

Exit mobile version